January 11, 2026

ಸಾಗರ ನಗರಸಭೆ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆ : ಶಾಸಕ ಹರತಾಳು ಹಾಲಪ್ಪ ರಿಂದ ಕಾರ್ಯಕ್ರಮಕ್ಕೆ ಚಾಲನೆ

ಸಾಗರ : ಇಲ್ಲಿನ ನಗರಸಭೆಯ ಗಾಂಧಿ ಮದಿರದಲ್ಲಿ ಇಂದು ಪೌರ ಕಾರ್ಮಿಕರ ದಿನಾಚರಣೆಗೆ ಶಾಸಕ ಹರತಾಳು ಹಾಲಪ್ಪನವರು ದೀಪಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
 ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರ ಕ್ರೀಡಾಕೂಟದಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ  ವಿತರಿಸಲಾಯಿತು.ಹಾಗೂ ಪೌರ ಕಾರ್ಮಿಕರ ಸಂಘದ ಸಾಗರ ನಗರಸಭೆಯ ಶಾಖೆಯ ಅಧ್ಯಕ್ಷರಾದ AEE ಹೆಚ್.ಕೆ. ನಾಗಪ್ಪ ರವರನ್ನು ಪೌರ ಕಾರ್ಮಿಕರು ಮತ್ತು ಶಾಸಕ ಹಾಲಪ್ಪನವರು ಪೇಟ ತೊಡಿಸಿ, ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿದರು. 
ವೇದಿಕೆಯಲ್ಲಿ ನಗರಸಭಾ ಅಧ್ಯಕ್ಷೆ ಮಧುರಾ ಶಿವಾನಂದ್, ಪೌರಾಯುಕ್ತ ರಾಜು ಡಿ. ಬಣಕಾರ್, ಉಪಾಧ್ಯಕ್ಷ ವಿ. ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಡಿ.‌ತುಕಾರಾಮ್ ಮತ್ತು ಮೊದಲಾದವರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *