
ರಾಮನಸರ ನಾಗದೇವತೆ ಕ್ಷೇತ್ರದಲ್ಲಿ ಷಷ್ಠಿ, ಜಾತ್ರಾ ಮಹೋತ್ಸವ ಸಂಪನ್ನ
ರಾಮನಸರ ನಾಗದೇವತೆ ಕ್ಷೇತ್ರದಲ್ಲಿ ಷಷ್ಠಿ, ಜಾತ್ರಾ ಮಹೋತ್ಸವ ಸಂಪನ್ನ ಹೊಸನಗರ ತಾಲೂಕಿನ ಗರ್ತಿಕೆರೆ ಸಮೀಪದ ರಾಮನಸರ ಶ್ರೀನಾಗದೇವತೆ, ಚೌಡೇಶ್ವರಿ ಹಾಗೂ ಪರಿವಾರ ದೇವತೆಗಳ ಸುಬ್ರಹ್ಮಣ್ಯ ಷಷ್ಠಿ ಮತ್ತು ಜಾತ್ರಾ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಶನಿವಾರದಂದು ಗಣಹೋಮ, ಪಂಚ ವಿಂಶತಿ, 108 ಕಲಶಾಭಿಷೇಕ, ಕಲಾತತ್ವ ಅಧಿವಾಸ ಹೋಮ, ಆಶ್ಲೇಷಾ ಬಲಿ ನಡೆಯಿತು. ವೇದಮೂರ್ತಿ ವಿದ್ವಾನ್ ಮುರಳೀಧರ ಕೆದ್ಲಾಯ ಹಾಗೂ ಪ್ರಧಾನ ಅರ್ಚಕ ಸುರೇಶ್ ಭಟ್ ಅವರ ತಂಡ ಪೂಜಾ ವಿಧಿವಿಧಾನಗಳ ನೆರವೇರಿಸಿದರು. ಉಡುಪಿ ಜಿಲ್ಲೆ…