ಅಡಿಕೆ ತೋಟದಲ್ಲಿ ಗಾಂಜಾ ಸೇವಿಸಿ ಅಸಭ್ಯವಾಗಿ ವರ್ತಿಸುತಿದ್ದ ಮೂವರ ಬಂಧನ
ಅಡಿಕೆ ತೋಟದಲ್ಲಿ ಗಾಂಜಾ ಸೇವಿಸಿ ಅಸಭ್ಯವಾಗಿ ವರ್ತಿಸುತಿದ್ದ ಮೂವರ ಬಂಧನ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ವಿನಾಯಕ ನಗರದ ಬಳಿಯಲ್ಲಿ ಗಾಂಜಾ ಸೇವನೆ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ ಮೂವರನ್ನು ಪಿಎಸ್‌ಐ ಪ್ರವೀಣ್ ಎಸ್ ಪಿ ನೇತ್ರತ್ವದ ಸಿಬ್ಬಂದಿಗಳು ಬಂಧಿಸಿದ್ದಾರೆ. ರಿಪ್ಪನ್‌ಪೇಟೆ ನಿವಾಸಿಗಳಾದ ವಿಜಯ್ ಕುಮಾರ್ , ವಿನಾಯಕ ಮತ್ತು ಸುಜಿತ್ ಬಂಧಿತ ಆರೋಪಿಯಾಗಿದ್ದಾರೆ. ವೈದ್ಯಕೀಯ ಪರೀಕ್ಷೆಯಿಂದ ಆರೋಪಿ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುವ ಹಿನ್ನಲೆಯಲ್ಲಿ ಮಾದಕ ದ್ರವ್ಯ ಕಾಯ್ದೆಯಡಿ ಆರೋಪಿಗಳನ್ನು ಬಂಧಿಸಲಾಗಿದೆ. ಮಂಗಳವಾರ ಸಾಗರ ರಸ್ತೆಯಲ್ಲಿ…