ಅಂಗನವಾಡಿ ಮಗುವಿಗೆ ಬೈಕ್ ಡಿಕ್ಕಿ – ಅಂಗನವಾಡಿಗೆ ಬೀಗ ಜಡಿದು ಗ್ರಾಮಸ್ಥರ ಪ್ರತಿಭಟನೆ|accident-protes
ಅಂಗನವಾಡಿ ಮಗುವಿಗೆ ಬೈಕ್ ಡಿಕ್ಕಿಯಾದ ಹಿನ್ನಲೆಯಲ್ಲಿ ಗ್ರಾಮಸ್ಥರು ಮತ್ತು ಪೋಷಕರು ಅಂಗನವಾಡಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ. ಸಾಗರ ತಾಲೂಕಿನ ಆನಂದಪುರ ಸಮೀಪದ ಲಕ್ಕವಳ್ಳಿ ಅಂಗನವಾಡಿ ಕೇಂದ್ರದ ಮಗು ಅಂಗನವಾಡಿಯಿಂದ ರಸ್ತೆ ದಾಟುವಾಗ ಅಪಘಾತವಾಗಿ ಗಾಯಗೊಂಡ ಘಟನೆಯನ್ನು ಪ್ರತಿಭಟಿಸಿ ಸ್ಥಳೀಯ ಆಡಳಿತ ಹಾಗೂ ಗ್ರಾಮಸ್ಥರು ಅಂಗನವಾಡಿಗೆ ಶುಕ್ರವಾರ ಬೀಗ ಹಾಗಿ ಪ್ರತಿಭಟನೆ ನಡೆಸಿದ್ದಾರೆ. ಗುರುವಾರ ಮಗು ಅಂಗನವಾಡಿಯಿಂದ ಮನೆಗೆ ತೆರುಳುವಾಗ ಬೈಕ್ ಡಿಕ್ಕಿಯಾಗಿ ಮಗು ಮುಖ, ತಲೆಗೆ ಪೆಟ್ಟು ಬಿದ್ದಿದೆ. ಸಂಜೆ ಆದ ಕಾರಣ…