Headlines

ಮಳೆಯಿಂದ ಹಾನಿಯಾದ ಕುಟುಂಬಗಳನ್ನು ಭೇಟಿ ಮಾಡಿದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು.

 

 
ಸಾಗರ : ತಾಲೂಕಿನ ಹೊಸೂರು ಗ್ರಾಮ ಪಂಚಾಯತಿಯ ನೆದರವಳ್ಳಿ ಗ್ರಾಮದ ವೀರೇಂದ್ರ ಗೌಡ್ರು ಹಾಗೂ ಚಿದಾನಂದ ಗೌಡರ ಕೊಟ್ಟಿಗೆ ಮನೆ  ನಿನ್ನೆ ಬಂದ ಗಾಳಿ ಮಳೆಯ ಆರ್ಭಟಕ್ಕೆ ಹಾನಿಗೊಳಗಾಗಿತ್ತು.

ಇಂದು ಸ್ಥಳಕ್ಕೆ ಮಾಜಿ ಶಾಸಕರು ಹಾಗೂ ಕೆಪಿಸಿಸಿ ವಕ್ತಾರರಾದ ಬೇಳೂರು ಗೋಪಾಲಕೃಷ್ಣರವರು ಭೇಟಿ ನೀಡಿದರು ಸ್ಥಳ ಪರಿಶೀಲಿಸಿದ  ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.


 ಈ ಸಂದರ್ಭದಲ್ಲಿ ಸಾಗರ ನಗರಸಭೆಯ ವಿರೋಧ ಪಕ್ಷದ ನಾಯಕರಾದ ಗಣಪತಿ ಮಂಡಗಳಲೆ ಗ್ರಾಮ ಪಂಚಾಯಿತಿಯ ಸದಸ್ಯರಾದ ಆನಂದ ಐಗಿನಬೈಲು, ನಾಗರತ್ನ ಹಾಗೂ ಚುನಾಯಿತ ಪ್ರತಿನಿಧಿಗಳು ಮತ್ತು ಊರಿನ ಗ್ರಾಮಸ್ಥರು ಹಾಜರಿದ್ದರು.

About The Author

Leave a Reply

Your email address will not be published. Required fields are marked *