ಶೈಕ್ಷಣಿಕ ಸೇವೆ ಸಮಾಜದಲ್ಲಿನ ಅತ್ಯುತ್ತಮ ಸೇವೆ: ಶಾಸಕ ಹರತಾಳು ಹಾಲಪ್ಪ.

 ರಿಪ್ಪನ್ ಪೇಟೆ : ಶೈಕ್ಷಣಿಕ ಸೇವೆ ಸಮಾಜದಲ್ಲಿನ ಅತ್ಯುತ್ತಮ ಸೇವೆಯಾಗಿದ್ದು. ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ,ದಾರಿದೀಪವಾಗಿ ಮುನ್ನಡೆಸಿದ ಶಿಕ್ಷಕರನ್ನು ಮತ್ತು ಉಪನ್ಯಾಸಕರನ್ನು ಸಮಾಜ ಗೌರವಿಸುತ್ತದೆ ಎಂದು ಶಾಸಕ ಹಾಗೂ ಎಂಎಸ್ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.

 ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿ ಇಂದು ನಿವೃತ್ತರಾದ ಪ್ರೊ. ನಳಿನ್ ಚಂದ್ರ ಉಡುಪ ಅವರಿಗೆ ಕಾಲೇಜು ಅಭಿವೃದ್ಧಿ ಸಮಿತಿಯಿಂದ  ಆಯೋಜಿಸಲಾಗಿದ್ದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಶೈಕ್ಷಣಿಕ ಸೇವೆಯಲ್ಲಿ ತೊಡಗಿಕೊಂಡಿರುವ ಪ್ರತಿಯೊಬ್ಬರಿಗೂ ಸಹ ಸಮಾಜವು ಗೌರವಿಸುತ್ತದೆ ಮತ್ತು ಆರಾಧಿಸುತ್ತದೆ. ಸರಳತೆ ಸಜ್ಜನಿಕೆ ಮತ್ತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ಉಪನ್ಯಾಸಕರನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಸಹ ತನ್ನ ಜೀವಿತ ಅವಧಿಯಲ್ಲಿ ನೆನಪಿಸಿಕೊಳ್ಳುತ್ತಾನೆ. ಉತ್ತಮ ಉಪನ್ಯಾಸಕರು ಸಮಾಜದ ಶಿಲ್ಪಿಗಳಾಗಿ ಕಂಗೊಳಿಸುತ್ತಾರೆ ಎಂದರು.

 ಗೌರವ ಸಮರ್ಪಣೆಯನ್ನು ಸ್ವೀಕರಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಪ್ರೊ ನಳಿನ್ ಚಂದ್ರ ಉಡುಪ ರವರು ನನ್ನ ಶೈಕ್ಷಣಿಕ ಕಾರ್ಯ ವಿದ್ಯೆಯಲ್ಲಿ ದಕ್ಷಿಣಕನ್ನಡ ಚಿಕ್ಕಮಂಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ ಹೊಸನಗರ ಮತ್ತು ರಿಪ್ಪನ್ ಪೇಟೆ ಯಲ್ಲಿ ಉಪನ್ಯಾಸಕನಾಗಿ ಹಾಗೆಯೇ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುವುದರ ಮೂಲಕ ನನ್ನ ಶೈಕ್ಷಣಿಕ ಸೇವೆಯನ್ನು ಪ್ರಾಮಾಣಿಕವಾಗಿ ಮತ್ತು ನಿಷ್ಠೆಯಿಂದ ನಿರ್ವಹಿಸಿದ್ದೇನೆ. ನನ್ನಿಂದ ಕಲಿತ ನೂರಾರು ವಿದ್ಯಾರ್ಥಿಗಳು ಉತ್ತಮ ಪದವಿಯನ್ನು ಪಡೆದುಕೊಂಡು ಉನ್ನತ ಉದ್ಯೋಗವನ್ನು ಅಲಂಕರಿಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ
 ಇದು ನನಗೆ ಸಂತಸದ ಸಂಗತಿಯಾಗಿದೆ. ಕರ್ತವ್ಯ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯವನ್ನು ನಿರ್ವಹಿಸಿರುವ ಪ್ರತಿಯೊಬ್ಬ ಉಪನ್ಯಾಸಕರನ್ನು ವಿದ್ಯಾರ್ಥಿಗಳು ಹಾಗೂ ಸಮಾಜವು ಗೌರವಿಸುತ್ತದೆ. ನನ್ನ ಉಪನ್ಯಾಸಕ ಹಾಗೂ ಪ್ರಾಚಾರ್ಯ ವೃತ್ತಿ ಜೀವನವು  ನನಗೆ ಸಂತೋಷವನ್ನು ಮತ್ತು ನೆಮ್ಮದಿಯ ಬದುಕನ್ನು ನೀಡಿದೆ ಎಂದರು.

 ಕಾಲೇಜಿನ ಪ್ರಭಾರ ಪ್ರಾಚಾರ್ಯ ಪ್ರೊ.ಚಂದ್ರಶೇಖರ್. ಪ್ರಾಸ್ತವಿಕವಾಗಿ ಮಾತನಾಡಿದರು.ಕನ್ನಡ ವಿಭಾಗದ ಡಾ. ರತ್ನಾಕರ್ ಕುನಗೋಡು ಕಾರ್ಯಕ್ರಮವನ್ನು ನಿರೂಪಿಸಿದರು.

 ಕಾರ್ಯಕ್ರಮದಲ್ಲಿ ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುಳಾ ಕೇತಾರ್ಜಿ ರಾವ್,ಕಾಲೇಜ್ ಅಭಿವೃದ್ಧಿ ಸಮಿತಿಯ ಸದಸ್ಯರುಗಳಾದ ಮೆಣಸೆ ಆನಂದ, ಆರ್ ಟಿಗೋಪಾಲ್.
ಎ ಟಿ ನಾಗರತ್ನ. ಎಂಬಿ ಮಂಜುನಾಥ್.ಕೇರ್ತಜಿ ರಾವ್. ಉಪನ್ಯಾಸಕರುಗಳಾದ ಡಾ. ಶ್ರೀಪತಿ ಹಳಗುಂದ. ಶಂಕರ್. ಕಿರಣ್. ದೇವರಾಜ್ ಶೋಭಾ ಪಾಟೀಲ್. ಕುಮಾರಸ್ವಾಮಿ. ಗ್ರಂಥಾಲಯ ಮುಖ್ಯಸ್ಥ ಡಾ. ರಜನೀಶ್. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ.ನರೇಂದ್ರ ಕುಳಗಟ್ಟೆ ಸೇರಿದಂತೆ ಕಾಲೇಜಿನ ಎಲ್ಲ ವಿಭಾಗದ ಮುಖ್ಯಸ್ಥರು ಹಾಗೂ ಉಪನ್ಯಾಸಕರು, ಸಿಬ್ಬಂದಿವರ್ಗದವರು ಭಾಗವಹಿಸಿದ್ದರು.


ವರದಿ: ಸಬಾಸ್ಟಿನ್ ಮ್ಯಾಥ್ಯೂಸ್‌ ರಿಪ್ಪನ್ ಪೇಟೆ



ಪೋಸ್ಟ್‌ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..






Leave a Reply

Your email address will not be published. Required fields are marked *