ವರದಕ್ಷಿಣೆ ಕಿರುಕುಳದಿಂದ ಬೇಸತ್ತು ನವವಿವಾಹಿತೆ ಆತ್ಮಹತ್ಯೆ – ಪ್ರಕರಣ ದಾಖಲು|Dowry case
ನೂರಾರು ಕನಸು ಹೊತ್ತು ಮದುವೆಯಾಗಿದ್ದ ನವ ವಿವಾಹಿತೆ ವರದಕ್ಷಿಣೆ ಭೂತಕ್ಕೆ ಬಲಿಯಾಗಿರುವ ಘಟನೆ ಶಿವಮೊಗ್ಗ ಶಿಕಾರಿಪುರದ ಶಿರಾಳಕೊಪ್ಪದ ಉಡುಗುಣಿ ಗ್ರಾಮದಲ್ಲಿ ನಡೆದಿದೆ. ನವವಿವಾಹಿತೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕಳೆದ ವರ್ಷವಷ್ಟೇ ಮದುವೆಯಾಗಿದ್ದ ಸಂಗೀತಾ ಅನುಮಾನಸ್ಪದವಾಗಿ ಸಾವನಪ್ಪಿದ್ದು, ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಂಡ, ಅತ್ತೆ ಮಾವನ ಕಿರುಕುಳಕ್ಕೆ ಅಮಾಯಕ ಜೀವ ಬಲಿಯಾಗಿದ್ದು, ಸಂಗೀತಾ ನೂರಾರು ಕನಸು ಹೊತ್ತು ಹರೀಶ್ ಎಂಬಾತನ ಜೊತೆ ಮದುವೆಯಾಗಿದ್ದರು. ಸಂಗೀತಾ ಪೋಷಕರು ಚಿನ್ನ, ಹಣ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿದ್ದರು. ಮದುವೆಯಾದ ಆರು ತಿಂಗಳಿಗೆ…