Headlines

ಮಾಜಿ ಶಾಸಕ ಬೇಳೂರು ಗೋಪಾಲ ಕೃಷ್ಣರವರ ಹುಟ್ಟು ಹಬ್ಬದ ಅಂಗವಾಗಿ ಮಾನವೀಯತೆ ಮರೆದ ಅಭಿಮಾನಿ ಬಳಗ.

ಹೊಸನಗರ ತಾಲ್ಲೂಕಿನ ನಿಟ್ಟೂರು ಸಮೀಪದ ಗ್ರಾಮ ಪಂಚಾಯಿತಿಯ ಮಾವಿನ ಗುಡ್ಡದಲ್ಲಿ ಹಲವು ವರ್ಷಗಳಿಂದ ಮೇಲ್ಛಾವಣಿ ಇಲ್ಲದೆ ಸಂಪೂರ್ಣ ದುರಸ್ಥಿಯಾದ ಚಿಕ್ಕ ಮನೆಯಲ್ಲಿ ವಾಸವಾಗಿದ್ದ,  ವೃದ್ಧ ದಂಪತಿಗಳಿಗೆ ಇಂದು ಕೆಪಿಸಿಸಿ ವಕ್ತಾರರು, ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರ ಜನ್ಮದಿನದ ಅಂಗವಾಗಿ ಗೋಪಾಲಕೃಷ್ಣ ಬೇಳೂರು ರವರ ಅಭಿಮಾನಿ ಬಳಗದಿಂದ ಇಂದು ಮೇಲ್ಛಾವಣಿ ಹಾಕಿಕೊಡಲಾಯಿತು. 


ಮಕ್ಕಳಿಲ್ಲದ ವೃದ್ಧ ದಂಪತಿಗಳಾದ ತಿಮ್ಮಪ್ಪ ಮತ್ತು ಚೌಡಮ್ಮ  ಬೇರೆಯವರ ಹೊಲ ಗದ್ದೆಗಳಲ್ಲಿ ದುಡಿಯುವ ಮೂಲಕ ತಮ್ಮ ದಿನ ನಿತ್ಯದ ಬದುಕಿಗೆ ಅವಶ್ಯಕತೆ ಇರುವ ಆಹಾರ ಪದಾರ್ಥಗಳ ವ್ಯವಸ್ಥೆ ಮಾಡಿಕೊಳ್ಳ ಬೇಕಾಗಿದೆ. ಇದನ್ನು ಕಂಡ ಗೋಪಾಲ ಕೃಷ್ಣ ಬೇಳೂರು ಅಭಿಮಾನಿ ಬಳಗದವರು ಮನೆಯ ಮೇಲ್ಛಾವಣಿಯು ಸಂಪೂರ್ಣ  ದುರಸ್ತಿ ಆಗಿದ್ದನ್ನು ಕಂಡು ಮೇಲ್ಚಾವಣಿ ಹಾಕಿಕೊಟ್ಟರಲ್ಲದೆ ವೃದ್ಧ ದಂಪತಿಗಳಿಗೆ ಧನಸಹಾಯ ಮಾಡಿದರು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ವಿಶ್ವನಾಥ, ಬರುವೆ ಮಂಜಣ್ಣ, ನಿಟ್ಟೂರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ನಾಗೇಂದ್ರ ಜೋಗಿ, ಗ್ರಾಮ ಪಂಚಾಯತಿ ಸದಸ್ಯ ಶೋಭಾ ಉದಯ್, ಉದಯ್, ಪ್ರಕಾಶ್ ಶೆಟ್ಟಿ, ಸಣ್ಣಕ್ಕಿ ಮಂಜು, ಸುದೀಪ್.ಬಿ.ಸಿ,  ಗೋಪಿನಾಥ್ ಜಯನಗರ, ತ್ರಿಭುವನ್, ವಕೀಲರು ಬಸರಾಜ್ ಗಗ್ಗಾ, ಪ್ರಭು ಸೇರಿದಂತೆ  ಸಮಸ್ತ ಕಾಂಗ್ರೆಸ್ ಘಟಕ ನಿಟ್ಟೂರು ಹಾಗೂ ಸಮಸ್ತ ಗ್ರಾಮಸ್ಥರು ಬೇಳೂರು ಗೋಪಾಲ ಕೃಷ್ಣ ಅಭಿಮಾನಿ ಬಳಗ ಅನೇಕರು ಹಾಜರಿದ್ದರು.


ವರದಿ : ಪುಷ್ಪಾ ಜಾಧವ್

Leave a Reply

Your email address will not be published. Required fields are marked *