Headlines

ಪುರಾಣ ಪ್ರಸಿದ್ದ ಕೆರೆಹಳ್ಳಿಯ ಶ್ರೀರಾಮೇಶ್ವರ ದೇವರ ಪುನರ್ ಪ್ರತಿಷ್ಠಾಪನೆ

ರಿಪ್ಪನ್‌ಪೇಟೆ: ಪುರಾಣಪ್ರಸಿದ್ಧ ಕೆರೆಹಳ್ಳಿಯ ಶ್ರೀರಾಮೇಶ್ವರ ಸ್ವಾಮಿಯ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ, ನೂತನ ದೇವಸ್ಥಾನದ ಕಟ್ಟಡದಲ್ಲಿ ಫೆ. 13 ರ ಭಾನುವಾರ ನೆರವೇರಲಿದೆ. ಪುರಾಣಕಾಲದ ಐತಿಹ್ಯವನ್ನು ಹೊಂದಿರುವ ದೇವರನ್ನು ಸೀತಾರಾಮರು ವನವಾಸ ಕಾಲದ ಸಂದರ್ಭದಲ್ಲಿ ಶಿವನ ಆರಾಧನೆಗಾಗಿ ಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದರೆಂಬ ಪ್ರತೀತಿ ಇಲ್ಲಿನ ಜನರಲ್ಲಿ ಪ್ರಚಲಿತದಲ್ಲಿದೆ.  ಪ್ರಾಚೀನಕಾಲದ ಶಿಥಿಲಾವಸ್ಥೆಗೊಂಡಿದ್ದ ದೇವಸ್ಥಾನವನ್ನು ತೆರವುಗೊಳಿಸಿ ಶಿವನ ಲಿಂಗವನ್ನು ವಿಸರ್ಜಿಸಲಾಗಿತ್ತು. ಭಕ್ತರ ಅಭಿಲಾಷೆಯಂತೆ ದಾನಿಗಳ ಸಹಾಯದಿಂದ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ನೂತನ ದೇವಾಲಯ ರೂಪುಗೊಂಡಿದ್ದು, ಸುಸಜ್ಜಿತ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ…

Read More

ಕಲ್ಲೂರು ಗ್ರಾಮದಲ್ಲಿ ಶಾಂತವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವ:

ಲಕ್ಷಾಂತರ ಜನರ ಬದುಕಿಗೆ ಭರವಸೆ  ತುಂಬಿದ, ಭೂಮಿ ಹಕ್ಕು ಕೊಡಿಸಲು ಮಲೆನಾಡಿನಲ್ಲಿ ಹೊತ್ತಿಸಿದ ಕಿಡಿ ರಾಜ್ಯಾದ್ಯಂತ ಹರಡಿ ಸಮ ಸಮಾಜದ ಬದುಕಿಗೆ ಕಟ್ಟಿದ ಹೊಸ ಕನಸನ್ನು ನನಸು ಮಾಡಲು ಸಾಧ್ಯ ಎಂದು ತೋರಿಸಿಕೊಟ್ಟ ಕರ್ನಾಟಕ ರಾಜಕಾರಣದಲ್ಲಿ ತಮ್ಮದೇ ಆದ ವಿಶೇಷ ಛಾಪು ಮೂಡಿಸಿರುವ ಶಾಂತವೇರಿ ಗೋಪಾಲಗೌಡರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.  ಭಾನುವಾರ ಸಂಜೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೂರು ಗ್ರಾಮದಲ್ಲಿ ನಡೆದ ಶಾಂತವೇರಿ…

Read More

2 ಕೆಜಿ ಗಾಂಜಾ ಸಹಿತ ಆರೋಪಿಗಳು ಅರೆಸ್ಟ್! ಗಡಿಪಾರಾದ ರೌಡಿಶೀಟರ್ ನಿಂದ ಆಂಧ್ರದ ಗಾಂಜಾ ಜಿಲ್ಲಾದ್ಯಂತ ಸಪ್ಲೈ..!!???

ಶಿವಮೊಗ್ಗ ಪೊಲೀಸರು ಗಾಂಜಾ ವಿಚಾರದಲ್ಲಿ ಇವತ್ತು ಮತ್ತೊಂದು ಭರ್ಜರಿ ಬೇಟೆಯಾಡಿದ್ದಾರೆ. ಸಿಟಿ ಲಿಮಿಟ್​ನಲ್ಲಿಯೇ ಗಾಂಜಾ ಮಾರುತ್ತಿದ್ದ ಆರೋಪಿಗಳನ್ನ ಬಂಧಿಸಿ ಬರೋಬ್ಬರಿ 2 ಕೆಜಿ ಗಾಂಜಾವನ್ನು ಜಪ್ತಿ ಮಾಡಿದ್ಧಾರೆ.  ಶಿವಮೊಗ್ಗ ನಗರದ ಎಂ.ಆರ್.ಎಸ್. ನಿಂದ  ವಡ್ಡಿನಕೊಪ್ಪದ ಕಡೆಗೆ ಹೋಗುವ ರಸ್ತೆಯ  ಸಮೀಪ ಇರುವ ಕೆಇಬಿ ಖಾಲಿ ಜಾಗದಲ್ಲಿ ಕೆಲವರು ಗಾಂಜಾ ಮಾರುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ  ಡಿ.ಸಿ.ಆರ್.ಬಿ ಪೊಲೀಸ್ ಉಪಾಧೀಕ್ಷಕ  ಪ್ರಭು ಡಿ.ಟಿ ನೇತ್ರತ್ವದಲ್ಲಿ ಸಿಇಎನ್ ಕ್ರೈಂ ಪೊಲೀಸ್ ಠಾಣೆ ದೀಪಕ್, ಎಂ.ಎಸ್ ಟೀಂ …

Read More

ಇನ್ಶುರೆನ್ಸ್‌ ಇಲ್ಲದೆ ಓಡಾಡುತ್ತಿರುವ ತಹಶೀಲ್ದಾರರ ವಾಹನ !?

ಇನ್ಶುರೆನ್ಸ್‌ ಇಲ್ಲದೆ ಓಡಾಡುತ್ತಿರುವ ತಹಶೀಲ್ದಾರರ ವಾಹನ !?Tahsildar’s vehicle running without insurance!? ಸಾರ್ವಜನಿಕರ ವಾಹನಕ್ಕೆ ಒಂದು ನ್ಯಾಯ – ಸರ್ಕಾರಿ ವಾಹನಕ್ಕೆ ಒಂದು ನ್ಯಾಯ.! ಇದು ಸರಿಯೇ ? ಸಾರ್ವಜನಿಕರ ಪ್ರಶ್ನೆ? ತೀರ್ಥಹಳ್ಳಿ(Thirthahalli) : ವಾಹನ ಓಡಿಸುವಾಗ ಸರಿಯಾದ ದಾಖಲೆಗಳನ್ನು ಇಟ್ಟುಕೊಂಡು ಹೋಗಬೇಕು ಎಂಬುವುದು ಕಾನೂನು, ಆ ಕಾನೂನನ್ನು ಪ್ರತಿಯೊಬ್ಬರು ಚಾಚು ತಪ್ಪದೆ ಮಾಡಲೇಬೇಕು. ವಾಹನಗಳಲ್ಲಿ ಸರಿಯಾದ ದಾಖಲಾತಿ ಇಟ್ಟುಕೊಳ್ಳದೆ ಹೋದರೆ ದಂಡ ಕಟ್ಟಬೇಕಾಗುತ್ತದೆ.ಹೀಗೆ ಸಾರ್ವಜನಿಕರ ವಾಹನಗಳನ್ನು ತಡೆದು ದಾಖಲಾತಿಗಳನ್ನು ಪರಿಶೀಲನೆ ಮಾಡುವುದು ಸರಿ ಆದರೆ…

Read More

ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮ ಗೋ ಸಾಕಾಣಿಕೆ : ಇಬ್ಬರಬಂಧನ

  ಶಿವಮೊಗ್ಗ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಗೋವಿನ‌ ಮಾರಾಟ ಮತ್ತು ಸಾಗಾಣಿಕ ವಿರುದ್ಧ ದಾಳಿ ನಡೆಸಲಾಗಿದ್ದು ಒಂದು ಕಡೆ ಗೋವುಗಳನ್ನ ರಕ್ಷಿಸಲಾದರೆ ಇನ್ನೊಂದೆಡೆ ಮನೆಯಲ್ಲಿಯೇ ಗೋವನ್ನ ಕಡಿದು ಮಾರಾಟ ಮಾಡುತ್ತಿದ್ದ ಪ್ರಕರಣ ಬೆಳಕಿದೆ ಬಂದಿದೆ. ಸಾಗರ ತಾಲೂಕಿನ ತಾಳಗುಪ್ಪ ಗ್ರಾಮದಲ್ಲಿ ಅಕ್ರಮವಾಗಿ ಮೂರು ಗೋವುಗಳನ್ನ ಟಾಟಾ‌ಏಸ್ ವಾಹನದಲ್ಲಿ ತುಂಬಿಸಿಕೊಂಡು ಹೋಗುವಾಗ ಪೊಲೀಸರು ತಡೆದು ತಪಾಸಣೆ ನಡೆಸಿದ್ದಾರೆ. ತಪಾಸಣೆ ವೇಳೆ ಆಟೋದಲ್ಲಿದ್ದ ಓರ್ವ ಪರಾರಿಯಾಗಿದ್ದಾನೆ. ಕಣಸೆ ಗ್ರಾಮದ ಗಣಪತಿ ಮತ್ತು ಆತನ ಪುತ್ರ ದೇವರಾಜ್ ನನ್ನ ಬಂಧಿಸಲಾಗಿದೆ. ಅದರಂತೆ…

Read More

ಸಮಾಜದಲ್ಲಿ ನೊಂದವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು : ಹರತಾಳು ಹಾಲಪ್ಪ

ರಿಪ್ಪನ್‌ಪೇಟೆ: ಸಮಾಜದಲ್ಲಿ ನೊಂದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಹಾಗೂ ಮಕ್ಕಳಿಗೆ ಸೂಕ್ತ ವಿದ್ಯಾಭ್ಯಾಸ ಒದಗಿಸಿ ಸುಸಂಸ್ಕೃತ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು ಎಂದು ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು. ಅವರು ಭಾನುವಾರ ಪಟ್ಟಣದ ಜಿಎಸ್ ಬಿ ಸಭಾಂಗಣದಲ್ಲಿ ಹೊಸನಗರ ತಾಲ್ಲೂಕ್ ಗಂಗಾಮತಸ್ಥರ ನೌಕರರ ಕ್ಷೇಮಾಭಿವೃದ್ದಿ ಸಂಘ ಮತ್ತು ತಾಲ್ಲೂಕ್ ಗಂಗಾಮತಸ್ಥರ ಸಮಾಜ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕೊರೊನಾದಿಂದಾಗಿ…

Read More

ಸೌಮ್ಯ ಕೊಲೆ ಪ್ರಕರಣ – ಮೃತದೇಹವನ್ನು ಹೊರತೆಗೆದ ಪೊಲೀಸರು | ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ Crime News

ಸೌಮ್ಯ ಕೊಲೆ ಪ್ರಕರಣ – ಮೃತದೇಹವನ್ನು ಹೊರತೆಗೆದ ಪೊಲೀಸರು | ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗುತ್ತೇನೆ ಎಂದು ನಂಬಿಸಿ , ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಪ್ರಿಯಕರನೇ ಕೊಲೆಗೈದ ಪ್ರಕರಣದಲ್ಲಿ ಯುವತಿಯ ಮೃತದೇಹವನ್ನು ಹೊರತೆಗೆಯಲಾಗಿದೆ. ಸೌಮ್ಯಾ ಮತ್ತು ಸೃಜನ್ ಕಳೆದ ಎರಡೂವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ಮಧ್ಯೆ ತನ್ನನ್ನು ಮದುವೆಯಾಗುವಂತೆ ಸೌಮ್ಯಾ ಒತ್ತಾಯಿಸುತ್ತಿದ್ದಳು. ಇದರಿಂದ ಬೇಸತ್ತ ಸೃಜನ್ ಯುವತಿಯನ್ನು ಹೆದ್ದಾರಿಪುರ ಬಳಿಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ…

Read More

RIPPONPET | ಅಪರಾಧ ತಡೆ ಮಾಸಾಚರಣೆ -ಜಾಗೃತಿಗಾಗಿ ಬೈಕ್ ರ್‍ಯಾಲಿ – ಡಿವೈಎಸ್ಪಿ ಭಾಗಿ

RIPPONPET | ಅಪರಾಧ ತಡೆ ಮಾಸಾಚರಣೆ -ಜಾಗೃತಿಗಾಗಿ ಬೈಕ್ ರ್‍ಯಾಲಿ – ಡಿವೈಎಸ್ಪಿ ಭಾಗಿ ರಿಪ್ಪನ್‌ಪೇಟೆ : ವಾಹನ ಚಲಾಯಿಸುವ ವೇಳೆ ರಸ್ತೆ ಸುರಕ್ಷತೆಯ ನಿಯಮವನ್ನು ಪಾಲಿಸದೆ ಇರುವುದು ನಿಮಗೆ ನೀವೇ ದ್ರೋಹ ಮಾಡಿದ ಹಾಗೆ. ರಸ್ತೆ ಸುರಕ್ಷತೆಯ ಬಗ್ಗೆ ಯುವಜನತೆ ಪಾಲಿಸದೆ ಇರುವುದರಿಂದ ಹೆಚ್ಚಿನ ವಾಹನ ಅಪಘಾತಗಳಾಗಿ ಸಾವು ಸಂಭವಿಸುತ್ತದೆ. ಈ ನಿಟ್ಟಿನಲ್ಲಿ ವಾಹನ ಚಲಾಯಿಸವವರು ಜಾಗರೂಕರಾಗಬೇಕು ಎಂದು ತೀರ್ಥಹಳ್ಳಿ ಉಪ ವಿಭಾಗದ ಡಿವೈಎಸ್ಪಿ ಗಜಾನನ ವಾಮನ ಸುತಾರ ಹೇಳಿದರು. ಪಟ್ಟಣದಲ್ಲಿ ರಸ್ತೆ ಸುರಕ್ಷತೆ ಹಾಗೂ…

Read More

ಮೋಟಾರ್ ಸ್ಟಾರ್ಟ್ ಮಾಡುವಾಗ ವಿದ್ಯುತ್ ತಗುಲಿ ಯುವತಿ ಸಾವು!

ಮೋಟಾರ್ ಸ್ಟಾರ್ಟ್ ಮಾಡುವಾಗ ವಿದ್ಯುತ್ ತಗುಲಿ ಯುವತಿ ಸಾವು! ಇತ್ತೀಚಿಗೆ ಬೆಂಗಳೂರಲ್ಲಿ ಕುಡಿಯುವ ನೀರು ಹಿಡಿಯುವ ವೇಳೆ ವಿದ್ಯುತ್ ಪ್ರವಹಿಸಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಬೆನ್ನಲ್ಲೇ, ಇದೀಗ ಶಿವಮೊಗ್ಗದಲ್ಲಿ ವಿದ್ಯುತ್ ತಗುಲಿ ಯುವತಿಯೊರ್ವಳು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಎಮ್ಮೆಹಟ್ಟಿ ಗ್ರಾಮದಲ್ಲಿ ನಡೆದಿದೆ. ಮೃತ ಯುವತಿ ನಿಸರ್ಗ (18) ಮೃತ ದುರ್ಧೈವಿಯಾಗಿದ್ದಾರೆ. ನಿಸರ್ಗ ತಮ್ಮ ಮನೆಯಲ್ಲಿನ ಕುಡಿಯುವ ನೀರಿನ ಟ್ಯಾಂಕ್‌ಗೆ ನೀರು ಬಿಡುವ ಸಲುವಾಗಿ ಮೋಟಾರ್‌ ಆನ್‌ ಮಾಡಲು ತೆರಳಿದ್ದರು. ಈ ವೇಳೆ ಅವರಿಗೆ…

Read More

ಶಾಲೆಗಳಲ್ಲಿನ ಬಿಸಿಯೂಟ ಕಾರ್ಯಕ್ರಮಕ್ಕೆ ಡಾ| ಶಿವಕುಮಾರ ಸ್ವಾಮೀಜಿ ಹೆಸರು: ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ

ಶಾಲೆಗಳಲ್ಲಿ ನಡೆಯುತ್ತಿರುವ ಮಧ್ಯಾಹ್ನದ ಬಿಸಿ ಊಟ ಕಾರ್ಯಕ್ರಮಕ್ಕೆ ಶಿವಕುಮಾರ ಸ್ವಾಮೀಜಿ ಹೆಸರಿಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು. ತುಮಕೂರಿನ  ಸಿದ್ಧಗಂಗಾ ಮಠದಲ್ಲಿ ಶುಕ್ರವಾರ ನಡೆದ ಶಿವಕುಮಾರ ಸ್ವಾಮೀಜಿ ಅವರ   115ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾರೆ. ಮಠದಲ್ಲಿ ಬೆಳಗಿನಿಂದಲೇ ವಿವಿಧ ಧಾರ್ಮಿಕ ಕಾರ್ಯಗಳು ನಡೆಯುತ್ತಿವೆ. ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಗದ್ದುಗೆ ಪೂಜೆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ…

Read More