w
Headlines
Home » ಕ್ಷುಲ್ಲಕ ಕಾರಣಕ್ಕೆ ಪದವಿ ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು

ಕ್ಷುಲ್ಲಕ ಕಾರಣಕ್ಕೆ ಪದವಿ ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು

ಕೊಪ್ಪ: ಇಲ್ಲಿನ ಪ್ರಥಮ ಧರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಸುಮಾ (20)  ಸೋಮವಾರ ಬೆಳಿಗ್ಗೆ ಕುದುರೆಗುಂಡಿಯಲ್ಲಿರುವ ಮನೆಯಲ್ಲಿ ವೇಲ್‌ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೋಮವಾರ ಮನೆಯಲ್ಲಿ ಮೃತ ಸುಮಾ ಅವರು ನೀರನ್ನು ಬಿಸಿ ಮಾಡಿ ತಂದಿಟ್ಟಿದ್ದರು. ಈ ವೇಳೆ ಅಕ್ಕನ ಏಳು ತಿಂಗಳ ಮಗುವು ಬಿಸಿ ನೀರನ್ನು ಮುಟ್ಟಿದ ಪರಿಣಾಮ ಮಗುವಿನ ಮೈಯಲ್ಲಿ ಗುಳ್ಳೆಗಳು ಬಂದಿದ್ದವು.
 ತಕ್ಷಣ ಮಗುವಿನ ಪೋಷಕರು ಕೊಪ್ಪ ಸರ್ಕಾರ ಆಸ್ಪತ್ರೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದರು. 
ಮಗುವಿಗೆ ಏನದಾರೂ ಅನಾಹುತ ಸಂಭವಿಸಬಹುದು ಎಂದು ಹೆದರಿ ಮಗುವನ್ನು ಆಸ್ಪತ್ರೆಗೆ ಕರೆಯ್ದೊದ್ದ ವೇಳೆಯಲ್ಲಿ ಸುಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.