Headlines

ಹೂವಿನಕೋಣೆ ಶಾಲೆ ವಿಷಪ್ರಾಷಣ ಪ್ರಕರಣ – ತನಿಖೆಯಲ್ಲಿ ಬಹಿರಂಗಗೊಂಡ ಶಾಕಿಂಗ್ ಸತ್ಯ , ಮಕ್ಕಳಾಟ ತಂದ ನಡುಕ

ಹೂವಿನಕೋಣೆ ಶಾಲೆ ವಿಷಪ್ರಾಷಣ ಪ್ರಕರಣ – ತನಿಖೆಯಲ್ಲಿ ಬಹಿರಂಗಗೊಂಡ ಶಾಕಿಂಗ್ ಸತ್ಯ , ಮಕ್ಕಳಾಟ ತಂದ ನಡುಕ ಹೊಸನಗರ ತಾಲ್ಲೂಕಿನ ಹೂವಿನಕೋಣಿ ಗ್ರಾಮದ ಸರಕಾರಿ ಶಾಲೆಯಲ್ಲಿ ಸಂಭವಿಸಿದ ಕೀಟನಾಶಕ ಘಟನೆ ಮಹತ್ವದ ತಿರುವು ಪಡೆದುಕೊಂಡಿದೆ. ಕೆಲವು ದಿನಗಳ ಹಿಂದೆ ನೀರಿನ ಟ್ಯಾಂಕ್‌ಗೆ ವಿಷ ಬೆರೆಸಿದ ಘಟನೆ ರಾಜ್ಯದಾದ್ಯಂತ ಆತಂಕ ಮೂಡಿಸಿತ್ತು. ಈ ಪ್ರಕರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಖುದ್ದಾಗಿ ಟ್ವೀಟ್ ಮಾಡಿ, “ಇದು ಭಯೋತ್ಪಾದನೆಯಿಗಿಂತಲೂ ಭಯಾನಕ,” ಎಂದು ತೀವ್ರ ಆತಂಕ ವ್ಯಕ್ತಪಡಿಸಿದ್ದರು. ಪೊಲೀಸರ ತಂಡ ಕೂಡ ಜಾಗೃತಗೊಂಡು,…

Read More

RIPPONPETE | ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಪ್ರಯುಕ್ತ ಪೊಲೀಸ್ ಇಲಾಖೆಯಿಂದ ರೂಟ್ ಮಾರ್ಚ್

RIPPONPETE | ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಪ್ರಯುಕ್ತ ಪೊಲೀಸ್ ಇಲಾಖೆಯಿಂದ ರೂಟ್ ಮಾರ್ಚ್ ರಿಪ್ಪನ್ ಪೇಟೆ ಪಟ್ಟಣದಲ್ಲಿ ಬರುವ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ರೂಟ್ ಮಾರ್ಚ್ ನಡೆಸಿದರು. ಪಿಎಸ್‌ಐ ರಾಜುರೆಡ್ಡಿ ನೇತೃತ್ವದಲ್ಲಿ ಪ್ರಮುಖ ರಸ್ತೆಗಳಲ್ಲಿ ಭದ್ರತಾ ದೃಷ್ಟಿಯಿಂದ ರೂಟ್ ಮಾರ್ಚ್ ನಡೆಯಿತು. ಮೆರವಣಿಗೆಗಳ ಸಮಯದಲ್ಲಿ ಯಾವುದೇ ಅನಿರೀಕ್ಷಿತ ಘಟನೆಗಳು ಸಂಭವಿಸದಂತೆ ಮುಂಗಡ ಕ್ರಮವಾಗಿ ಗಣಪತಿ ವಿಸರ್ಜನೆ ಹಾಗೂ ಈದ್ ಮಿಲಾದ್ ಮೆರವಣಿಗೆ…

Read More

ರಿಪ್ಪನ್ ಪೇಟೆ ಜೆಸಿಐ ನಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ಹಾಗೂ ಛತ್ರಿ ವಿತರಣೆ

ರಿಪ್ಪನ್ ಪೇಟೆ ಜೆಸಿಐ ನಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ಹಾಗೂ ಛತ್ರಿ ವಿತರಣೆ ರಿಪ್ಪನ್ ಪೇಟೆ: ಪಟ್ಟಣದ ಸೀನಿಯರ್ ಚೇಂಬರ್  ಇಂಟರ್ನ್ಯಾಷನಲ್ ವತಿಯಿಂದ ಅರಸಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳು ಮತ್ತು ಛತ್ರಿಗಳನ್ನು ವಿತರಿಸುವ  ಮೂಲಕ ಶಿಕ್ಷಣೋತ್ಸಾಹಕ್ಕೆ ಪ್ರೇರಣೆಯಾದರು ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ತೀರ್ಥಹಳ್ಳಿ ಸೀನಿಯರ್ ಚೇಂಬರ್ ಜೆಸಿಐ ನಿಕಟಪೂರ್ವ ಅಧ್ಯಕ್ಷ ಹೆಚ್ ಎನ್. ಸೂರ್ಯನಾರಾಯಣ್ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿ, ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿಸಿಕೊಂಡು ಭವಿಷ್ಯ ನಿರ್ಮಾಣಕ್ಕೆ ಪ್ರಾಮುಖ್ಯತೆ ನೀಡಬೇಕೆಂದು ಹೇಳಿದರು….

Read More

RIPPONPETE | ಬಾರ್ ಮುಂಭಾಗದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

RIPPONPETE | ಬಾರ್ ಮುಂಭಾಗದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಪಟ್ಟಣದ ತೀರ್ಥಹಳ್ಳಿ ರಸ್ತೆಯ ಖಾಸಗಿ ಬಾರ್‌ ಮುಂಭಾಗದಲ್ಲಿ ಶನಿವಾರ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತಪಟ್ಟವನ ಖಚಿತ ಗುರುತು ಇನ್ನೂ ಪತ್ತೆಯಾಗಿಲ್ಲ. ಈ ಕುರಿತು ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ…

Read More

ಹೂವಿನಕೋಣೆ ಶಾಲೆಯ ತೊಟ್ಟಿಗೆ ವಿಶಪ್ರಾಶಣ ಪ್ರಕರಣ: ತನಿಖೆಗೆ 3 ತಂಡ, 18 ಪೊಲೀಸ್ ಸಿಬ್ಬಂದಿ ನೇಮಕ

ಹೂವಿನಕೋಣೆ ಶಾಲೆಯ ತೊಟ್ಟಿಗೆ ವಿಶಪ್ರಾಶಣ ಪ್ರಕರಣ: ತನಿಖೆಗೆ 3 ತಂಡ, 18 ಪೊಲೀಸ್ ಸಿಬ್ಬಂದಿ ನೇಮಕ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೂವಿನಕೋಣೆ ಸರ್ಕಾರಿ ಶಾಲೆಯ ನೀರಿನ ತೊಟ್ಟಿಗೆ ವಿಷ ಬೆರೆಸಿದ ಹೇಯ ಘಟನೆಯ ಬಳಿಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೀವ್ರ ಗಂಭೀರತೆಯಿಂದ ಪ್ರಕರಣದ ತನಿಖೆ ವೇಗ ಪಡೆದುಕೊಂಡಿದೆ. ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಕಾರ್ಯನಿರ್ವಹಣೆ ಆರಂಭಿಸಿದ್ದು, ತನಿಖೆಗೆ ಹಲವು ಆಯಾಮಗಳಲ್ಲಿ ಚುರುಕಿನ ಕಾರ್ಯಾಚರಣೆ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ ಕೆ ಮಿಥುನ್ ಕುಮಾರ್…

Read More

ವಿಷ ಸೇವಿಸಿದ್ದ ಪದವಿ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೇ ಸಾವು

ವಿಷ ಸೇವಿಸಿದ ಪದವಿ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೇ ಸಾವು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬಾಳೆಬೈಲಿನ ಖಾಸಗಿ ಡಿಗ್ರಿ ಕಾಲೇಜಿನಲ್ಲಿ ಬಿಬಿಎ ಮೊದಲ ವರ್ಷದ ವಿದ್ಯಾರ್ಥಿನಿಯಾದ ಅಶ್ವಿನಿ (19) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಸಂಭವಿಸಿದೆ. ಅಶ್ವಿನಿ ಮೂಲತಃ ಯಡೂರಿನವಳಾಗಿದ್ದು, ಪ್ರತಿದಿನ ತೀರ್ಥಹಳ್ಳಿಗೆ ಹೋಗಿ ತರಗತಿಗೆ ಹಾಜರಾಗುತ್ತಿದ್ದಳು. ದಿನದಂದು ಏಕಾಏಕಿ ಅವಳು ವಿಷ ಸೇವಿಸಿದ್ದಳು. ವಿಷ ಸೇವನೆಗೆ ನಿಖರವಾದ ಕಾರಣ ಇನ್ನೂ ಗೊತ್ತಾಗಿಲ್ಲ. ವಿಷ ಸೇವನೆ ಬಗ್ಗೆ ತಿಳಿದ ತಕ್ಷಣ ಆಕೆಯನ್ನು ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ…

Read More

ಕಾರು ಮತ್ತು ಬೈಕ್‌ ಅಪಘಾತ – ಬೈಕ್‌ ಸವಾರ ಗಂಭೀರ.!

ಕಾರು ಮತ್ತು ಬೈಕ್‌ ಅಪಘಾತ – ಬೈಕ್‌ ಸವಾರ ಗಂಭೀರ.! ತೀರ್ಥಹಳ್ಳಿ : ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಚಾಲಕನಿಗೆ ಗಂಭೀರ ಗಾಯವಾಗಿದ್ದು ಆತನನ್ನು ಮಣಿಪಾಲ ಆಸ್ಪತ್ರೆಗೆ ರವಾನೆ ಮಾಡಲಾದ ಘಟನೆ ತೀರ್ಥಹಳ್ಳಿಯ ಕೊಪ್ಪ ರಸ್ತೆಯಲ್ಲಿ ನಡೆದಿದೆ. ಕುರುವಳ್ಳಿ ಸಮೀಪದ ಕುಂಬಾರದಡಿಗೆ ತಿರುವಿನಲ್ಲಿ ಶುಕ್ರವಾರ ರಾತ್ರಿ ಈ ಅಪಘಾತ ಸಂಭವಿಸಿದ್ದು ಬೈಕ್ ಚಾಲಕ ಮದನ್ ಎಂಬುವರಿಗೆ ಗಂಭೀರ ಗಾಯವಾಗಿದ್ದು ಅವರನ್ನು ತಕ್ಷಣವೇ ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ…

Read More

ಅಡಿಕೆ ಸಸಿಗಳನ್ನು ನಾಶಗೊಳಿಸಿದ ಅರಣ್ಯಾಧಿಕಾರಿಗಳು ,ರೈತರ ಆಕ್ರೋಶ – ಸ್ಥಳಕ್ಕೆ ಆರಗ ಜ್ಞಾನೇಂದ್ರ ಭೇಟಿ

ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊಳವಳ್ಳಿ ಗ್ರಾಮದ ಸ.ನಂ. 30 ರಲ್ಲಿನ ಆರಣ್ಯ ಪ್ರದೇಶದಲ್ಲಿ ಸುಮಾರು 50-60 ವರ್ಷಗಳಿಂದ ಸ್ವಾದೀನಾನುಭವದಲ್ಲಿ ಜಮೀನು ಸಾಗುವಳಿ ಮಾಡುತ್ತಿರುವ ರೈತರ ಜಮೀನಿನಲ್ಲಿ ಅಡಿಕೆ ಸಸಿಗಳನ್ನು ತಿಳಿವಳಿಕೆ ನೀಡದೆ ಏಕಾಏಕಿ ನಾಶಗೊಳಿಸುವ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿದ್ದಾರೆಂದು ಶಾಸಕ ಅರಗ ಜ್ಞಾನೇಂದ್ರ ಆರೋಪಿಸಿದರು. ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಕೊಳವಳ್ಳಿ ಗ್ರಾಮದ ಸರ್ವೇ ನಂ 30 ರಲ್ಲಿ ಅರಣ್ಯ ಇಲಾಖೆಯವರು ಅಡಿಕೆ ಸಸಿಗಳನ್ನು ಕಿತ್ತು, ಕಡಿದು ಹಾಕಿದ ಸ್ಥಳಕ್ಕೆ ಭೇಟಿ…

Read More

HOSANAGARA | ಹುಲಿಕಲ್ ಬಳಿಯಲ್ಲಿ ವಾಹನ ಅಪಘಾತ, ಚಾಲಕ ಸ್ಥಳದಲ್ಲೇ ಸಾವು

HOSANAGARA | ಹುಲಿಕಲ್ ಬಳಿಯಲ್ಲಿ ವಾಹನ ಅಪಘಾತ, ಚಾಲಕ ಸ್ಥಳದಲ್ಲೇ ಸಾವು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಸಮೀಪ ಭೀಕರ ಅಪಘಾತ ಸಂಭವಿಸಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಮೃತ ಚಾಲಕನನ್ನು ಸಾಲಿಗ್ರಾಮದ ಗೋಪಾಲ್ ಎಂದು ಗುರುತಿಸಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಬಡಾ ದೋಸ್ತ್ ವಾಹನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೊಸನಗರದಿಂದ ಕುಂದಾಪುರದತ್ತ ಹೊರಟಿದ್ದ ವಾಹನ ಅಪಘಾತವಾಗಿದ್ದು ಘಟನೆಯಲ್ಲಿ ಕ್ಲೀನರ್ ಪ್ರಭಾಕರ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಾಸ್ತಿಕಟ್ಟೆಯ…

Read More

ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ – ಆರೋಪಿಗೆ 20 ವರ್ಷ ಶಿಕ್ಷೆ ಪ್ರಕಟ

ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ – ಆರೋಪಿಗೆ 20 ವರ್ಷ ಶಿಕ್ಷೆ ಪ್ರಕಟ ಶಿವಮೊಗ್ಗ: ೨೦೨೪ ನೇ ಸಾಲಿನಲ್ಲಿ ಭದ್ರಾವತಿ ತಾಲ್ಲೂಕಿನ ವ್ಯಕ್ತಿಯೊಬ್ಬನು ೧೫ ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯವನ್ನೆಸಗಿದ ಪ್ರಕರಣ ಸಾಬೀತಾದ ಹಿನ್ನಲೆಯಲ್ಲಿ ಆರೋಪಿತನಿಗೆ ೨೦ ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ರೂ ೧,೬೧,೦೦೦/- ದಂಡ, ದಂಡ ಕಟ್ಟಲು ವಿಫಲನಾದಲ್ಲಿ ೦೨ ವರ್ಷ ಹೆಚ್ಚುವರಿ ಸಾದಾ ಕಾರಾವಾಸ ಶಿಕ್ಷೆ ವಿಧಿಸಲಾಗಿದೆ. ನೊಂದ ಬಾಲಕಿ ಹೇಳಿದ ದೂರಿನ ಮೇರೆಗೆ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ…

Read More