Headlines

ಅನಗತ್ಯ ಬಾಕ್ಸ್ ಚರಂಡಿ ನಿರ್ಮಾಣಕ್ಕೆ ವಿರೋಧ :

ರಿಪ್ಪನ್ ಪೇಟೆ : ಇಲ್ಲಿಯ ಗ್ರಾಮ ಪಂಚಾಯಿತಿ ಮುಂಭಾಗದ ಹಾಸ್ಟೆಲ್ ರಸ್ತೆಯಲ್ಲಿ ಈ ಹಿಂದೆ ವಿಶ್ವ ಯೋಜನೆಯನ್ವಯ ಮಾಡಿರುವ ಚಪ್ಪಡಿ ಕಲ್ಲಿನಲ್ಲಿ ನಿರ್ಮಾಣಗೊಂಡ ಭದ್ರವಾದ ಚರಂಡಿಯನ್ನು ತೆಗೆದು ಹೊಸ ಬಾಕ್ಸ್ ಚರಂಡಿ ಮಾಡಲು ಹೊರಟಿರುವ ಗ್ರಾಮ ಪಂಚಾಯಿತಿ ವಿರುದ್ಧ ಸಾಮಾಜಿಕ ಹೋರಾಟಗಾರ ಟಿ. ಆರ್ .ಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿ ಸ್ಥಳದಲ್ಲಿಯೇ ಧರಣಿ ನಡೆಸಿದರು.  ಹಿಂದಿನ ಗ್ರಾಮಪಂಚಾಯಿತಿ ಅವಧಿಯಲ್ಲಿ ಅಂದು ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಈಗ ಹಾಲಿ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ  ಮಹಾಲಕ್ಷ್ಮಿ ಅಣ್ಣಪ್ಪ ಇವರು ತಮ್ಮ ವಿವೇಚನಾ…

Read More

ಸಮಾಜ ಕಲ್ಯಾಣ ಇಲಾಖೆಯಿಂದ ಪಿಯುಸಿ ಪದವಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 35000 ಸಾವಿರ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ:

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯಿಂದ ಪಿಯುಸಿ ಪದವಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 35000 ಸಾವಿರ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.   ನಮ್ಮಲ್ಲಿ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆರ್ಥಿಕ ಪರಿಸ್ಥಿತಿಯಿಂದಾಗಿ ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇ ಬಿಡುತ್ತಾರೆ. ಹೀಗಾಗಿ ಆರ್ಥಿಕ ಪರಿಸ್ಥಿತಿಯಿಂದ ಮಕ್ಕಳ ಶಿಕ್ಷಣ ಬಿಡಬಾರದೆಂದು ಕರ್ನಾಟಕ ಸಮಾಜ ಕಲ್ಯಾಣ ವತಿಯಿಂದ ಸರ್ಕಾರವು ಪ್ರತಿಭಾವಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ. ಅಧ್ಯಯನಕ್ಕೆ ಪ್ರೋತ್ಸಾಹಧನವನ್ನು ವಿಂಗಡಿಸಲಾಗಿದೆ. ಪಿಯುಸಿ ಮತ್ತು ಡಿಪ್ಲೋಮೋ : 20000/- ಯಾವುದೇ ಪದವಿ…

Read More

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡರ ಹೆಸರನ್ನು ಇಡಲು ಆಗ್ರಹ:

ರಿಪ್ಪನ್ ಪೇಟೆ: ಶಿವಮೊಗ್ಗದಲ್ಲಿ ಉದ್ಘಾಟನೆಗೆ ಸಿದ್ದವಾಗಿರುವ ನೂತನ ವಿಮಾನ ನಿಲ್ದಾಣಕ್ಕೆ ಕರ್ನಾಟಕದಿಂದ ಆಯ್ಕೆಯಾಗಿ ದೇಶದ ಪ್ರಧಾನಿಯಾಗಿ ರಾಜ್ಯದ ಕೀರ್ತಿಯನ್ನು ಇಡೀ ದೇಶಕ್ಕೆ ಪರಿಚಯಿಸಿದ ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡರ ಹೆಸರನ್ನು  ಇಡಬೇಕೆಂದು ಮಾನ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಶಿವಮೊಗ್ಗ ಸಂಸದರಾದ ಬಿ ವೈ ರಾಘವೇಂದ್ರ ರವರಿಗೆ ರಾಜ್ಯ ಜೆಡಿಎಸ್ ಮಾಜಿ ಪ್ರಧಾನಕಾರ್ಯದರ್ಶಿಗಳಾದ ಅರ್ ಎ ಚಾಬುಸಾಬ್ ಒತ್ತಾಯಿಸಿದ್ದಾರೆ. .                     …

Read More

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಅಣ್ಣಾಮಲೈ ನೇಮಕ::

ನವದೆಹಲಿ: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು, ತಮಿಳುನಾಡು ಬಿಜೆಪಿ ಅಧ್ಯಕ್ಷನಾಗಿ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರನ್ನು ಗುರುವಾರ ನೇಮಿಸಿದ್ದಾರೆ. ಈ ಬಗ್ಗೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ನೇಮಕಾತಿ ಪತ್ರವನ್ನು ತಮಿಳುನಾಡು ಬಿಜೆಪಿಗೆ ರವಾನಿಸಿದ್ದಾರೆ. 2024 ರ ಲೋಕಸಭಾ ಚುನಾವಣೆಗೆ ಮುನ್ನ ತಮಿಳುನಾಡಿನಲ್ಲಿ ಪಕ್ಷವನ್ನು ಬಲಪಡಿಸಲು ಬಿಜೆಪಿ ಬುಧವಾರ ಪಕ್ಷದ ರಾಜ್ಯ ಅಧ್ಯಕ್ಷರಾಗಿದ್ದ ಎಲ್. ಮುರುಗನ್ ಅವರನ್ನು ಕೇಂದ್ರ ಸಚಿವಾಲಯದ ರಾಜ್ಯ ಸಚಿವರನ್ನಾಗಿ ನೇಮಿಸಿತ್ತು. ಅವರಿಗೆ ಮಾಹಿತಿ ಮತ್ತು…

Read More

ಮೂಗೂರು ಏತ ನೀರಾವರಿಗೆ ಸಂಬಂಧಿಸಿದ ಎಲ್ಲಾ ಕೆರೆಗಳ ಸಮಿತಿ ರಚನೆ ಕುರಿತು ಸಭೆ:

ಸೊರಬ: ತಾಲೂಕಿನ ಆನವಟ್ಟಿ ಪದವಿಪೂರ್ವ ಕಾಲೇಜು ರಂಗಮಂದಿರದಲ್ಲಿ ಮಾನ್ಯ ಶಾಸಕರಾದ ಶ್ರೀ ಎಸ್ ಕುಮಾರ್ ಬಂಗಾರಪ್ಪ ರವರ ಅಧ್ಯಕ್ಷತೆಯಲ್ಲಿ ಮೂಗೂರು ಏತನೀರಾವರಿಗೆ ಸಂಬಂಧಿಸಿದ ಎಲ್ಲಾ ಕೆರೆಗಳ ಸಮಿತಿ ರಚನೆ ಕುರಿತು ಸಭೆ ನಡೆಯಿತು. ಈ ಸಂಧರ್ಭದಲ್ಲಿ ತಹಶಿಲ್ದಾರ ಗ್ರೇಡ್ 2 ರವರು, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಆನವಟ್ಟಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು, ದಂಡಾವತಿ AEE ರವರು ಹಾಗೂ ಸಿಬ್ಬಂದಿ ವರ್ಗ, MI AEE ರವರು, AEE PRED ರವರು, ಪಿಡಿಒ , ರಾಜಸ್ತ ನಿರೀಕ್ಷಕರು ಮೂಗೂರು…

Read More

ನಾಳೆಯಿಂದ ಅರಸಾಳು ಮಾಲ್ಗುಡಿ ಮ್ಯೂಸಿಯಂ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ::

ರಿಪ್ಪನ್ ಪೇಟೆ: ಲಾಕ್ ಡೌನ್ ಸಡಿಲಿಕೆಯಿಂದಾಗಿ ಅರಸಾಳು ರೈಲ್ವೆ ನಿಲ್ದಾಣದಲ್ಲಿರುವ ಮಾಲ್ಗುಡಿ ಮ್ಯೂಸಿಯಂ ಪುನರಾರಂಭಗೊಳ್ಳಲಿದೆ.ಶಂಕರ್ ನಾಗ್ ನಟಿಸಿ ನಿರ್ದೇಶಿಸಿರುವ, ಆರ್ ಕೆ ನಾರಾಯಣ್ ಅವರ ಕೃತಿ ಆಧಾರಿತ ಮಾಲ್ಗುಡಿ ಡೇಸ್ ಧಾರವಾಹಿ, ಅರಸಾಳು ರೈಲ್ವೆ ನಿಲ್ದಾಣದಲ್ಲಿ ಚಿತ್ರೀಕರಣವಾಗಿತ್ತು ಹಾಗಾಗಿ ಅರಸಾಳು ರೈಲ್ವೆ ನಿಲ್ದಾಣದಲ್ಲಿ ಮಾಲ್ಗುಡಿ ಮ್ಯೂಸಿಯಂ ನಿರ್ಮಿಸಲಾಗಿತ್ತು.  ಮಾಲ್ಗುಡಿ ಡೇಸ್ ಧಾರಾವಾಹಿಯ ನೆನಪುಗಳನ್ನು ಕಲೆ ಹಾಕುತ್ತಿರುವ ಮಾಲ್ಗುಡಿ ಮ್ಯೂಸಿಯಂನನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದರು.‌ ಕೋವಿಡ್ ಕಾರಣದ ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿನಿಂದ ಬಂದ್ ಆಗಿದ್ದ…

Read More

ಬಸವಾಪುರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಿಸರ ಜಾಗೃತಿ ಆಂದೋಲನ ಕಾರ್ಯಕ್ರಮ::

ರಿಪ್ಪನ್ ಪೇಟೆ:ಇಲ್ಲಿಗೆ ಸಮೀಪದ ಬಸವಾಪುರ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ,ಅರಣ್ಯ ಇಲಾಖೆ, ಹಾಗೂ ಸ್ಥಳೀಯ ದೇವಸ್ಥಾನ ಸಮಿತಿಯವರ ಸಂಯುಕ್ತ ಆಶ್ರಯದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪರಿಸರದ ಅಳಿವು-ಉಳಿವು  ಮುಂದಿನ ಪೀಳಿಗೆಗೆ ಪರಿಸರ ಅಗತ್ಯತೆ ಏನು? ಎಂಬುದರ ಬಗ್ಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ತಿಳಿಸಿಕೊಡಲಾಯಿತು. ಈ ಸಮಾರಂಭದಲ್ಲಿ ಗ್ರಾ.ಪಂ.ಸದಸ್ಯರಾದ ದೇವರಾಜ್,  ಶಾಂತಕುಮಾರಿ, ಒಕ್ಕೂಟದ ಅಧ್ಯಕ್ಷರಾದ ಅಶೋಕ್, ವಲಯ ಮೇಲ್ವಿಚಾರಕ ನಾಗೇಶ್, ಸೇವಾ ಪ್ರತಿನಿಧಿ ವಸಂತ , ಅರಣ್ಯ…

Read More

ರಿಪ್ಪನ್ ಪೇಟೆ ರೋಟರಿ ಸಂಸ್ಥೆಯ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ::”ಸಮಾಜ ಸೇವೆಯಿಂದ ನೆಮ್ಮದಿಯ ಬದುಕು ಸಾಧ್ಯ “:::ಜೈ ವಿಠಲ್

ರಿಪ್ಪನ್ ಪೇಟೆ :ಸಮಾಜ ಸೇವೆಯ ಮೂಲಕ ಮಾನವ ತನ್ನ ಬದುಕಿನಲ್ಲಿ ಶಾಂತಿ  ಮತ್ತು ನೆಮ್ಮದಿಯನ್ನು ಕಂಡು ಕೊಳ್ಳಬಹುದು ಎಂದು ರೋಟರಿ ಜಿಲ್ಲಾ ೩೧೮೨ ರ ಡಿಸ್ಟ್ರಿಕ್ಟ್ ಇಂಟಾರಾಕ್ಟ್ ಛೇರ್ಮನ್  ಪಿ.ಹೆಚ್.ಎಪ್.ಕೆ.ಎಸ್ ಜೈ ವಿಠಲ್ ಹೇಳಿದರು. ಪಟ್ಟಣದ ಜಿ.ಎಸ್.ಬಿ. ಕಲ್ಯಾಣಮಂದಿರದಲ್ಲಿ ಬುಧವಾರ ಸಂಜೆ  ಆಯೋಜಿಸಿದ್ದ ರಿಪ್ಪನ್ ಪೇಟೆ ರೋಟರಿ ಸಂಸ್ಥೆಯ  ೨೦೨೧-೨೦೨೨ ರ ಪದಾಧಿಕಾರಿಗಳ ಪದವಿ ಸ್ವೀಕಾರ  ಸಮಾರಂಭದಲ್ಲಿ ಪದವಿ  ಪ್ರಧಾನ ಮಾಡಿ  ಮಾತನಾಡಿದ ಅವರು ರೋಟರಿ ಸಂಸ್ಥೆ ಅಂತರ್ ರಾಷ್ಟ್ರೀಯ ಸಂಸ್ಥೆಯಾಗಿದ್ದು ಇದರ ಸ್ಥಾಪನೆಯ  ಮೂಲ ಉದ್ದೇಶ…

Read More

ಮೋದಿ ಸಂಪುಟದಲ್ಲಿ ಕರ್ನಾಟಕದ ಸಚಿವರು, ಖಾತೆಗಳ ವಿವರ:

ಬೆಂಗಳೂರು, ಜುಲೈ 08; ಪ್ರಧಾನಿ ನರೇಂದ್ರ ಮೋದಿ ಸಂಪುಟ ವಿಸ್ತರಣೆ ಮಾಡಿದ್ದಾರೆ. ಹಲವು ಸಚಿವರನ್ನು ಕೈ ಬಿಟ್ಟಿದ್ದು 43 ಸಚಿವರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಸಂಪುಟದ ಸಚಿವರ ಒಟ್ಟು ಸಂಖ್ಯೆ 77ಕ್ಕೆ ಏರಿಕೆಯಾಗಿದೆ. ಕರ್ನಾಟಕದ ನಾಲ್ವರು ಪ್ರಧಾನಿ ಮೋದಿ ಸಂಪುಟವನ್ನು ಸೇರಿದ್ದಾರೆ. ಬುಧವಾರ ಸಂಜೆ ಪ್ರಮಾಣ ವಚನ ಸಮಾರಂಭ ನಡೆದಿದೆ, ಖಾತೆಗಳ ಹಂಚಿಕೆಯೂ ರಾತ್ರಿ ಮುಗಿದಿದೆ. ಹೊಸದಾಗ ಸೇರ್ಪಡೆಗೊಂಡ ಎಲ್ಲರಿಗೂ ರಾಜ್ಯ ಸಚಿವರಾಗಿದ್ದಾರೆ. ಮೋದಿ ಸರ್ಕಾರ್ 2.0: ಯಾರಿಗೆ ಯಾವ ಖಾತೆ? ಮೋದಿ ಸರ್ಕಾರ್ 2.0: ಯಾರಿಗೆ ಯಾವ…

Read More

ಸಿಎಂ ತವರೂರು ಶಿಕಾರಿಪುರದಲ್ಲಿ ರೈತ ಕಳೆನಾಶಕ ಸೇವಿಸಿ ಆತ್ಮಹತ್ಯೆ:

ಶಿಕಾರಿಪುರ: ಸಾಲಬಾಧೆಯಿಂದ ಮಾನಸಿಕವಾಗಿ ಕುಂದಿದ್ದ ರೈತ ಕಳೆ ನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಕಾರಿಪುರ ತಾಲೂಕು ಸುರಗಿಹಳ್ಳಿ ಯಲ್ಲಿ ಘಟನೆ ನಡೆದಿದೆ.  ಚಂದ್ರಪ್ಪ ಆತ್ಮಹತ್ಯೆ ಮಾಡಿಕೊಂಡ ರೈತ. ಜೂನ್ 5 ರಂದು ಮನೆಯಲ್ಲಿ ಕಳೆನಾಶಕವನ್ನು ಸೇವಿಸಿದ್ದರು. ಶಿಕಾರಿಪುರ ಆಸ್ಪತ್ರೆಗೆ ಸೇರಿಸಿದರೂ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಚಂದ್ರಪ್ಪ ಮೃತ ಪಟ್ಟಿದ್ದಾರೆ.  ಜಮೀನಿನಲ್ಲಿ ಶುಂಠಿ ಮೆಕ್ಕೆಜೋಳ ಬೆಳಗಿದ್ದರು. ಇದಕ್ಕಾಗಿ ಸಹಕಾರಿ ಸಂಘ, ಬ್ಯಾಂಕ್, ಹಾಗೂ ಕೈಗಡ ಸಾಲ ಪಡೆದಿದ್ದರು. ಆದರೆ ಬೆಳೆ…

Read More