ಮಹಾಮಳೆ ಇದೀಗ ಜನರ ಜನಜೀವನವನ್ನು ಅಸ್ತವ್ಯಸ್ಥಗೊಳಿಸುತ್ತಿದೆ ಅತ್ತ ಕಡೆ ರೈತ ಕೂಡ ಮಹಾಮಳೆಗೆ ಕಂಗಾಲಾಗಿ ದೇವರ ಮೊರೆ ಹೋಗುತ್ತಿದ್ದಾರೆ.ಮಹಾಮಳೆಯ ರೌದ್ರನರ್ತನ ಅಷ್ಟಿಷ್ಟಲ್ಲ ಮಳೆಯಿಂದ ಇದೀಗ ಅನಾಹುತಗಳೇ ಹೆಚ್ಚಾಗುತ್ತಿದೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರದಲ್ಲಿ ಅಶೋಕ ರಸ್ತೆಯ ನಿವಾಸಿ ರಾಮಣ್ಣ ರವರ ಮನೆಯ ಗೋಡೆ ಕುಸಿದಿದ್ದು ಮನೆಯ  ಹೊರಮುಖದಲ್ಲಿ ಗೋಡೆ ಕುಸಿದಿದ್ದು ಕುಟುಂಬಸ್ಥರಿಗೆ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ.ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಆರ್ ಶಂಕರ್ ಆಗಮಿಸಿದ್ದು ಸ್ಥಳ ಪರಿಶೀಲಿಸಿ ವರದಿ ಪಡೆದಿರುತ್ತಾರೆ.
ವರದಿ : ಪವನ್ ಕುಮಾರ್ ಕಠಾರೆ.
		 
                         
                         
                         
                         
                         
                         
                         
                         
                         
                        
