w
Headlines
Home » ಹೊಸನಗರ :ಸಾರ್ವಜನಿಕ ಆಸ್ಪತ್ರೆಯಲ್ಲೆ ನೇಣಿಗೆ ಶರಣಾದ ರೋಗಿ:

ಹೊಸನಗರ :ಸಾರ್ವಜನಿಕ ಆಸ್ಪತ್ರೆಯಲ್ಲೆ ನೇಣಿಗೆ ಶರಣಾದ ರೋಗಿ:

ಹೊಸನಗರ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಅನಾರೋಗ್ಯ ನಿಮಿತ್ತ ದಾಖಲಾಗಿದ್ದ  ಸೊನಲೆಯ ರೋಗಿಯೊಬ್ಬ ಆಸ್ಪತ್ರೆಯಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಸೊನಲೆಯ ವಾಸಿ ಕೃಷಿಕ ವೃತ್ತಿ ಮಾಡಿಕೊಂಡಿದ್ದ ಜಗದೀಶ್ (50) ಎಂಬುವವರು ಅನಾರೋಗ್ಯ ನಿಮಿತ್ತ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದರು,ಶನಿವಾರ ಮಧ್ಯರಾತ್ರಿ ತಾನು ಮಲಗಿದ್ದ ಕೊಠಡಿಯಿಂದ ಹೊರಬಂದ ಜಗದೀಶ್ ಸಾರ್ವಜನಿಕ ಆಸ್ಪತ್ರೆ ಎರಡನೆ ಅಂತಸ್ತಿಗೆ ತೆರಳುವ ಮೆಟ್ಟಿಲುಗಳಿಗೆ ಅಳವಡಿಸಿದ ಸರಳುಗಳಿಗೆ ತಾನು ಧರಿಸಿದ ಲುಂಗಿಯಿಂದಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ಜಗದೀಶ್ ರವರನ್ನು ನೋಡಿಕೊಳ್ಳಲು ಅವರ ಪತ್ನಿ ವಾರ್ಡನಲ್ಲಿ ಮಲಗಿದ್ದರು ಮಧ್ಯರಾತ್ರಿ ನಂತರ ಪತ್ನಿಗೆ ನಿದ್ದೆ ಬಂದಿದ್ದನ್ನು ಗಮನಿಸಿದ ಜಗದೀಶ್ ಆಸ್ಪತ್ರೆ ಕಾರಿಡಾರ್ ಮೂಲಕ ಎರಡನೇ ಅಂತಸ್ತಿಗೆ ಹೋಗುವ ಮೆಟ್ಟಿಲಿಗೆ ತೆರಳಿ ಅಲ್ಲಿಯೇ ನೇಣಿಗೆ ಶರಣಾಗಿದ್ದಾರೆ.

ವಾರ್ಡ್ ನಲ್ಲಿ ಉಳಿದ ರೋಗಿಗಳು ಗಮನಿಸಿ ಹೊರಗೆ ಹೋದ ಜಗದೀಶ್ ಮರಳಿ ಬರದೇ ಇರುವುದನ್ನು ಕಂಡು ಅಲ್ಲೇ ಮಲಗಿದ್ದ ಅವರ ಪತ್ನಿಗೆ ವಿಷಯ ತಿಳಿಸಿದ ನಂತರ ಜಗದೀಶ್ ರವರನ್ನು ಹುಡುಕಿದಾಗ ಅವರು ನೇಣಿಗೆ ಶರಣಾಗಿದ್ದು ಗಮನಕ್ಕೆ ಬಂದಿದೆ.

ಜಗದೀಶ್ ಪತ್ನಿ, ಓರ್ವ ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಹೊಸನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.