ಕೊರೊನಾ ಭೀತಿ: ಆಗುಂಬೆ ಚೆಕ್ ಪೋಸ್ಟ್ ಬಿಗಿಗೊಳಿಸಲು ಮುಖ್ಯಮಂತ್ರಿಗಳಿಂದ ಆದೇಶ:

ತೀರ್ಥಹಳ್ಳಿ: ಕರಾವಳಿ ಭಾಗ ಹಾಗೂ ಕೇರಳದೊಂದಿಗೆ ನಿಕಟ ಸಂಪರ್ಕ ಹೊಂದಿರುವ ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಕೊರೋನಾ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ತೀರ್ಥಹಳ್ಳಿಯಲ್ಲಿ ಕೊರೋನಾ ತಪಾಸಣಾ ಕೇಂದ್ರ ಸ್ಥಾಪಿಸಲು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಅನುಮತಿ ನೀಡಿದ್ದಾರೆ.  ಶಿವಮೊಗ್ಗ ಜಿಲ್ಲೆ ಹಾಗೂ ತೀರ್ಥಹಳ್ಳಿ ಭಾಗದಲ್ಲಿ ಇನ್ನೂ ಕೂಡಾ ಕೋವಿಡ್ ಸಂಪೂರ್ಣ ಹತೋಟಿಗೆ ಬಾರದಾಗಿದೆ ಜತೆಗೆ ಮೂರನೆಯ ಅಲೆ ಪ್ರಾರಂಭವಾಗುವ ಅನುಮಾನಗಳಿದ್ದು ತ್ವರಿತ ತಪಾಸಣೆ ಹಾಗೂ ಚಿಕಿತ್ಸೆಗೆ ಸರಕಾರ ಮಹತ್ವದ ಕ್ರಮ ಕೈಗೊಂಡಿದೆ. ಇದರ ಜತೆಗೆ ಆಗುಂಬೆಯಲ್ಲಿ ಚೆಕ್ ಪೋಸ್ಟ್…

Read More

ರಿಪ್ಪನ್ ಪೇಟೆ: ಶಾಸಕ ಹರತಾಳು ಹಾಲಪ್ಪರವರಿಗೆ ಸಚಿವ ಸ್ಥಾನ ನೀಡುವಂತೆ ವೀರಶೈವ ಸಮಾಜದವರಿಂದ ಒತ್ತಾಯ:

 ರಿಪ್ಪನ್‌ಪೇಟೆ: ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಮಾಜಿ ಸಚಿವ, ಎಂಎಸ್ಐಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಹರತಾಳು ಹಾಲಪ್ಪನವರಿಗೆ ಕ್ಯಾಬಿನೆಟ್ ಸಚಿವ ಸ್ಥಾನ ನೀಡುವಂತೆ ರಿಪ್ಪನ್‌ಪೇಟೆ ವೀರಶೈವಲಿಂಗಾಯತ ಸಮಾಜದ ಮುಖಂಡರುಗಳಾದ ಮೆಣಸೆ ಆನಂದ,ಕಮದೂರು ರಾಜಶೇಖರ್, ಹೆಚ್.ಎಸ್.ರವಿ ಹಾಲುಗುಡ್ಡೆ, ನೆವಟೂರು ದೇವೇಂದ್ರಪ್ಪಗೌಡ, ಯೋಗೇಂದ್ರಗೌಡ, ಜಿ.ಡಿ ಮಲ್ಲಿಕಾರ್ಜುನ, ಕಳಸೆ ಗಂಗಾಧರಗೌಡ ಒತ್ತಾಯಿಸಿದ್ದಾರೆ. ರಿಪ್ಪನ್‌ಪೇಟೆಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಮುಖಂಡರುಗಳು ಹಾಲಪ್ಪನವರು ಹೊಸನಗರ-ಸಾಗರ-ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಸಚಿವರಾಗಿ ಕಾರ್ಯನಿರ್ವಹಿಸಿದ್ದು ಅಲ್ಲದೆ ಶಾಸಕರ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದು ಜಾತಿ ಭೇದ ಭಾವ…

Read More

ನಾನು ಸಚಿವ ಸ್ಥಾನದ ಆಕಾಂಕ್ಷಿ,ಸಚಿವ ಸ್ಥಾನ ಕೊಟ್ಟರೆ ಉತ್ತಮವಾಗಿ ನಿರ್ವಹಿಸುವ ಸಾಮರ್ಥ್ಯ ನನ್ನಲ್ಲಿದೆ : ಶಾಸಕ ಹರತಾಳು ಹಾಲಪ್ಪ

ರಿಪ್ಪನ್ ಪೇಟೆ: ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಆಯ್ಕೆಯಾಗಿದ್ದಾರೆ ಸಚಿವ ಸಂಪುಟದ ವಿಸ್ತರಣೆಯತ್ತ ಇದೀಗ ಎಲ್ಲರ ಚಿತ್ತ ಮೂಡುತ್ತಿದೆ.ಯಾರು ಯಾರಿಗೆ ಮಂತ್ರಿ ಸ್ಥಾನ ಒಲಿಯಲಿದೆ ಎಂಬುದು ಇದೀಗ ಎಲ್ಲರಲ್ಲೂ ಕಾಡುತ್ತಿರುವಂತಹ ಕುತೂಹಲ ಯಾವುದೇ ಶಾಸಕರನ್ನು ವಿಚಾರಿಸಿದಾಗ ನಾವು ಮಂತ್ರಿಯಾಗುವ ಆಸೆ ಹೊಂದಿದ್ದೇವೆ ಅವಕಾಶವೂ ಸಿಗುವ ಸಾಧ್ಯತೆಗಳು ಹೆಚ್ಚಿದೆ ಎಂದು ಹೇಳುವುದು ಇದೀಗ ಸಹಜವಾಗಿದೆ.   ಜಿಲ್ಲೆಯ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಹರತಾಳು ಹಾಲಪ್ಪನವರು ಹೊಸನಗರ ತಾಲ್ಲೂಕಿನ ಅರಸಾಳು ಗ್ರಾಮದಲ್ಲಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ …

Read More

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ: ಕಾಡಿನಂತಾಗಿದೆ ಸಾಗರದ ಪೊಲೀಸ್ ವಸತಿ ಗೃಹಗಳು:

ಸಾಗರ: ಮಲೆನಾಡಿನ ಮಡಿಲಾದ ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಪೋಲಿಸ್ ಸಿಬ್ಬಂದಿಗಳಿಗೆ ಕೋಟ್ಯಾಂತರ ರೂ ವೆಚ್ಚ ಮಾಡಿ ಸರ್ಕಾರ ಪೊಲೀಸ್ ವಸತಿಗೃಹಗಳನ್ನು ನಿರ್ಮಿಸಿತ್ತು.ಆದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಕೋಟ್ಯಂತರ ರೂ ಬೆಲೆಬಾಳುವ ಪೊಲೀಸ್ ವಸತಿ ಗೃಹಗಳು ಇದೀಗ ಕಾಡಿನ ಮಧ್ಯೆ ಇದೆ ಎಂಬಂತಾಗಿದೆ ಕಾರಣ ಸುತ್ತಮುತ್ತಲು ಕಾಡಿನಂತೆ ವಸತಿಗೃಹದ ಅರ್ಧಮಟ್ಟಿಗೆ  ಬೆಳೆದಿರುವ ಗಿಡಗಂಟಿಗಳು. ಅಧಿಕಾರಿಗಳು ಗಿಡಗಂಟಿಗಳನ್ನು ಸ್ವಚ್ಛಗೊಳಿಸದೆ ಇರುವುದರಿಂದ ಈ ವಸತಿಗೃಹಗಳ ಸೌಂದರ್ಯವೇ ಇದೀಗ ಪಾಳು ಬಿದ್ದಂತಿದೆ. ಸಾಗರದ ಹೃದಯ ಭಾಗದಲ್ಲಿ ಇರುವ ಈ ಪೊಲೀಸ್…

Read More