ದೀಪಾವಳಿ ಸಂಭ್ರಮಕ್ಕೆ ಬೀಗರ ಮನೆಗೆ ಹೊರಟಿದ್ದ ಕುಟುಂಬದವರ ಮೇಲೆ ಜವರಾಯನ ಅಟ್ಟಹಾಸ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ದಾರುಣ ಸಾವು!!!
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಬಳಿ ಬೈಕ್ ಹಾಗೂ 407 ಟೆಂಪೋ ವಾಹನದ ನಡುವೆ ಮುಖಾಮುಖಿ ಅಪಘಾತ ವಾಗಿದ್ದು ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿ ತಂದೆ ಕೂಡ ಸಾವನ್ನಪ್ಪಿರುವ ಘಟನೆ ನಡೆದಿದೆ. ಒಂದೇ ಕುಟುಂಬದ ನಾಲ್ವರು ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಎದುರು ಭಾಗದಿಂದ ಬಂದ 407 ಟೆಂಪೋ ವಾಹನ ಡಿಕ್ಕಿ ಹೊಡೆದಿದ್ದು ರಾಮಚಂದ್ರ ವೀರಪ್ಪ ( 42) ಪುಟಾಣಿ ಮಕ್ಕಳಾದ ಶಶಾಂಕ್( 11) ಆದರ್ಶ( 5)ಸ್ಥಳದಲ್ಲೇ ಅಸುನೀಗಿದ್ದಾರೆ. ಇನ್ನೂ ಪತ್ನಿ ಭಾಗ್ಯಮ್ಮನಿಗೂ ಕೂಡ…