w
Headlines
Home » ಪ್ರಕಾಶ್ ಬಸ್ ಮಾಲೀಕರ ಶೋಧ ಕಾರ್ಯಾಚರಣೆ : ಕಾಫ಼ಿ ಡೇ ಸಿದ್ದಾರ್ಥ ಪ್ರಕರಣ ಮರುಕಳಿಸುವ ಆತಂಕದಲ್ಲಿ ಮಲೆನಾಡಿಗರು..!!!!!

ಪ್ರಕಾಶ್ ಬಸ್ ಮಾಲೀಕರ ಶೋಧ ಕಾರ್ಯಾಚರಣೆ : ಕಾಫ಼ಿ ಡೇ ಸಿದ್ದಾರ್ಥ ಪ್ರಕರಣ ಮರುಕಳಿಸುವ ಆತಂಕದಲ್ಲಿ ಮಲೆನಾಡಿಗರು..!!!!!

ಶುಕ್ರವಾರ ಸಂಜೆ ಸಾಗರದಿಂದನಾಪತ್ತೆಯಾಗಿದ್ದ ಸಾಗರದ ಪ್ರಖ್ಯಾತ ಟ್ರಾವೆಲ್ಸ್ ಕಂಪನಿ ಮಾಲೀಕರಾದ ಪ್ರಕಾಶ್ ರವರ ಕಾರು, ಮೊಬೈಲ್ ಮತ್ತು ಕನ್ನಡಕ ಹೊಸನಗರ ಸಮೀಪದ ಪಟಗುಪ್ಪೆ ಸೇತುವೆ ಮೇಲೆ ಪತ್ತೆಯಾಗಿರುವ  ಹಿನ್ನಲೆಯಲ್ಲಿ ಪ್ರಕಾಶ್ ರವರ ಪತ್ತೆಗಾಗಿ ಅಗ್ನಿಶಾಮಕ ದಳ ತನ್ನ ಶೋಧಕಾರ್ಯವನ್ನು ಎರಡನೇ ದಿನಕ್ಕೆ ಮುಂದುವರೆಸಿದೆ.

ಸೊರಬದಿಂದ ಒಬಿಎಂ ಬೋಟ್ ನ್ನು ತರಿಸಲಾಗಿದ್ದು ನಾಲ್ವರು ಬೋಟ್ ನಲ್ಲಿ ಶೋಧಕಾರ್ಯದಲ್ಲಿ ತೊಡಗಿದ್ದಾರೆ. ಸ್ಥಳೀಯ ಮೀನುಗಾರರು ತೆಪ್ಪ ತಂದು ಅದರಲ್ಲಿ ಶೋಧಕಾರ್ಯದಲ್ಲಿ ತೊಡಗಿದ್ದಾರೆ.

ರಾಜ್ಯದಲ್ಲಿಯೇ ಅತೀ ಉದ್ದದ ಸೇತುವೆಯಾದ ಪಟಗುಪ್ಪ ಸೇತುವೆ ಇತ್ತೀಚೆಗಷ್ಟೇ ಉಧ್ಘಾಟನೆಯಾಗಿತ್ತು.

ಈ ಸೇತುವೆಯಿಂದ ಎಡಕ್ಕೆ ಮತ್ತು ಬಲ ಭಾಗಕ್ಕೆ ಸುಮಾರು 2 ರಿಂದ 3 ಕಿಮಿ ದೂರ  ಈಗಾಗಲೆ ಶೋಧ ಕಾರ್ಯ ನಡೆದಿದೆ. ಆದರೆ ಯಾವುದೆ ರೀತಿಯಲ್ಲಿ ಪ್ರಕಾಶ್ ರವರ ಸುಳಿವು ಸಿಗುತ್ತಿಲ್ಲ. ಹೀಗಾಗಿ ಅಗ್ನಿಶಾಮಕ ದಳದವರಿಗೆ ಈ ಒಂದು  ಪ್ರಕರಣ ಬಹಳಷ್ಟು ಕ್ಲಿಷ್ಟಕರವಾಗಿದೆ.

ಸ್ಥಳದಲ್ಲಿ ಈಗ ಪೊಲೀಸ್ ಸಿಬ್ಬಂದಿಗಳು ಹಾಗೂ ಅಗ್ನಿಶಾಮಕ ದಳದವರು ಬೀಡುಬಿಟ್ಟಿದ್ದು ಜಂಟಿ ಕಾರ್ಯಾಚರಣೆಯಲ್ಲಿ  ಅಗ್ನಿಶಾಮಕ ದಳದವರು ಶತಗತಾಯ  ಪ್ರಯತ್ನ ನಡೆಸುತ್ತಿದ್ದಾರೆ.




Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.