Headlines

ಕರ್ನಾಟಕ ರಾಜ್ಯ ಕಿರಿಯರ ವಾಲಿಬಾಲ್ ತಂಡಕ್ಕೆ ರಿಪ್ಪನ್ ಪೇಟೆಯ ಯುವಕ ಆಯ್ಕೆ :

ರಿಪ್ಪನ್ ಪೇಟೆ : ಪಶ್ಚಿಮ ಬಂಗಾಳ ದ ಬುಡ್ವಾರ್ನ್ ಜಿಲ್ಲೆ ಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ಕಿರಿಯರ ವಾಲಿಬಾಲ್ ಪಂದ್ಯಾಟಕ್ಕೆ, ಕರ್ನಾಟಕ ರಾಜ್ಯವನ್ನು ಪ್ರತಿನಿದಿಸುವ ಅವಕಾಶವನ್ನು ರಿಪ್ಪನ್ ಪೇಟೆ ಯ ವಾಲಿಬಾಲ್ ಆಟಗಾರ ವರುಣ್ ಆರ್ ಎಂ ಪಡೆದಿದ್ದಾರೆ.
ರಾಷ್ಟೀಯ ಮಟ್ಟದ ಕಿರಿಯರ ವಾಲಿಬಾಲ್ (18ವರ್ಷದೊಳಗಿನ ವಯೋಮಿತಿ ) ಪಂದ್ಯವು ಇದೇ ತಿಂಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆಯಲಿದೆ.
ರಿಪ್ಪನ್ ಪೇಟೆಯ ಚೌಡೇಶ್ವರಿ ಬೀದಿಯ ನಿವಾಸಿಗಳಾದ ಮಂಜುನಾಥ್ ಆಚಾರ್ ಹಾಗೂ ಕಮಲ ದಂಪತಿಗಳ ತೃತೀಯ ಪುತ್ರನಾದ ವರುಣ್ ಎಂ ರಿಪ್ಪನ್ ಪೇಟೆಯ ಸಿದ್ದಿ ವಿನಾಯಕ ವಾಲಿಬಾಲ್ ಕ್ಲಬ್ ತಂಡದ ಆಟಗಾರರಾಗಿದ್ದರು.
ಕರ್ನಾಟಕ ರಾಜ್ಯ ಪ್ರತಿನಿದಿಸುವ ಅವಕಾಶ ಪಡೆದಿರುವುದರಿಂದ  ರಿಪ್ಪನ್ ಪೇಟೆ ಯ ಸಿದ್ದಿ ವಿನಾಯಕ ವಾಲಿಬಾಲ್ ಕ್ಲಬ್ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಇನ್ನಿತರ ಸಂಘ ಸಂಸ್ಥೆಗಳು ಶುಭ ಕೋರಿವೆ.

About The Author

Leave a Reply

Your email address will not be published. Required fields are marked *