w
Headlines
Home » ಶಿಕಾರಿಪುರ : ಮೂರು ವರ್ಷದ ಮಗುವಿನ ಮೇಲೆ ಅಮಾನವೀಯ ಅತ್ಯಾಚಾರ :ಆರೋಪಿ ಪದವಿ ವಿದ್ಯಾರ್ಥಿ ಪೊಲೀಸ್ ವಶಕ್ಕೆ

ಶಿಕಾರಿಪುರ : ಮೂರು ವರ್ಷದ ಮಗುವಿನ ಮೇಲೆ ಅಮಾನವೀಯ ಅತ್ಯಾಚಾರ :ಆರೋಪಿ ಪದವಿ ವಿದ್ಯಾರ್ಥಿ ಪೊಲೀಸ್ ವಶಕ್ಕೆ

ಶಿಕಾರಿಪುರ : ನಗರದ ಬಡಾವಣೆಯೊಂದರಲ್ಲಿ ಕಾಮುಕನ ಅಟ್ಟಹಾಸಕ್ಕೆ ಏನು ಅರಿಯದ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಪೈಶಾಚಿಕ ಕೃತ್ಯ ಎಸಗಿದ ಘಟನೆ ನಗರದಲ್ಲಿ ನಡೆದಿದೆ.

ಮೂರು ವರ್ಷದ ಮಗುವಿನ ಮೇಲೆ ಪಕ್ಕದ ಮನೆಯಲ್ಲಿ ಪದವಿ ಓದುತ್ತಿರುವ ಯುವಕನೇ ಅತ್ಯಚಾರ ಮಾಡಿರುವ ಘಟನೆ ಇಂದು ಶಿಕಾರಿಪುರದಲ್ಲಿ ನಡೆದಿದೆ.ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಶಿಕಾರಿಪುರ ತಾಲ್ಲೂಕಿನ ವಾಸಿ ಮೂರು ವರ್ಷದ ಅಪ್ರಾಪ್ತ ಬಾಲಕಿಯು ತನ್ನ ಮನೆಯ ಅಂಗಳದಲ್ಲಿ ಆಟವಾಡುತ್ತಾ ಪಕ್ಕದ ಮನೆಗೆ ಹೋಗಿದ್ದಾಗ, ಆ ಮನೆಯ ಪದವಿ ಓದುತ್ತಿರುವ ಬಾಲಕನು ಅತ್ಯಾಚಾರ ಮಾಡಿರುತ್ತಾನೆಂದು ತಿಳಿದುಬಂದಿದೆ.

ಗ್ರಾಮಸ್ಥರೇ ಯುವಕನನ್ನ ಹಿಡಿದು  ಪೊಲೀಸ್ ಠಾಣೆಗೆ ಒಪ್ಪಿಸಿರುವುದು ತಿಳಿದುಬಂದಿದೆ. ಮಗುವನ್ನ ಶಿವಮೊಗ್ಗದ ಸಖೀ ಕೇಂದ್ರಕ್ಕೆ ಕರೆತರಲಾಗಿದೆ.

ನೊಂದ ಬಾಲಕಿಯ ತಾಯಿಯು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0217/2021 ಕಲಂ 376 A, B ಐಪಿಸಿ ಮತ್ತು ಕಲಂ 4, 6 ಫೊಕ್ಸೋ ಕಾಯ್ದೆರೀತ್ಯಾ ಪ್ರಕರಣ ದಾಖಲಾಗಿದೆ.

ಸಣ್ಣ ಮಕ್ಕಳ ಮೇಲೆ ರೇಪ್ ಪ್ರಕರಣಗಳು ಉತ್ತರ ಭಾರತದಲ್ಲಿ ಕೇಳಿಬರುತ್ತಿತ್ತು. ಆದರೆ ಇದೀಗ ಮಲೆನಾಡಿನಲ್ಲಿಯೂ ನಡೆದಿರುವುದು ಭಯದ ವಾತಾವರಣ ನಿರ್ಮಾಣವಾಗಿದೆ.
ದಿನದಿಂದ ದಿನಕ್ಕೆ ಕಾಮುಕರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಚಿಕ್ಕ ಮಕ್ಕಳನ್ನು ಕೂಡ ಮನೆಯಿಂದ ಹೊರಗೆ ಕಳುಹಿಸಲು ಹೆದರಬೇಕಾದ ಪರಿಸ್ಥಿತಿ ಎದುರಾಗಿದೆ. 

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.