ಮೂರು ದಿನ ಮಾಧ್ಯಮಗಳ ಜೊತೆ ಮಾತನಾಡಲ್ಲ ಎಂದ ಸಚಿವ ಈಶ್ವರಪ್ಪ : ಕಾರಣವೇನು ಗೊತ್ತೆ???? ಈ ಸುದ್ದಿ ನೋಡಿ

ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಬಲವಾಗಿ ಒತ್ತಾಯಿಸುತ್ತಿದೆ. ಈ ಮಧ್ಯೆ ಮಾಧ್ಯಮಗಳ ಜೊತೆ ಮೂರು ದಿನ ಮಾತನಾಡದಿರಲು ಅವರು ತೀರ್ಮಾನಿಸಿದ್ದಾರೆ. 

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಪಸ್ ಆಗುವ ವೇಳೆ ಮಾಧ್ಯಮದವರು ಸಚಿವರ ಪ್ರತಿಕ್ರಿಯೆಗೆ ಮುಂದಾದರು. 

ಆಗ ಸಚಿವರು ಮಾಧ್ಯಮದವರನ್ನು ಕಂಡು ನಾನು 3 ದಿನ ನಿಮ್ಮ ಜೊತೆ ಮಾತನಾಡಬಾರದು ಎಂದು ತೀರ್ಮಾನಿಸಿದ್ದೇನೆ ಎಂದರು. ಈ ವೇಳೆ ಮಾಧ್ಯಮದವರು ಯಾಕೆ ಸಾರ್? ಎಂದು ಕೇಳಿದ್ದಕ್ಕೆ ನಗು ಮೊಗದಿಂದಲೇ ಯಾಕೆ ಅಂತಲೂ ಹೇಳಬಾರದು ಎಂದು ನಿರ್ಧರಿಸಿರುವೆ ಎಂದು ಹೇಳಿ ಹೊರಟು ಹೋದರು.

ಕಾಂಗ್ರೆಸ್ ಕಾರ್ಯಕರ್ತರ ವಶ:

ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಜೊತೆಗೆ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಸಚಿವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಅವರನ್ನು ತಡೆದ ಪೊಲೀಸರು ಕೆಲವರನ್ನು ವಶಕ್ಕೆ ಪಡೆದರು.

Leave a Reply

Your email address will not be published. Required fields are marked *