ಕಾರ್ ಚಾಲಕನ ಎಡವಟ್ಟು, ಚರಂಡಿಗೆ ಇಳಿದ ಖಾಸಗಿ ಬಸ್ : ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ
ರಿಪ್ಪನ್ ಪೇಟೆ : ಕಾರ್ ಚಾಲಕನ ಎಡವಟ್ಟಿನಿಂದ ಸಂಭವಿಸಲಿದ್ದ ಭಾರಿ ಅಪಘಾತವೊಂದು. ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಬಸ್ಸಿನಲ್ಲಿ 40ಕ್ಕೂ ಅಧಿಕ ಪ್ರಯಾಣಿಕರು ಇದ್ದರು. ರಿಪ್ಪನ್ ಪೇಟೆಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಇಳಿದ ಘಟನೆ ಗುರುವಾರದ ಸೂಡೂರು ನಡೆದಿದೆ. ಎದುರಿನಿಂದ ಬಂದ ಕಾರು ಚಾಲಕನೋರ್ವ ತನ್ನ ಕಾರನ್ನು ಅಡ್ಡಾದಿಡ್ಡಿ ಚಲಿಸಿದ ಪರಿಣಾಮ, ಅಪಘಾತವನ್ನು ತಪ್ಪಿಸಲು ಖಾಸಗಿ ಬಸ್ಸನ್ನು ರಸ್ತೆ ಬದಿಗೆ…