ರಿಪ್ಪನ್‌ಪೇಟೆ : ಚಿರತೆ ಇದೆ ಹುಷಾರ್…. ಎಂದು ಬುದ್ದಿವಾದ ಹೇಳಿದ್ದಕ್ಕೆ ವ್ಯಕ್ತಿಯ ಮೇಲೆ ಬಿಯರ್ ಬಾಟಲ್ ನಿಂದ ಮಾರಣಾಂತಿಕ ಹಲ್ಲೆ|assault
ರಿಪ್ಪನ್‌ಪೇಟೆ : ಇಲ್ಲಿನ ಕೆಂಚನಾಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊನ್ನಕೊಪ್ಪ ಗ್ರಾಮದಲ್ಲಿ ಚಿರತೆ ಇದೆ ಹುಷಾರು ಎಂದು ಹೇಳಿದ್ದಕ್ಕೆ ಬಿಯರ್ ಬಾಟಲ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೊನ್ನಕೊಪ್ಪ ಗ್ರಾಮದ ದಿನೇಶ್ (42) ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಇವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ ರಾತ್ರಿ 10-00 ಗಂಟೆ ಸುಮಾರಿಗೆ ತನ್ನ ಮಗನನ್ನು ಶಾಲಾ ಪ್ರವಾಸಕ್ಕೆ ಕಳುಹಿಸಲು ಅರಸಾಳು ಶಾಲೆಗೆ ಬಿಟ್ಟು ವಾಪಾಸ್ ಹಿಂದಿರುಗುತಿದ್ದ…