Headlines

ವಿದ್ಯಾರ್ಥಿಗಳು ಬಜೆಟ್ ವಿಶ್ಲೇಷಣೆ ಮಾಡುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು : ಪ್ರೋ.ಚಂದ್ರಶೇಖರ್.ಟಿ

ರಿಪ್ಪನ್ ಪೇಟೆ : ಇಲ್ಲಿನ  ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾಣಿಜ್ಯ ಶಾಸ್ತ್ರ ವಿಭಾಗ, ನಿರ್ವಹಣಾ ಶಾಸ್ತ್ರ ವಿಭಾಗ ಮತ್ತು ಅರ್ಥಶಾಸ್ತ್ರ ವಿಭಾಗದ ವತಿಯಿಂದ ಕರ್ನಾಟಕ ರಾಜ್ಯ ಅಯವ್ಯಯ -2022 ದ ನೇರವಿಕ್ಷಣೆ ಮತ್ತು ವಿಶ್ಲೇಷಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಂಶುಪಾಲರಾದ ಶ್ರೀ ಚಂದ್ರಶೇಖರ.ಟಿ ರವರು ವಿದ್ಯಾರ್ಥಿಗಳು ಬಜೆಟ್ ವಿಶ್ಲೇಷಣೆ ಮಾಡುವ ಕೌಶಲ್ಯವನ್ನು ಬೆಳೆಸಿಕೊಂಡರೆ ರಾಜ್ಯದ ವಸ್ತು ಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಸಾಮಾರ್ಥ್ಯವನ್ನು ಪಡೆದುಕೊಳ್ಳುತ್ತಾರೆ ಎಂದು ಹೇಳಿದರು.


ರಾಜ್ಯ ಬಜೆಟ್ ನ ಗಾತ್ರ, ವಿಭಾಗವಾರು ಹಂಚಿಕೆ,ಹೊಸ ಕಾರ್ಯಕ್ರಮಗಳ ಘೋಷಣೆ, ಯೋಜನಾ ಮತ್ತು ಯೋಜನೇತರ ವೆಚ್ಚ, ಸಂಪನ್ಮೂಲ ಕ್ರೋಢೀಕರಣ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.


ಕಾರ್ಯಕ್ರಮದಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ದೇವರಾಜ್.ಆರ್, ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ರವೀಶ್.ಎನ್.ಎಸ್ ಮತ್ತು ಸಹಾಯಕ ಪ್ರಾಧ್ಯಾಪಕರಾದ ಕಿರಣ್ ತಿಮ್ಮಪ್ಪ ತೆಲುಗಾರ್, ಚಿರಂಜೀವಿ.ವಿ.ಬಿ ,ಶಿಲ್ಪಾ ಪಾಟೀಲ್,ಶಂಕರ್.ಎಂ, ರಾಕೇಶ್.ಸಿ, ವೀರನಗೌಡ ಹುಡೇದ್, ಶ್ರೀಹರಿ.ಎಸ್.ವಿ, ಆಯಿಶಾ ಸೇರಿದಂತೆ ಹಲವು ಪ್ರಾಧ್ಯಾಪಕರುಗಳು ಹಾಜರಿದ್ದರು.

Leave a Reply

Your email address will not be published. Required fields are marked *