WhatsApp Channel Join Now
Telegram Channel Join Now
ತೀರ್ಥಹಳ್ಳಿ : ತಾಲೂಕಿನ ಕೋಣಂದೂರು ಶಾಲೆಯಲ್ಲಿ  ಹಲವು ದಶಕಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿಧನರಾದ ಪ್ರೊ. ಗಣೇಶ ಮೂರ್ತಿ ಅವರ ಸೇವೆ  ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಅಪಾರ ಕೊಡುಗೆಯನ್ನು ನೆನಪಿಸುವ ಮತ್ತು ಅವರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸುವ ಪ್ರಯುಕ್ತ ಇಂದು ಕೋಣಂದೂರು ಸಮೀಪದ  ಗರ್ತಿಕೆರೆಯ ಅಮೃತಾ ಗ್ರಾಮದಲ್ಲಿ  ರಾಜ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಸೇರಿದಂತೆ ಹಲವರ ಉಪಸ್ಥಿತಿಯಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ನಡೆಸಲಾಯಿತು.
ಗರ್ತಿಕೆರೆಯ ಅವುಕ ಸರ್ಕಲ್ ಗೆ ತೀರ್ಥಹಳ್ಳಿ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರರವರು ಪ್ರೊ.  ಗಣೇಶ್ ಮೂರ್ತಿ ಅವರ ಹೆಸರನ್ನು ನಾಮಕರಣ ಮಾಡಿದರು. ನಂತರ ಪ್ರೊ. ಗಣೇಶ್ ಮೂರ್ತಿ  ಭಾವಚಿತ್ರವನ್ನಿಟ್ಟು   ದೀಪ ಬೆಳಗಿಸಿ ಪುಷ್ಪಗಳನ್ನು ಅರ್ಪಿಸಿದರು. 

ನಂತರ ತಾಪಂ ಮಾಜಿ ಅಧ್ಯಕ್ಷರಾದ ವೀರೇಶ್ ಆಲುವಳ್ಳಿ ರವರ ಅನುದಾನದಲ್ಲಿ ಅಳವಡಿಸಲಾಗಿದ್ದ ನೂತನ ಹೈಮಾಸ್ಕ್ ದೀಪವನ್ನು ಉದ್ಘಾಟಿಸಿದರು.
ಅಮೃತಾ ಗ್ರಾಮದಲ್ಲಿರುವ ಪ್ರೊ. ಗಣೇಶ್ ಮೂರ್ತಿಯವರ ಜಮೀನಿನ ಶೈಲಾ ಫಾರಂನಲ್ಲಿ ಅವರ ಬದುಕಿನ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಅಪಾರ ಸೇವೆಯನ್ನು ಸ್ಮರಿಸಿ ಶ್ರದ್ಧಾಂಜಲಿ  ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು .
ಈ ಕಾರ್ಯಕ್ರಮದಲ್ಲಿ ರಾಜ್ಯದ ಗೃಹ ಸಚಿವರಾದ ಆರಗ ಜ್ಞಾನೇಂದ್ರರವರು ,ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್, ಹೊಸನಗರ ಕ್ಷೇತ್ರದ ಮಾಜಿ ಶಾಸಕರಾದ ಡಾ॥ ಜಿ. ಡಿ ನಾರಾಯಣಪ್ಪ ,  ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ( ಎನ್ಇಎಸ್ ) ಕಾರ್ಯದರ್ಶಿಗಳಾದ ಅಶ್ವತ್ಥನಾರಾಯಣಶೆಟ್ಟಿ ಯವರು ,ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ಬಿದರಹಳ್ಳಿ ಪುರುಶೋತ್ತಮ್ ,ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಕೋಣಂದೂರು ನ ಅಧ್ಯಕ್ಷರಾದ .ಜಿ .ಎಸ್. ನಾರಾಯಣರಾವ್,ಹೊಸನಗರ ತಾಪಂ ಮಾಜಿ ಅಧ್ಯಕ್ಷರಾದ ವೀರೇಶ್ ಆಲುವಳ್ಳಿ,ಗರ್ತಿಕೆರೆ ಗ್ರಾಪಂ ಸದಸ್ಯರಾದ ಸಚಿನ್ ಗೌಡ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮತ್ತು ಕುಟುಂಬವರ್ಗದವರು ಶಿಷ್ಯವರ್ಗ ಮತ್ತು ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *