ಶಿವಮೊಗ್ಗ : ಡೆತ್‌ನೋಟ್ ಬರೆದಿಟ್ಟು ಡಿಸಿ ಕಚೇರಿಯ ಎಫ್ಡಿಎ ಅಧಿಕಾರಿ ನಾಪತ್ತೆ :
ಶಿವಮೊಗ್ಗ: ಕರ್ತವ್ಯದ ಒತ್ತಡ ಹಾಗೂ ಹಿರಿಯ ಅಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ಡೆತ್‌ನೋಟ್ ಬರೆದಿಟ್ಟು ಜಿಲ್ಲಾಧಿಕಾರಿ ಕಚೇರಿಯ ಎಫ್ಡಿಎ ಅಧಿಕಾರಿ ನಾಪತ್ತೆಯಾಗಿದ್ದಾರೆ. ಗಿರಿರಾಜ್ ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾದವರು. ನನ್ನನ್ನು ಹುಡುಕಬೇಡಿ ಎಂದು ಡೆತ್ನೋಟ್ನಲ್ಲಿ ಬರೆದು ಡಿಸಿ ಕಚೇರಿಯ ಸಹೋದ್ಯೋಗಿಗಳಿಗೆ ಕಳುಹಿಸಿ ನಾಪತ್ತೆಯಾಗಿದ್ದಾರೆ. ಇಂದು ಬೆಳಿಗ್ಗೆ 6 ಗಂಟೆಗೆ ಬಸವನಗುಡಿ ಕ್ವಾರ್ಟರ್ಸ್ನಿಂದ ನಾಪತ್ತೆಯಾಗಿದ್ದು, ಜಿಲ್ಲಾಡಳಿತ ಹುಡುಕಾಟ ನಡೆಸುತ್ತಿದೆ.