Headlines

Hosanagara | “ಶ್ರೀ ಶಿವಲಿಂಗೇಶ್ವರ” ಪ್ರಶಸ್ತಿಗೆ ಹೊಸನಗರದ ಡಾ.ಗುರುರಾಜ್ ಆಯ್ಕೆ


ಶ್ರೀ ಶಿವಲಿಂಗೇಶ್ವರ ಪ್ರಶಸ್ತಿಗೆ’’ ಹೊಸನಗರದ ಡಾ.ಗುರುರಾಜ ಆಯ್ಕೆ


ರಿಪ್ಪನ್‌ಪೇಟೆ;-ಕೋಣಂದೂರು ಶ್ರೀಕ್ಷೇತ್ರ ಶಿವಲಿಂಗೇಶ್ವರ ಬೃಹನ್ಮಠದವರು ಕೊಡಮಾಡುವ ಶ್ರೀ ಶಿವಲಿಂಗ ಶ್ರೀ ಪ್ರಶಸ್ತಿಗೆ  ಹೊಸನಗರದ ಡಾ.ಗುರುರಾಜರವರನ್ನು ಆಯ್ಕೆ ಮಾಡಲಾಗಿದೆ ಎಂದು ಕೋಣಂದೂರು ಬೃಹನ್ಮಠದ ಷ.ಬ್ರ.ಶ್ರೀಪತಿಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು. 

ವೈದ್ಯ ನಾರಾಯಣೋ ಹರಿ ಎಂಬುದು ದಾರ್ಶನಿಕರ ಅಭಿಪ್ರಾಯವಾಗಿದ್ದರೆ ವೈದ್ಯರು ದೇವರಿಗೆ ಸಮಾನ ದೇವರನ್ನು ಯಾರು ಪ್ರತ್ಯಕ್ಷವಾಗಿ ಕಂಡಿಲ್ಲ.ಅದರೆ ನಮ್ಮ ಸಮಾಜದಲ್ಲಿರುವ ಕೆಲವೊಬ್ಬ ವೈದ್ಯರುಗಳು ದೇವರ ರೂಪದಲ್ಲಿ ಬಂದು ರೋಗಿಗಳಿಗೆ ಜೀವ ಉಳಿಸಿದ ಮಾನಸಿಕ ಧೈರ್ಯ ತುಂಬಿದ ಎಷ್ಟೋ ಉದಾಹರಣೆಗಳಿವೆ.ಅಂತಹ ಸಾಕಷ್ಟು ವೈದ್ಯರುಗಳ ಸಾಲಿನಲ್ಲಿ  ಹೊಸನಗರ ಪಟ್ಟಣದ ಶ್ರೀ ಪ್ರಭು ಕ್ಲಿನಿಕ್‌ನ ಡಾ.ಗುರುರಾಜ ರವರು ಒಬ್ಬರು ತಮ್ಮ ಕರ್ತವ್ಯದ ದಿನಗಳಲ್ಲಿ ಚಾಚು ತಪ್ಪದೆ ಕಾಯಕ ನಿಷ್ಟೆಯನ್ನು ಪ್ರಾಮಾಣಿಕವಾಗಿ ಪಾಲಿಸಿದವರು.ಕವಿ ಸಾಹಿತ್ಯ ಸಮಾಜಿಕ ಧಾರ್ಮಿಕ ನೆಲ ಜಲ ಭಾಷೆಗಳ ವಿಚಾರದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು ಹಲವು ಸಂದರ್ಭಗಳಲ್ಲಿ ಉದಾರ ದೇಣಿಗೆ ನೀಡುವುದರೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಂತಹ ಸರಳ ವ್ಯಕ್ತಿತ್ವದ ವೈದ್ಯ ಡಾ.ಗುರುರಾಜರವರ ಸೇವಾ ಕಾರ್ಯವನ್ನು ಗುರುತಿಸಿ  ಕೋಣಂದೂರು ಶಿವಲಿಂಗೇಶ್ವರ ಪ್ರಶಸ್ತಿಗೆ ಆಯ್ಕೆಮಾಡಿರುವುದು ಸಮಯೋಚಿತವಾಗಿದೆ ಎಂದು ಹೇಳಿದರು.

 ಇದೇ ಜನವರಿ 14 ರಂದು ಏರ್ಪಡಿಸಲಾಗಿರುವ ಮಕರ ಸಂಕ್ರಾಂತಿಯ ಜಾತ್ರಾ ಮಹೋತ್ಸವದಲ್ಲಿ ಆನಂದಪುರ ಮುರುಘಾರಾಜೇಂದ್ರ ಸಂಸ್ಥಾನ ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಜೀ ಪ್ರಶಸ್ತಿ ಪ್ರಧಾನ ಮಾಡುವರು.

Leave a Reply

Your email address will not be published. Required fields are marked *