ಟಾರ್ಪಲ್ ಶೆಡ್ ನಲ್ಲಿ ಬೆಳೆದು ವಿಶ್ವಕಪ್ ಗೆ ಮುತ್ತಿಕ್ಕಿದ ಬಡ ಪ್ರತಿಭೆಗೆ ಬೇಕು ನಿಮ್ಮೆಲ್ಲರ ಆರ್ಥಿಕ ನೆರವು
ವಿಶ್ವಕಪ್ ವಿಜೇತ ಕಾವ್ಯಾಳಿಗೆ ಬೇಕಿಲ್ಲ ಹಾರ ತುರಾಯಿ – ಟಾರ್ಪಲ್ ಶೆಡ್ ನಲ್ಲಿ ಬೆಳೆದು ವಿಶ್ವಕಪ್ ಗೆ ಮುತ್ತಿಕ್ಕಿದ ಬಡ ಪ್ರತಿಭೆಗೆ ಬೇಕು ನಿಮ್ಮೆಲ್ಲರ ಆರ್ಥಿಕ ನೆರವು ಟಿ–20 ಅಂಧರ ವಿಶ್ವಕಪ್‌ನಲ್ಲಿ ಭಾರತದ ಹೆಮ್ಮೆ ಹೆಚ್ಚಿಸಿದ ಮಹಿಳಾ ತಂಡದಲ್ಲಿ ರಿಪ್ಪನ್‌ಪೇಟೆಯ ಕಾವ್ಯಾ.ವಿ ಎಂಬ ಹೆಸರಿದೆ—ಆದರೆ ಆ ಹೆಸರಿನ ಹಿಂದೆ ಅಡಗಿರುವ ಬದುಕಿನ ನೋವು, ಹೋರಾಟ, ಕನಸುಗಳ ಕಥೆ ಯಾರಿಗೂ ಕಾಣುವುದಿಲ್ಲ. ದೇಶಕ್ಕೆ ವಿಶ್ವಕಪ್ ಗೆಲುವು ತಂದುಕೊಟ್ಟ ಈ ಯುವತಿಯ ಕಣ್ಣುಗಳಲ್ಲಿ ಇಂದಿಗೂ “ಮನೆ ಹಾಗೂ ಜೀವನ ಹೇಗೆ…