ಕಾಂಗ್ರೆಸ್‌ನವರು ನನ್ನನ್ನು ಅತ್ಯಾಚಾರ ಮಾಡುತ್ತಿದ್ದಾರೆ‘ ಎಂಬ ಹೇಳಿಕೆ ಹಿಂಪಡೆಯುವೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಆನೇಕಲ್: ‘ರೇಪ್ ಆಗಿದ್ದು ಅಲ್ಲಿ, ಕಾಂಗ್ರೆಸ್‌ನವರು ನನ್ನನ್ನು ಅತ್ಯಾಚಾರ ಮಾಡುತ್ತಿದ್ದಾರೆ’ ಎಂಬ ಮಾತನ್ನು ಹಿಂಪಡೆಯುವುದಾಗಿ ಸೆಂಟ್ರಲ್ ಜೈಲಿನ ಬಳಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ನನಗೆ ಬಹಳ ಆತಂಕ ಆಗಿತ್ತು, ಆತಂಕದಲ್ಲಿ ಈ ಮಾತು ಹೇಳಿದ್ದೆ. ನಾನು ನೀಡಿದ್ದ ಹೇಳಿಕೆ ಹಿಂಪಡೆಯುತ್ತೇನೆ. ಸಂತ್ರಸ್ತೆಯನ್ನು ನನ್ನ ಮಗಳ ಸ್ಥಾನದಲ್ಲಿ ನೋಡುವೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ತಮ್ಮ ಈ ಮಾತು ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ, ಕಾಂಗ್ರೆಸ್‌ನವರು ಗೃಹ ಸಚಿವರ…

Read More

ರಿಪ್ಪನ್ ಪೇಟೆ: ಶಿವಮೊಗ್ಗದ ನರ್ಸಿಂಗ್ ವಿಧ್ಯಾರ್ಥಿನಿ ಬೆಳ್ಳೂರು ಕಾಡಿನಲ್ಲಿ ಶವವಾಗಿ ಪತ್ತೆ : ಕೊಲೆ ಶಂಕೆ !!

ರಿಪ್ಪನ್ ಪೇಟೆ: ಇಲ್ಲಿನ ಸಮೀಪದ ಕಗ್ಗಲಿ ಗ್ರಾಮದ ಕಾಡಿನ ಮಧ್ಯೆ ಶಿವಮೊಗ್ಗದ ಪ್ರತಿಷ್ಠಿತ ಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬಳ ಶವ ಪತ್ತೆಯಾಗಿದೆ. ತಳಲೆ -ಬೆಳ್ಳೂರು ಮಾರ್ಗದ ಮಧ್ಯದಲ್ಲಿ ರಸ್ತೆಯಿಂದ ಸುಮಾರು ಅರ್ಧ ಕಿ.ಮೀ ಕಾಡಿನ ಒಳಗೆ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ.ಯುವತಿಯು ಶಿವಮೊಗ್ಗದ ಪ್ರತಿಷ್ಠಿತ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಳು. ಯುವತಿಯ ಹೆಸರು ಕವಿತಾ(22) ಎಂದು ತಿಳಿದುಬಂದಿದ್ದು ಜೋಗ ಸಮೀಪದ ಕಾನೂರು ನಿವಾಸಿಯಾಗಿದ್ದಾಳೆ. ಕಳೆದ ಐದಾರು ವರ್ಷದ ಹಿಂದೆ ರಿಪ್ಪನ್‌ಪೇಟೆಯ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಕಗ್ಗಲಿ ಗ್ರಾಮದ…

Read More

ಶಿವಮೊಗ್ಗ: ದೇಶದ ಆಸ್ತಿಯನ್ನು ಮಾರಲು ಹೊರಟಿರುವ ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಯುವ ಕಾಂಗ್ರೆಸ್ ನಿಂದ ರೈಲು ತಡೆಗೆ ಯತ್ನ :

ಶಿವಮೊಗ್ಗ : ರಾಷ್ಟ್ರೀಯ ಹಣಗಳಿಕೆ ನೀತಿ (NMP) ಯೋಜನೆಯಡಿ ದೇಶದ ಆರು ಲಕ್ಷ ಕೋಟಿ ಆಸ್ತಿಯನ್ನು ಖಾಸಗಿ ಒಡೆತನಕ್ಕೆ ಮಾರಾಟ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಇಂದು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ನಗರದ ರೈಲ್ವೆ ನಿಲ್ದಾಣ ದಲ್ಲಿ ರೈಲ್ವೆ ತಡೆ ಯತ್ನಿಸಿದ ಮೂವತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.  ದೇಶದಲ್ಲಿ ಅಚ್ಚೆ ದಿನ್ ತರುತ್ತೇನೆಂದು ಅಧಿಕಾರಕ್ಕೆ ಬಂದ ಕೇಂದ್ರದ ಬಿಜೆಪಿ ಸರ್ಕಾರ ದೇಶದ ಸಾರ್ವಜನಿಕ ವಲಯದ ಆಸ್ತಿಗಳನ್ನು ರಾಷ್ಟ್ರೀಯ ಹಣಗಳಿಕೆಯ ನೀತಿಯಡಿಯಲ್ಲಿ…

Read More

ರಿಪ್ಪನ್ ಪೇಟೆ: ಸರಳವಾಗಿ ನಡೆದ ರಾಘವೇಂದ್ರ ಸ್ವಾಮಿಗಳ ಆರಾಧನ ಮಹೋತ್ಸವ

ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ಸಿದ್ದಪ್ಪನ ಗುಡಿ ಸಮೀಪದಲ್ಲಿರುವ ಶ್ರೀ ಗುರುಸಾರ್ವಭೌಮರ ದೇವಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವ  ವಿಜೃಂಭಣೆಯಿಂದ ಮಂಗಳವಾರ ಸರಳವಾಗಿ ಕೋವಿಡ್ ನಿಯಮಾನುಸಾರ ಜರಗಿತು. ವೇದ ಬ್ರಹ್ಮ ಚಂದ್ರಶೇಖರ್ ಭಟ್ ಅವರ ನೇತೃತ್ವದಲ್ಲಿ ಪೂಜಾಕೈಂಕರ್ಯ ಜರಗಿತು.  ಈ ಪೂಜಾ ಸಂದರ್ಭದಲ್ಲಿ ನೂರಾರು ಭಕ್ತರು ದೇವರ ದರ್ಶನವನ್ನು ಪಡೆದು ಪುನೀತರಾದರು .ಈ ಪೂಜಾ ಕಾರ್ಯಕ್ರಮದಲ್ಲಿ ಗುರು ರಾಘವೇಂದ್ರ ಸ್ವಾಮಿ ಸಮಿತಿಯ ಅಧ್ಯಕ್ಷರಾದ ಟಿ. ಪುರುಷೋತ್ತಮ್ ರಾವ್. ಪ್ರಧಾನ ಕಾರ್ಯದರ್ಶಿಯಾದ ಕೆ.ಜಿ.ದೇವರಾಜ್ ಕೆರೆಹಳ್ಳಿ…

Read More

ರಿಪ್ಪನ್ ಪೇಟೆ : ಮಣಿಪಾಲ ಆರೋಗ್ಯ ಕಾರ್ಡ್ 2021ರ ನೋಂದಾವಣಿ ಪ್ರಕ್ರಿಯೆಗೆ ಚಾಲನೆ

ರಿಪ್ಪನ್‌ಪೇಟೆ, 25 ಆಗಸ್ಟ್ 2021: ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ. ಎಚ್ ಎಸ್ ಬಲ್ಲಾಳ್ ಅವರು ವರ್ಚುವಲ್ ವೇದಿಕೆಯ ಮೂಲಕ 2021ರ ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಾವಣೆಗೆ ಚಾಲನೆ ನೀಡಿದರು.  ಉದ್ಘಾಟನೆಯ ನಂತರ ಡಾ.ಬಲ್ಲಾಳ್ ಮಾತನಾಡುತ್ತಾ “ನಮ್ಮ ಸಮುದಾಯಕ್ಕೆ ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಯಶಸ್ವೀ 20 ವರ್ಷಗಳನ್ನು ಪೂರೈಸಿದ್ದೇವೆ ಎಂದು ತಿಳಿಸಲು ನನಗೆ ಅಪಾರ ಸಂತೋಷವಾಗುತ್ತಿದೆ. ಕಳೆದ 20 ವರ್ಷಗಳಲ್ಲಿ, ನಾವು ಸಾಮಾಜಿಕ ಕಾಳಜಿಯೊಂದಿಗೆ ಉತ್ಕ್ರಷ್ಟ…

Read More

ರಿಪ್ಪನ್ ಪೇಟೆ : ದಯಾಮರಣದ ಮೊರೆ ಹೋದ ಎಂಬತ್ತರ ವೃದ್ದೆ :

ರಿಪ್ಪನ್ ಪೇಟೆ: ಇಲ್ಲಿಗೆ ಸಮೀಪದ ಅರಸಾಳು ಎಂಬಲ್ಲಿ ವಯೋವೃದ್ಧೆಯೋರ್ವರು ಜೀವನ ನಡೆಸಲು ಹರಸಾಹಸ ಪಡುತ್ತಿದ್ದು, ಜೀವನ ನಡೆಸಲು ಆಸರೆಯಾಗಬೇಕಿದ್ದ ಪತಿಯು ಇಹಲೋಕ ತ್ಯಜಿಸಿದ್ದಾರೆ. ಒಬ್ಬಂಟಿಯಾಗಿರುವ ಭಾಗ್ಯಲಕ್ಷ್ಮಿ ಎಂಬ ವೃದ್ದೆಯು ಸುಮಾರು 80 ವರ್ಷದವರಾಗಿದ್ದಾರೆ.ಹಳೆಯ ಜೋರಾಗಿ ಮಳೆ ಬಂದರೆ ಬಿದ್ದು ಹೋಗುವಂತಹ ಮನೆಯಲ್ಲಿ ವಾಸಿಸುತ್ತಿದ್ದಾರೆ.ಯಾರೂ ನೆರವಿಗೆ ಬಾರದೇ ಇರುವ ಕಾರಣ ದಯಮರಣಕ್ಕೆ ಸರ್ಕಾರದ ಬಳಿ ಮೊರೆಹೋಗುವತ್ತ ಚಿಂತಿಸಿದ್ದಾರೆ. ತಮ್ಮ ಪತಿಯು ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದು,ಕೆಲವು  ಕೌಟುಂಬಿಕ ಸಮಸ್ಯೆಯಿಂದ ಬರಬೇಕಾಗಿದ್ದ ಸರ್ಕಾರದ ಪಿಂಚಣಿ ಹಣ ಈ ವಯೋವೃದ್ದೆಯ ಕೈ ಸೇರುತ್ತಿಲ್ಲ.ಈ ವೃದ್ದೆಯು…

Read More

ರಾತ್ರೋರಾತ್ರಿ ಶಿವಮೊಗ್ಗದ ಮುನೇಶ್ವರ ದೇವಸ್ಥಾನದ ಬೀಗ ಒಡೆದು ಕಳ್ಳತನ :

ಶಿವಮೊಗ್ಗ :ಇಲ್ಲಿನ ತುಂಗಾ ನದಿ ತೀರದಲ್ಲಿರುವ ಅಪ್ಪಾಜಿರಾವ್ ಕಾಂಪೌಂಡ್’ನ  ಮುನೇಶ್ವರ ದೇವಸ್ಥಾನಲ್ಲಿ ಕಳ್ಳತನ ಮಾಡಲಾಗಿದೆ. ರಾತ್ರಿ ವೇಳೆ ದೇಗುಲದ ಬೀಗ ಒಡೆದು ಕಳವು ಮಾಡಿದ್ದಾರೆ. ದೇವಸ್ಥಾನದ ಬೀಗ ಮುರಿದ ಕಳ್ಳರು ದೇವರ ಅಭರಣ, ನಗದು ದೋಚಿದ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರ ಪತ್ತೆ ಕಾರ್ಯ ಆರಂಭಿಸಿದ್ದಾರೆ. ದೇವಸ್ಥಾನದಲ್ಲಿ ಪೂಜೆ ಮುಗಿಸಿದ ಬಳಿಕ ಆಡಳಿತ ಮಂಡಳಿಯವರು ಬೀಗ ಹಾಕಿ ತೆರಳಿದ್ದರು. ರಾತ್ರಿ ಕಳ್ಳರು ದೇಗುಲದ ಬೀಗು ಮುರಿದಿದ್ದಾರೆ. ಒಳಗಿದ್ದ ಎರಡು ಗಾಡ್ರೇಜ್ ಬೀರುವಿನ ಬೀಗಗಳನ್ನು ಒಡೆದಿದ್ದಾರೆ. ದೇವಸ್ಥಾನದ…

Read More

ರಿಪ್ಪನ್ ಪೇಟೆ: ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿ

ರಿಪ್ಪನ್ ಪೇಟೆ : ಇಲ್ಲಿನ ಹೆದ್ದಾರಿಪುರದ ಸಮೀಪ ಸಾಗರ – ತೀರ್ಥಹಳ್ಳಿಯ ಮುಖ್ಯ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿಯಾದ ಘಟನೆ ಇಂದು ನಡೆದಿದೆ. ಕಲ್ಲೂರಿನ ನಿವಾಸಿಯಾದ ಆದರ್ಶ ಎಂಬುವವರು ಕಾರ್ಯನಿಮಿತ್ತ ರಿಪ್ಪನ್ ಪೇಟೆಗೆ ಬಂದು ವಾಪಾಸ್ಸಾಗುವಾಗ ಸಂಧರ್ಭದಲ್ಲಿ ಸಾಗರ- ತೀರ್ಥಹಳ್ಳಿ ಮುಖ್ಯ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿರು ಘಟನೆ ನಡೆದಿದ್ದು,ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಚಾಲಕನು ಅದೃಷ್ಟಶಾವತ್ ಪಾರಾಗಿದ್ದು ಯಾವುದೇ ರೀತಿಯಾದ ಹಾನಿಯಾಗಿಲ್ಲ. ಘಟನೆಯ ಕುರಿತು ರಿಪ್ಪನ್ ಪೇಟೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ…

Read More

ಮಧು ಬಂಗಾರಪ್ಪ ಹಾಗುಾ ಮಂಜುನಾಥ್ ಗೌಡರ ಕಾಂಗ್ರೆಸ್ ಸೇರ್ಪಡೆ ಪಕ್ಷಕ್ಕೆ ಬಲ ತಂದಿದೆ : ಗೋಪಾಲಕೃಷ್ಣ ಬೇಳೂರು

ಸಾಗರ:ಮಧು ಬಂಗಾರಪ್ಪ ಮತ್ತು ಮಂಜುನಾಥ ಗೌಡರ ಕಾಂಗ್ರೆಸ್ ಸೇರ್ಪಡೆಯಿಂದ ಜಿಲ್ಲೆಯಲ್ಲಿ ಪಕ್ಷಕ್ಕೆ ಬಲ ಬಂದಿದೆ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿದೆ ಮತ್ತು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಿರಿಯರಾದ ಕಾಗೋಡು ತಿಮ್ಮಪ್ಪನವರ ಮಾರ್ಗದರ್ಶನದಲ್ಲಿ ಮುನ್ನಡೆಯಲಾಗುವುದು ಎಂದು ಮಾಜಿ ಶಾಸಕರು ಕೆಪಿಸಿಸಿ ವಕ್ತಾರರು ಆದ ಗೋಪಾಲಕೃಷ್ಣ ಬೇಳೂರು  ಹೇಳಿದರು  ಅವರು ಇಂದು ಸಾಗರದ ಅಗ್ರಹಾರದ ರಾಘವೇಶ್ವರ ಭವನದಲ್ಲಿ ಏರ್ಪಡಿಸಲಾಗಿದ್ದ ಮಧು ಬಂಗಾರಪ್ಪ ಮತ್ತು ಆರ್ ಎಂ ಮಂಜುನಾಥ ಗೌಡರ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ವಾಗತ ಸ್ವೀಕರಿಸಿ ಮಾತನಾಡಿದ  ಸೊರಬದ   ಮಾಜಿ…

Read More

ನಂದಿತಾ ಸಾವಿನ ಪ್ರಕರಣ ಸಿಬಿಐ ಗೆ ವಹಿಸಿ :ಕಾಂಗ್ರೆಸ್ ಮುಖಂಡ ಅಮ್ರಪಾಲಿ ಸುರೇಶ್

ತೀರ್ಥಹಳ್ಳಿ: ನೂತನವಾಗಿ ಗೃಹ ಸಚಿವರಾಗಿ ಆಯ್ಕೆಯಾಗಿರುವ ಆರಗ ಜ್ಞಾನೇಂದ್ರರವರು ತೀರ್ಥಹಳ್ಳಿಯ ನಂದಿತಾ ಸಾವಿನ ಪ್ರಕರಣವನ್ನು ಸಿಬಿಐ ಗೆ ವಹಿಸಿ ನ್ಯಾಯ ಕೊಡಿಸುವ ಮೂಲಕ ಸತ್ಯಾಂಶವನ್ನು ಜನರ ಮುಂದಿಡಬೇಕು ಎಂದು ತೀರ್ಥಹಳ್ಳಿ ಕಾಂಗ್ರೆಸ್ ಮುಖಂಡರಾದ ಅಮ್ರಪಾಲಿ ಸುರೇಶ್ ರವರು ಆಗ್ರಹಿಸಿದ್ದಾರೆ. ಕರ್ನಾಟಕ ಸರ್ಕಾರದ ಅತಿಮುಖ್ಯ ಮತ್ತು ಎರಡನೇ ಮಹತ್ವದ ಖಾತೆಯನ್ನು ಅಲಂಕರಿಸಿದ್ದೀರಿ, ಅಭಿನಂದನೆಗಳು. ತೀರ್ಥಹಳ್ಳಿಯ ನಾಗರೀಕರಿಗೆ ನಿಮ್ಮ‌ಮೇಲೆ ಅತೀವ ನಿರೀಕ್ಷೆಯಿದೆ . ತಾವು ಪಕ್ಷದಲ್ಲೂ ಅತಿ ಪ್ರಭಾವಿಗಳು,ನೇರವಾಗಿ ದೆಹಲಿಯ ಸಂಪರ್ಕ ಹೊಂದಿರುವ ನಾಯಕರು. ಕಳೆದ ಚುನಾವಣೆಯಲ್ಲಿ ಅಂದಿನ‌ ನಿಮ್ಮ‌ಪಕ್ಷದ…

Read More