ಇಂದು ಅಥವಾ ನಾಳೆ ಭೂಮಿಗೆ ಅಪ್ಪಳಿಸಲಿದೆ ಪ್ರಬಲ ಸೌರಚಂಡಮಾರುತ:ಟಿ ವಿ,ಮೊಬೈಲ್, ಜಿಪಿಎಸ್ ಸಿಗ್ನಲ್ ಹಾನಿ ಸಾಧ್ಯತೆ.
ವಾಷಿಂಗ್ಟನ್: ಇಡೀ ಜಗತ್ತು ಕೋವಿಡ್ ಸಂಕಷ್ಟಕ್ಕೆ ಸಿಲುಕಿರುವ ನಡುವೆಯೇ ಭಾರೀ ಪ್ರಮಾಣದ ಸೂರ್ಯನ ಶಾಖದ ಅಲೆಗಳು ಸೌರ ಚಂಡಮಾರುತದ ರೂಪದಲ್ಲಿ ಬುಧವಾರ ಅಥವಾ ಗುರುವಾರ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕೂ ಮುನ್ನ ಭಾನುವಾರ ಅಥವಾ ಸೋಮವಾರ ಸೌರ ಚಂಡಮಾರುತ ಭೂಮಿಗೆ ಬಂದಪ್ಪಳಿಸುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ಆಯಸ್ಕಾಂತೀಯ ಗುಣದ ಚಂಡಮಾರುತ ಎಂದು ಕರೆಯಲ್ಪಡುವ ಇದು ಅತೀ ವೇಗದ ಸೌರ ಮಾರುತವಾಗಿದ್ದು, ಭೂಮಿಯ ಮ್ಯಾಗ್ನೆಟಿಕ್ ವಲಯದ ಮೇಲೆ ಅಪ್ಪಳಿಸುವ ನಿರೀಕ್ಷೆ ಇದೆ ಎಂದು ಹವಾಮಾನ ತಜ್ಞರು…