w
Headlines
Home » ಶವವಾಗಿ ಪತ್ತೆಯಾದ ಪ್ರಕಾಶ್ ಟ್ರಾವೆಲ್ಸ್ ಮಾಲೀಕ : ಸತತ ಮೂರು ದಿನಗಳ ಕಾರ್ಯಾಚರಣೆ ನಂತರ ಪತ್ತೆ

ಶವವಾಗಿ ಪತ್ತೆಯಾದ ಪ್ರಕಾಶ್ ಟ್ರಾವೆಲ್ಸ್ ಮಾಲೀಕ : ಸತತ ಮೂರು ದಿನಗಳ ಕಾರ್ಯಾಚರಣೆ ನಂತರ ಪತ್ತೆ

ಸಾಗರದ ಪ್ರಕಾಶ್ ಟ್ರಾವೆಲ್ಸ್ ಮಾಲಿಕ ಪ್ರಕಾಶ್ ರವರ ಶವ ಕೊನೆಗೂ ಪಟಗುಪ್ಪ ಹೊಳೆಯಲ್ಲಿ  ಪತ್ತೆಯಾಗಿದೆ.


ಕಳೆದ ಶುಕ್ರವಾರ ಸಂಜೆ ನಾಪತ್ತೆಯಾಗಿದ್ದ ಪ್ರಕಾಶ್,ಶನಿವಾರ ಅವರ ಮೊಬೈಲ್ ಹಾಗೂ ಕಾರು ಪಟಗುಪ್ಪೆ ಸೇತುವೆ ಬಳಿ ಪತ್ತೆಯಾಗಿದ್ದವು.ಕೂಡಲೇ ಕ್ಷಿಪ್ರ ಕಾರ್ಯಾಚರಣೆಗಿಳಿದಿದ್ದ ಅಗ್ನಿಶಾಮಕದಳ ಹಾಗೂ ಮುಳುಗು ತಜ್ಞರಿಂದ ಶೋಧ ಕಾರ್ಯ ನಡೆದಿತ್ತು.ಆದರೆ ಮೂರು ದಿನ ಸತತವಾಗಿ ಶೋಧ ಕಾರ್ಯ ನಡೆಸಿದರು ಪತ್ತೆಯಾಗಿರಲಿಲ್ಲ.

ಸೋಮವಾರ ಬೆಳ್ಳಗ್ಗೆ ಪ್ರಕಾಶ್ ಅವರ ಶವ ಪಟಗುಪ್ಪೆ ಹೊಳೆಯಲ್ಲಿಯೇ ಪತ್ತೆಯಾಗಿದೆ.

ಅವರ ಹಿತೈಷಿಗಳು ಮತ್ತು ಕುಟುಂಬಸ್ಥರು ಈ ಪ್ರಕರಣದ ಹಿಂದೆ ಹಲವು ಅನುಮಾನಗಳು ಕಾಡುತ್ತಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. 
ಒಟ್ಟಾರೆ ಪೋಲೀಸರ ಸಮರ್ಪಕ ತನಿಖೆಯಿಂದಷ್ಟೇ ಸತ್ಯಾ ಸತ್ಯತೆ ಹೊರಬರಬೇಕಿದೆ.

ಮಲೆನಾಡಿನ ಪ್ರತಿಷ್ಠಿತ ಉದ್ಯಮಿ ಕಾಫ಼ಿ ಡೇ ಸಿದ್ದಾರ್ಥ್ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ಸಾವಿರಾರು ಕಾರ್ಮಿಕರಿಗೆ ಅನ್ನದಾತರಾಗಿದ್ದ ಪ್ರಕಾಶ್ ರವರ ಆತ್ಮಹತ್ಯೆ ಬೇಸರ ತರಿಸುತ್ತಿದೆ.



Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.