Hosanagara | “ಶ್ರೀ ಶಿವಲಿಂಗೇಶ್ವರ” ಪ್ರಶಸ್ತಿಗೆ ಹೊಸನಗರದ ಡಾ.ಗುರುರಾಜ್ ಆಯ್ಕೆ
ಶ್ರೀ ಶಿವಲಿಂಗೇಶ್ವರ ಪ್ರಶಸ್ತಿಗೆ’’ ಹೊಸನಗರದ ಡಾ.ಗುರುರಾಜ ಆಯ್ಕೆ ರಿಪ್ಪನ್‌ಪೇಟೆ;-ಕೋಣಂದೂರು ಶ್ರೀಕ್ಷೇತ್ರ ಶಿವಲಿಂಗೇಶ್ವರ ಬೃಹನ್ಮಠದವರು ಕೊಡಮಾಡುವ ಶ್ರೀ ಶಿವಲಿಂಗ ಶ್ರೀ ಪ್ರಶಸ್ತಿಗೆ ಹೊಸನಗರದ ಡಾ.ಗುರುರಾಜರವರನ್ನು ಆಯ್ಕೆ ಮಾಡಲಾಗಿದೆ ಎಂದು ಕೋಣಂದೂರು ಬೃಹನ್ಮಠದ ಷ.ಬ್ರ.ಶ್ರೀಪತಿಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು. ವೈದ್ಯ ನಾರಾಯಣೋ ಹರಿ ಎಂಬುದು ದಾರ್ಶನಿಕರ ಅಭಿಪ್ರಾಯವಾಗಿದ್ದರೆ ವೈದ್ಯರು ದೇವರಿಗೆ ಸಮಾನ ದೇವರನ್ನು ಯಾರು ಪ್ರತ್ಯಕ್ಷವಾಗಿ ಕಂಡಿಲ್ಲ.ಅದರೆ ನಮ್ಮ ಸಮಾಜದಲ್ಲಿರುವ ಕೆಲವೊಬ್ಬ ವೈದ್ಯರುಗಳು ದೇವರ ರೂಪದಲ್ಲಿ ಬಂದು ರೋಗಿಗಳಿಗೆ ಜೀವ ಉಳಿಸಿದ ಮಾನಸಿಕ ಧೈರ್ಯ ತುಂಬಿದ ಎಷ್ಟೋ ಉದಾಹರಣೆಗಳಿವೆ.ಅಂತಹ ಸಾಕಷ್ಟು…