RIPPONPETE | ಬೈರಾಪುರದಲ್ಲಿ ಪಂಚಲೋಹ ದೇವರ ಮೂರ್ತಿಗಳ ಕಳವು ,ಗ್ರಾಮಸ್ಥರಲ್ಲಿ ಆತಂಕ, ನೋನಿ ಸಂಪ್ರದಾಯಕ್ಕೆ ಧಕ್ಕೆ!!
RIPPONPETE | ಬೈರಾಪುರದಲ್ಲಿ ಪಂಚಲೋಹ ದೇವರ ಮೂರ್ತಿಗಳ ಕಳವು ,ಗ್ರಾಮಸ್ಥರಲ್ಲಿ ಆತಂಕ, ನೋನಿ ಸಂಪ್ರದಾಯಕ್ಕೆ ಧಕ್ಕೆ!! ರಿಪ್ಪನ್‌ಪೇಟೆ : ಬೆನವಳ್ಳಿ ಗ್ರಾಮದ ವ್ಯಾಪ್ತಿಯ ಮುಡುಬ ಬೈರಾಪುರ ಭಾಗದಲ್ಲಿ ಭೂಮಿಗಡಿಯಲ್ಲಿ ಪರಂಪರೆಯಾಗಿ ಪ್ರತಿಷ್ಠಾಪಿಸಲಾಗಿದ್ದ ಪಂಚಲೋಹದ ದೇವರ ಮೂರ್ತಿಗಳು ಕಳವಾಗಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಪ್ರತಿವರ್ಷ ದೀಪಾವಳಿ ಹಬ್ಬದ ನೋನಿ ಆಚರಣೆಯ ಅಂಗವಾಗಿ ಗ್ರಾಮಸ್ಥರು ಬನಕ್ಕೆ ತೆರಳಿ ಕಳೆದ ವರ್ಷ ಮಡಿಕೆಯಲ್ಲಿ ಇಟ್ಟು ಭೂಮಿಗೆ ಮುಚ್ಚಿ ಇರಿಸಿದ್ದ ಮೂರ್ತಿಗಳನ್ನು ಹೊರತೆಗೆದು ಪೂಜೆ ಸಲ್ಲಿಸುವುದು ಪರಂಪರೆಯಾಗಿತ್ತು , ಇದೇ ಪ್ರಕಾರ …