w
Headlines
Home » ಜಿಲ್ಲಾ ಹಿಂದುಳಿದ ವರ್ಗ ಅಧಿಕಾರಿ ಕುಮಾರ್ ಹುಚ್ಚುತನಕ್ಕೆ ಬಲಿಪಶುಗಳಾದ ಮಹಿಳಾ ಅಡುಗೆಯವರು: ಹಣ್ಣು ತಿಂದವರಿಗಿಂತ ಸಿಪ್ಪೆ ತಿಂದವರಿಗೆ ಶಿಕ್ಷೆಯಾದ ಆನಂದಪುರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ಹಾಸ್ಟೆಲಿನಲ್ಲಿ ನಡೆದ ರೋಚಕ ಸ್ಟೋರಿ

ಜಿಲ್ಲಾ ಹಿಂದುಳಿದ ವರ್ಗ ಅಧಿಕಾರಿ ಕುಮಾರ್ ಹುಚ್ಚುತನಕ್ಕೆ ಬಲಿಪಶುಗಳಾದ ಮಹಿಳಾ ಅಡುಗೆಯವರು: ಹಣ್ಣು ತಿಂದವರಿಗಿಂತ ಸಿಪ್ಪೆ ತಿಂದವರಿಗೆ ಶಿಕ್ಷೆಯಾದ ಆನಂದಪುರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ಹಾಸ್ಟೆಲಿನಲ್ಲಿ ನಡೆದ ರೋಚಕ ಸ್ಟೋರಿ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಸಿದ್ದೇಶ್ವರ ಕಾಲೊನಿಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಹಾಸ್ಟೆಲ್ ವಾರ್ಡನ್ ಮಮತಾ ವಿದ್ಯಾರ್ಥಿಗಳಿಗೆ ನೀಡಿದ ಮೂವತ್ತು ಕ್ಕೂ ಹೆಚ್ಚು ಬೆಡ್ ಶೀಟ್ ಗಳನ್ನು ಬಚ್ಚಿಟ್ಟಿದ್ದರು.ಇದರಿಂದ ಮನನೊಂದ ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿ ಅವ್ಯವಹಾರ ನಡೆದಿದೆಯೆಂದು ಬಂದಂತಹ ಜನಪ್ರತಿನಿಧಿಗಳೆದರು  ದೂರಿದ್ದರು ಜನ ಜನಪ್ರತಿನಿಧಿಗಳ ಎದುರು ವಿದ್ಯಾರ್ಥಿಗಳು ಹಾಸ್ಟೆಲ್ ನ ವಾರ್ಡನ್ ಮಮತಾ ವಿರುದ್ಧ ಹಲವು ದೂರುಗಳನ್ನು ನೀಡಿದ್ದರು. ಬೆಡ್ ಶೀಟ್ ಗಳನ್ನು ಕಳೆದ 1ವರ್ಷದಿಂದ ನೀಡಿಲ್ಲ ಹಾಗೂ ಬಕೆಟ್ ಹಾಗೂ ಜಗ್ಗು ಗಳನ್ನು ನೀಡಿಲ್ಲ ಹಾಗೂ ಐವತ್ತು ವಿದ್ಯಾರ್ಥಿಗಳಿಗೆ ಕೇವಲ 1ಲೀಟರ್ ಹಾಲು ತರಿಸಿ ಟಿ ನೀಡುತ್ತಿದ್ದಾರೆ ಹಾಗೂ ಇನ್ನಿತರ ಭ್ರಷ್ಟಾಚಾರದ ಆರೋಪವನ್ನು ಮಾಡಿದ್ದರು.ಇಂದು ಆನಂದಪುರದ ಹಾಸ್ಟೆಲ್ ಗೆ ಭೇಟಿ ನೀಡಿದ ಹಿಂದುಳಿದ ವರ್ಗಗಳ ಶಿವಮೊಗ್ಗ ಕಲ್ಯಾಣಾಧಿಕಾರಿ ಕುಮಾರ್ ವಿದ್ಯಾರ್ಥಿಗಳ ಮಾತನ್ನು ಕೇಳಿ ತಪ್ಪು ಮಾಡಿದ ವಾರ್ಡನ್ ಮಮತಾ ವಿರುದ್ಧ ಕ್ರಮ ಕೈಗೊಳ್ಳುವ ಬದಲು ತನ್ನಲ್ಲಿ ಕೆಲಸ ಮಾಡುತ್ತಿರುವ ಅಮಾಯಕ ಅಡುಗೆ ಸಿಬ್ಬಂದಿಗಳಿಗೆ ಕ್ರಮ ಕೈಗೊಂಡಿದ್ದಾರೆ.


ವಾರ್ಡನ್ ನನ್ನು ಬಿಟ್ಟು ಅಡುಗೆ ಸಿಬ್ಬಂದಿಗಳು ನಾಳೆಯಿಂದ ಸಾಗರದ ಹಾಸ್ಟೆಲ್ ಗೆ ಹೋಗಿ ಇಲ್ಲಿ ನೀವು ಅಡುಗೆ ಮಾಡುವುದು ಬೇಡ ಅಲ್ಲಿನ ಸಿಬ್ಬಂದಿಗಳು ಇಲ್ಲಿಗೆ ಬಂದು ಅಡುಗೆ ಮಾಡುತ್ತಾರೆ  ಎಂದು ಮೌಖಿಕವಾಗಿ ಹೇಳಿದ್ದಾರೆ.ಇದು ನಿಜವಾಗಿಯೂ ಅಮಾನವೀಯ ಕುಮಾರ್ ಗೆ ನಿಜವಾಗಿಯೂ ಮಾನವೀಯತೆ ಇದ್ದರೆ ತಪ್ಪು ಮಾಡಿದ ಅಧಿಕಾರಿಯನ್ನು ಶಿಕ್ಷಿಸುವುದು ಬಿಟ್ಟು ಏನೂ ತಿಳಿಯದ ಅಡುಗೆಯವರ ಮೇಲೆ ಕ್ರಮ ಕೈಗೊಳ್ಳುತ    ಮೊನ್ನೆ ಸುದ್ದಿಮಾಧ್ಯಮಗಳಲ್ಲೂ ಬಿತ್ತರವಾದಾಗ ಹಾಸ್ಟೆಲ್ ವಿದ್ಯಾರ್ಥಿನಿಯರು ಹಾಸ್ಟೆಲ್ ವಾರ್ಡನ್ ನ ಮೇಲೆ ದೂರಿದ್ದಾರೆ ಹೊರತು ಅಡುಗೆಯವರ ಮೇಲೆ ಒಂದೂ ಮಾತು ಕೂಡ ಆಡಲಿಲ್ಲ ಆದರೂ ಈ ಅಧಿಕಾರಿ ಅಡುಗೆಯವರನ್ನು ಬದಲಾಯಿಸುತ್ತಿರುವ ಹಿಂದಿನ ಮರ್ಮವೇನು ಹಾಗಾದರೆ ಈ ವ್ಯಕ್ತಿ ಯಾವುದೋ ಆಮಿಷಕ್ಕೆ ಬಲಿಯಾದರಾ ಎನ್ನುವಂತಹ ಪ್ರಶ್ನೆ ಇದೀಗ ಸಾರ್ವಜನಿಕರಲ್ಲಿ ಮೂಡುತ್ತಿದೆ.

ಕಳೆದ 2 ಬಾರಿ ಹಾಸ್ಟೆಲ್ ವಾರ್ಡನ್ ಮಮತಾ ಮೇಲೆ ಕೆಲವು ಆರೋಪಗಳು ಬಂದಾಗ  ಇದೇ ಅಧಿಕಾರಿ ಇವರನ್ನು ಬಚಾವ್ ಮಾಡಿದ್ದರು ಹಾಗಾದರೆ ಭ್ರಷ್ಟ ವಾರ್ಡನ್ ಗೆ ಅಧಿಕಾರಿಯೇ ಬೆಂಗಾವಲಾಗಿ ನಿಂತಿದ್ದಾರೆಯೇ ಎನ್ನುವಂತಹ ಆರೋಪಗಳು ಇದೀಗ ಹೆಚ್ಚಾಗಿ ಕೇಳಿಬರುತ್ತಿದೆ.

ಸಾಗರದ ಶಾಸಕರಾಗಿರುವ ಹರತಾಳು ಹಾಲಪ್ಪನವರು ಇವೆಲ್ಲ ಅಂಶಗಳನ್ನು ಗಮನಿಸಲೇಬೇಕು ಅಮಾಯಕ ಅಡುಗೆಯವರ ಮೇಲೆ ಅಧಿಕಾರ ಚಲಾಯಿಸುತ್ತಿರುವ ಅಧಿಕಾರಿಗೂ ಈ ದಂಧೆಯಲ್ಲಿ ಪಾಲಿತ್ತ ಎನ್ನುವುದರ ಬಗ್ಗೆ ಕೂಲಂಕುಶವಾಗಿ ತನಿಖೆ ನಡೆಸಬೇಕು.

ಅಮಾಯಕ ಅಡುಗೆಯವರಿಗೆ ಅನ್ಯಾಯವಾಗದಂತೆ ಮಾನ್ಯ ಶಾಸಕರು ಗಮನ ಹರಿಸ ಬೇಕು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.