Headlines

ಆಯನೂರು ಸಮೀಪ ಕಾರು ಹಾಗೂ ಲಾರಿ ನಡುವೆ ಭೀಕರ ಅಪಘಾತ : ಕಾರು ಚಾಲಕ ಸ್ಥಳದಲ್ಲೇ ಸಾವು


ಶಿವಮೊಗ್ಗ : ಇಲ್ಲಿನ ಸಮೀಪದ ಮುದ್ದಿನಕೊಪ್ಪದ ಬಳಿ  ಕಾರು ಹಾಗೂ ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರಿನ ಚಾಲಕ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ನಡೆದಿದೆ.

  ನಿತ್ಯದ ಕೆಲಸದ ಮುಗಿಸಿಕೊಂಡು ಮನೆಗೆ ಕಾರಿನಲ್ಲಿ ಹೋಗುತ್ತಿದ್ದ ಯುವಕನಿಗೆ ಎದುರಿನಿಂದ ಬಂದ ಲಾರಿ ಡಿಕ್ಕಿಯಾಗಿ ಸಾವು ಸಂಭವಿಸಿರುವ ದುರಂತದ ಘಟನೆ ನಡೆದಿದೆ.
 ಇದರಲ್ಲಿ ಕಾರು‌ಚಾಲಕ ಆಗಿದ್ದ ಶಿವಮೊಗ್ಗ ಸೋಮಿನಕೊಪ್ಪ ಭೋವಿ ಕಾಲೋನಿಯಲ್ಲಿ ಅತ್ತೆ ಮನೆಗೆ ಹೋಗುತ್ತಿದ್ದ ಅಳಿಯ ಸ್ಥಳದಲ್ಲೆ ಸಾವು ಕಂಡಿರುವ ಘಟನೆ ನಡೆದಿದೆ.ಹೊನ್ನಾಳ್ಳಿ ತಾಲ್ಲೂಕಿನ ಗೋಣಗೇರೆ ನಿವಾಸಿ ನಾಗೇಂದ್ರ (32) ಮೃತ ದುರ್ದೈವಿಯಾಗಿದ್ದಾನೆ.

ನಾಗೇಂದ್ರ ಅವರು ಕಾರಿನಲ್ಲಿ ಬೇಕರಿ‌ ಐಟಂಗಳನ್ನು ಆಯನೂರಿನಿಗೆ ಕೊಟ್ಟು ತನ್ನ ಅತ್ತೆಯ‌ ಮನೆಯಾದ ಸೋಮಿನಕೊಪ್ಪಕ್ಕೆ ತೆರಳುತ್ತಿದ್ದಾಗ ಶಿವಮೊಗ್ಗದಿಂದ ಬಂದ‌ ಲಾರಿಯೊಂದು‌ ಮುಂದೆ ಹೋಗುತ್ತಿದ್ದ ಲಾರಿಗೆ ಓವರ್ ಟೇಕ್ ಮಾಡಲು ಹೋದಾಗ ಲಾರಿಯ ಸ್ಟೇರಿಂಗ್ ಕಟ್ಟಾಗಿ ಆಯನೂರಿನಿಂದ ಬರುತ್ತಿದ್ದ ಕಾರಿಗೆ‌ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.

ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಾಗಿದೆ.

About The Author

Leave a Reply

Your email address will not be published. Required fields are marked *