ಎಲ್ಲ ಧರ್ಮಗಳಿಗಿಂತ ಮಾನವ ಧರ್ಮ ಶ್ರೇಷ್ಠ : ಫಾದರ್ ವೀರೇಶ್ ವಿ ಮೋರಸ್ |ರಿಪ್ಪನ್‌ಪೇಟೆಯಲ್ಲಿ ನಡೆದ ಸೌಹಾರ್ದ ಸಮ್ಮಿಲನ ಕಾರ್ಯಕ್ರಮ
ರಿಪ್ಪನ್‌ಪೇಟೆ : ಎಲ್ಲಾ ಧರ್ಮಗಳಿಗಿಂತ ಮಾನವ ಧರ್ಮ ಶ್ರೇಷ್ಠ ಎಂಬುವುದನ್ನು ಕೋವಿಡ್ ಎಂಬ ಖಾಯಿಲೆ ಇಡೀ ಮನುಕುಲಕ್ಕೆ ಉತ್ತಮ ಪಾಠವನ್ನು ಕಲಿಸಿಕೊಟ್ಟಿದೆ.ಇಂದಿನ ಕಾಲದಲ್ಲಿ ಮನುಷ್ಯತ್ವ ಮಾತ್ರ ಜೀವಂತವಾಗಿದೆ ಎಂದು ಶಿವಮೊಗ್ಗ ಕ್ರೈಸ್ತ ಧರ್ಮ ಕ್ಷೇತ್ರದ ಧರ್ಮ ಗುರು ಫಾದರ್ ವೀರೇಶ್ ವಿ. ಮೋರಸ್ ಹೇಳಿದರು. ಗುರುವಾರ ಸಂಜೆ ರಿಪ್ಪನ್ ಪೇಟೆಯ ಮೊಹಿಯುದ್ದೀನ್ ಜುಮ್ಮಾ ಮಸೀದಿ ವತಿಯಿಂದ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಇಲಾಲ್ ಹಬೀಬ್ ಮಿಲಾದ್ ಧಾರ್ಮಿಕ ಸಮ್ಮೇಳದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡಿ ಎಲ್ಲಾ…