January 11, 2026

ಮಂಜುನಾಥ ಗೌಡರನ್ನು ನಂಬಿ ನಾನು ಹಾಳಾದೆ – ಮಂಜುನಾಥ್ ಪೂಜಾರಿಯಿಂದ ಹೇಳಿಕೆ

ಶಿವಮೊಗ್ಗ : ಮಂಜುನಾಥ್ ಗೌಡ ಮತ್ತು ಕಿಮ್ಮನೆ ರತ್ನಾಕರ್ ಅವರ ನಡುವಿನ ಒಳಜಗಳ ಈಗ  ಮತ್ತೊಂದು ಹೊಸ ರೂಪ ಪಡೆದಿದೆ.

ಹೆಗಲತ್ತಿಯ ತೋಟದ ಕೊಪ್ಪದ ಮಂಜುನಾಥ್ ಪೂಜಾರಿ ಮಾತನಾಡುತ್ತಾ ನಾನು ಮಂಜುನಾಥ್ ಗೌಡರ ಕೈಗೊಂಬೆಯಾಗಿದ್ದೇನೆ,ಅವರ ಶಿಷ್ಯ ದಿನೇಶ್ ನನ್ನನು ಕಿಡ್ನಾಪ್ ಮಾಡಿ ಜೀವಬೆದರಿಕೆ ಹಾಕಿದ್ದಾರೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಕಣ್ಣೀರು ಹಾಕಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್ ಪೂಜಾರಿ ಆರ್.ಎಂ.ಮಂಜುನಾಥ್ ಗೌಡರು ನನ್ನನ್ನ ಬಳಸಿಕೊಂಡು ಕಿಮ್ಮನೆ ರತ್ನಾಕರ್ ಅವರ ಬಗರ್ ಹುಕುಂ ಹೋರಾಟವನ್ನ ಮೊಟಕುಗೊಳಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅ.2 ರ ಗಾಂಧಿ ಜಯಂತಿಯಂದು ಮಂಜುನಾಥ್ ಪೂಜಾರಿಯವರ ಮನೆಯಿಂದ ಮಂಡಗದ್ದೆಯ ಅರಣ್ಯ ಕಚೇರಿಯವರೆಗೆ ಕಿಮ್ಮನೆ ರತ್ನಾಕರ್ ಪಾದಯಾತ್ರೆ ನಡೆಸಲು ವ್ಯವಸ್ಥೆ ಮಾಡಿಕೊಂಡಿದ್ದರು. ಹಿಂದಿನ ದಿನ ಮಂಜುನಾಥ್ ಪೂಜಾರಿಯ ಹೇಳಿಕೆ ತೀರ್ಥಹಳ್ಳಿಯ ರಾಜಕೀಯದಲ್ಲಿ ಹೊಸ ಸಂಚಲನವನ್ನು ಸೃಷ್ಟಿ ಮಾಡಿತ್ತು.

ಈಗ ಅದರ ಬಗ್ಗೆ ಮಂಜುನಾಥ್ ಪೂಜಾರಿ ಮಾತನಾಡಿ 
ಪಾದಯಾತ್ರೆಯನ್ನ ತಪ್ಪಿಸಲು ನನ್ನನ್ನ ಬಳಸಿಕೊಳ್ಳಲಾಯಿತು ಎಂದು ಆರೋಪಿಸಿದ್ದಾರೆ.

ಕಾರ್ಯಕ್ರಮ ನಡೆಯುವ ಹಿಂದಿನ ದಿನ ನನ್ನನ್ನು  ಕಿಡ್ನಾಪ್ ಮಾಡಲಾಗಿತ್ತು. ಮಂಜುನಾಥ್ ಗೌಡರ ಶಿಷ್ಯ ದಿನೇಶ್ ಬಂದು ಅರಣ್ಯ ಇಲಾಖೆಯಿಂದ ನಮಗೆ ಅನ್ಯಾಯವಾಗಿಲ್ಲವೆಂದು ಹೇಳಿಕೆ ಕೊಡಲು ಜೀವ ಬೆದರಿಕೆ ಹಾಕಿದ್ದರು ಎಂದರು.

ಇವರ ಈ ಹೇಳಿಕೆಯಿಂದ ತೀರ್ಥಹಳ್ಳಿ ಕಾಂಗ್ರೆಸ್ ಪಕ್ಷದಲ್ಲಿ ಹೊಸ ತಿರುವು ಪಡೆಯುವುದಂತೂ ಸತ್ಯ. 

About The Author

Leave a Reply

Your email address will not be published. Required fields are marked *