Headlines

ಶಿವಮೊಗ್ಗದಲ್ಲಿ ಗಲಭೆಗೆ ಹುನ್ನಾರ – ಆಯನೂರು ಮಂಜುನಾಥ್ ಹೇಳಿಕೆಯನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಲಿ – ಕೆ ದಿವಾಕರ್|AAP

ಶಿವಮೊಗ್ಗದಲ್ಲಿ ಗಲಭೆಗೆ ಹುನ್ನಾರ -ಆಯನೂರು ಹೇಳಿಕೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಲಿ – ಕೆ ದಿವಾಕರ್

ರಿಪ್ಪನ್‌ಪೇಟೆ : ಶಿವಮೊಗ್ಗ ನಗರದಲ್ಲಿ ಚುನಾವಣೆಯ ಹಿನ್ನಲೆಯಲ್ಲಿ ಗಲಭೆಗೆ ಸಿದ್ದತೆ ನಡೆದಿದೆ ಎಂಬ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿಕೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಕೂಡಲೇ ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ಸಾಗರ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ನಿಯೋಜಿತ ಅಭ್ಯರ್ಥಿ ಕೆ ದಿವಾಕರ್ ಆಗ್ರಹಿಸಿದರು.




ಸೋಮವಾರ ಪಟ್ಟಣದ ಆಮ್ ಆದ್ಮಿ ಪಕ್ಷದ ಕಛೇರಿಯಲ್ಲಿ ಪತ್ರೀಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಒಬ್ಬ ಆಡಳಿತ ಪಕ್ಷದ ಜನಪ್ರತಿನಿಧಿ ಚುನಾವಣೆಗಾಗಿ ಗಲಭೆ ನಡೆಯುತ್ತದೆ ಎನ್ನುತಿದ್ದು ಈ ಬಗ್ಗೆ ಉನ್ನತ ಮಟ್ಟದ ತಖಿಖಾ ದಳ ರಚಿಸಿ ತನಿಖೆ ನಡೆಸುವ ಮೂಲಕ ಮುಂದಾಗುವ ಅನಾಹುತವನ್ನು ತಪ್ಪಿಸಬೇಕಾಗಿದೆ ಇದರಿಂದ ಅಮಾಯಕರು ಬಲಿ ಪಶುಗಳಾಗುವುದರ ಜೊತೆಗೆ ಸಂಕಷ್ಟಕ್ಕೆ ಸಿಲುಕುತ್ತಾರೆ. ಆದ್ದರಿಂದ ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗ ತತ್ತಕ್ಷಣದಿಂದ ಈ ಬಾರಿಯ ಕರ್ನಾಟಕ ವಿಧಾನಸಭೆಯ ಚುನಾವಣೆ ಮುಗಿಯುವವರೆಗೂ ಮಿಲಿಟರಿ ಪಡೆಯನ್ನು ಶಿವಮೊಗ್ಗ ನಗರ ಹಾಗೂ ಜಿಲ್ಲೆಯಲ್ಲಿ ನಿಯೋಜಿಸಬೇಕು. ಆಯನೂರು ಮಂಜುನಾಥ ರವರ ಅಪವಾದನೆಯನ್ನು ಚುನಾವಣಾ ಆಯೋಗ ಕಡೆಗಣಿಸದೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.


ದೇಶ ಹಾಗೂ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಕಪ್ಪು ಹಣದಿಂದ ಚುನಾವಣೆ ನಡೆಸುತ್ತಿವೆ  ರಾಜ್ಯದ ಅಭಿವೃದ್ಧಿಗೆ ಹಾಗೂ ಉತ್ತಮ ಆಡಳಿತಕ್ಕಾಗಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಬೇಕೆಂದು ಹೇಳಿದರು.

 ಆಮ್ ಆದ್ಮಿ ಪಕ್ಷವು ಭ್ರಷ್ಟಾಚಾರ ಮುಕ್ತವಾಗಿದ್ದು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ಸಿನಂತೆ ಕಪ್ಪು ಹಣಕ್ಕಾಗಿ ಆತುರೆಯುವುದಿಲ್ಲ ಯಾವಾಗಲೂ ಜನಪರ ಹಾಗೂ ಅಭಿವೃದ್ಧಿ ಪರವಾಗಿದ್ದು ಉತ್ತಮ ಆಡಳಿತವನ್ನು ನೀಡುವುದರ ಮೂಲಕ ದೇಶದ ಹಾಗೂ ರಾಜ್ಯದ ಪ್ರಗತಿಗೆ  ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು  ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದರ ಮೂಲಕ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲು ಬೆಂಬಲಿಸಬೇಕು ಎಂದರು.




 ಈಗಾಗಲೇ ರಾಷ್ಟ್ರವನ್ನು ಹಾಗೂ ರಾಜ್ಯವನ್ನು ಆಳಿದ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷವನ್ನು ತೊರೆದು  ಆಮ್ ಆದ್ಮಿ ಪಕ್ಷದತ್ತ ಮತದಾರರು ಒಲವನ್ನು ತೋರಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದಲ್ಲಿ ಹೇಗೆ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಅವರದೇ ಪಕ್ಷದ ಹಿರಿಯ ಮುಖಂಡರುಗಳು ಹೇಳುತ್ತಿದ್ದಾರೆ. ಈಗಾಗಲೇ ಕೆಲವು ಹಿರಿಯ ಮುಖಂಡರುಗಳು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ದೆಹಲಿ ಹಾಗೂ ಪಂಜಾಬಿನಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ  ಪಕ್ಷವು ಅಭಿವೃದ್ಧಿ ಹಾಗೂ ಜನಪರ ಕಾರ್ಯಕ್ರಮಗಳ ಮೂಲಕ ಆ ರಾಜ್ಯಗಳ ಜನರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಈ ಬಾರಿ ಕರ್ನಾಟಕದ ಜನತೆ ಆಮ್ ಆದ್ಮಿ ಪಕ್ಷಕ್ಕೆ ಬೆಂಬಲಿಸುವ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಸರಿಯಾಗಿ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಮತ್ತು ಬಿಜೆಪಿ ಪಾಪದ ಹಣದಲ್ಲಿ ಚುನಾವಣೆ ಮಾಡುತ್ತಾರೆ

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷವು ಈ ಬಾರಿ ಜನರಿಂದ ಕೊಳ್ಳೆ ಹೊಡೆದ ಪಾಪಾದ ಹಣದಲ್ಲಿ ಚುನಾವಣೆ ನಡೆಸುತ್ತಾರೆ.ಅದಕ್ಕೆ ಉದಾಹರಣೆಯಾಗಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಅಲ್ಲಲ್ಲಿ ವಶ ಪಡಿಸಿಕೊಳ್ಳುತ್ತಿರುವ ಅಕ್ರಮ ಮದ್ಯ,ಸೀರೆ ,ಕುಕ್ಕರ್ ಕೋಟಿಗಟ್ಟಲೇ ಹಣವೇ ಸಾಕ್ಷಿಯಾಗಿದೆ ಎಂದರು.

ಬೇಳೂರು ಮೂಲ ಕಾಂಗ್ರೆಸ್ಸಿಗರಲ್ಲ ಎಂದವರು ಈಗ ಹೊತ್ತು ಮೆರೆಯುತಿದ್ದಾರೆ.

ಬೇಳೂರು ಗೋಪಾಲಕೃಷ್ಣ ಮೂಲ ಕಾಂಗ್ರೆಸ್ಸಿಗನಲ್ಲ ಹಾಗಾಗಿ ಅವರಿಗೆ  ಟಿಕೆಟ್ ನೀಡಬಾರದು ಎಂದು ಬೆಂಗಳೂರಿನಲ್ಲಿ ಲಾಭಿ‌ ಮಾಡಿದ್ದ ಕಾಗೋಡು ತಿಮ್ಮಪ್ಪ ಈಗ ಅವರನ್ನೇ ಹೊತ್ತು ಮೆರೆಸುತಿದ್ದಾರೆ.ಕಾಂಗ್ರೆಸ್ ನಲ್ಲಿ ಹತ್ತಾರು ಬಣಗಳಿದ್ದು ಅದರ ಫಲಿತಾಂಶ ಈ ಚುನಾವಣೆಯಲ್ಲಿ ಅವರು ಪಡೆಯಲಿದ್ದಾರೆ ಎಂದರು.




ಸಾಗರ ಕ್ಷೇತ್ರದ ಹಾಲಿ ಶಾಸಕ ಹರತಾಳು ಹಾಲಪ್ಪ ರವರ ವಿರುದ್ದ ಅವರದೇ ಪಕ್ಷದಲ್ಲಿ ನೂರೆಂಟು ವಿಘ್ನಗಳಿವೆ ಹೀಗಿದ್ದು ನನ್ನನ್ನು ಕೇವಲ ಒಂದು ಜಾತಿಗೆ ಸೀಮಿತ ಮಾಡುವ ಮೂಲಕ ನನ್ನನ್ನು ಹೆಣೆಯುವ ಕೆಲಸ ಮಾಡುತಿದ್ದಾರೆ.ಆಮ್ ಆದ್ಮಿ ಪಕ್ಷವು ಸಾಗರ ಕ್ಷೇತ್ರದಲ್ಲಿ ಸಂಘಟನಾತ್ಮಕವಾಗಿ ಕೆಲಸ ಮಾಡುತಿದ್ದು ಎಲ್ಲರೂ ಅಚ್ಚರಿ ಪಡುವಂತಹ ಫಲಿತಾಂಶ ಹೊರಬೀಳಲಿದೆ ಎಂದರು.

ಈ ಸಂಧರ್ಭದಲ್ಲಿ ಆಮ್ ಆದ್ಮಿ ಪಕ್ಷದ ತಾಲೂಕ್ ಅಧ್ಯಕ್ಷ ಗಣೇಶ್ ಸೂಗೋಡು ,ಮುಖಂಡರಾದ ಸಂತೋಷ್ ಆಶ್ರೀತಾ ,ಈಶ್ವರಪ್ಪ ಗೌಡ ಹಾಗೂ ಇನ್ನಿತರರಿದ್ದರು.



Leave a Reply

Your email address will not be published. Required fields are marked *