POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಸಾಗರದ ಬಿಜೆಪಿ ಮುಖಂಡ ಅನುಮಾನಾಸ್ಪದವಾಗಿ ಸಾವು

ಸಾಗರ: ಬಿಜೆಪಿ ಬೂತ್ ಕಮಿಟಿ ಅಧ್ಯಕ್ಷನೋರ್ವ ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಮರತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.

ಶಿರೂರು ಆಲಳ್ಳಿ ವಾಸಿಯಾದ ಬಿಜೆಪಿ ಬೂತ್ ಕಮಿಟಿ ಅಧ್ಯಕ್ಷ ಅಣ್ಣಪ್ಪ ಅವರು ನಗರದ ಹೆಲಿಪ್ಯಾಡ್ ಬಳಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಸಾವಿನ ಹಿಂದೆ ಹತ್ತು ಹಲವಾರು ಅನುಮಾನಗಳು ಮೂಡಿದೆ.

ಸಾಗರ ಉಪ ವಿಭಾಗದ ಎಎಸ್‌ಪಿ ರೋಹನ್ ಜಗದೀಶ್, ಸಾಗರ ಗ್ರಾಮಾಂತರ ಠಾಣೆಯ ಸಿಪಿಐ ಗಿರೀಶ್, ಅಪರಾಧ ವಿಭಾಗದ ಸುಜಾತ, ಶಿವಮೊಗ್ಗ ಪೊಲೀಸ್ ಶ್ವಾನ ದಳ, ಬೆರಳಚ್ಚುಗಾರರ ತಂಡ ಸ್ಥಳಕ್ಕೆ ಭೇಟಿ ನೀಡಿ, ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.