ರಿಪ್ಪನ್‌ಪೇಟೆ ಬಳಿ ಬೈಕ್ ಗೆ ಹಿಂಬದಿಯಿಂದ ಗುದ್ದಿದ ಟ್ಯಾಂಕರ್ ಲಾರಿ : ಬೈಕ್ ಸವಾರ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲು
ರಿಪ್ಪನ್ ಪೇಟೆ: ಪಟ್ಟಣದ ಸಿದ್ದಪ್ಪನಗುಡಿಯ ಬಳಿ ನಡೆದ ರಸ್ತೆ ಅಪಘಾತದಲ್ಲಿ ಲಾರಿ ಚಾಲಕನ ಅಜಾಗರೂಕತೆಯಿಂದ ಬೈಕ್ ಸವಾರನಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ಇಂದು ಬೆನವಳ್ಳಿ ಗ್ರಾಮದ ನಿವಾಸಿ ನಿವೃತ್ತ ಅರಣ್ಯ ಅಧಿಕಾರಿ ಮಂಜುನಾಥ್ ರಿಪ್ಪನ್‌ಪೇಟೆ ಯಿಂದ ಬೆನವಳ್ಳಿಗೆ ಬೈಕ್ ನಲ್ಲಿ ಹೋಗುತಿದ್ದಾಗ ಸಿದ್ಧಪ್ಪನಗುಡಿ ಹತ್ತಿರ ಹಿಂಬದಿಯಿಂದ ಟ್ಯಾಂಕರ್ ಲಾರಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬೈಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆಸಿದ ಪರಿಣಾಮ ಬೈಕ್ ಸಮೇತ ಟಾರ್ ರಸ್ತೆಗೆ ಬಿದ್ದು, ಬೈಕ್ ಸವಾರ ಮಂಜುನಾಥ್…