Headlines

ಇಂದು ಸಂಜೆ ರಿಪ್ಪನ್‌ಪೇಟೆಯಲ್ಲಿ ಹಾಸ್ಯ ಬ್ರಹ್ಮ ಗಂಗಾವತಿ ಪ್ರಾಣೇಶ್ ರವರಿಂದ ನಗೆ ಹಬ್ಬ – ಕಾರ್ಯಕ್ರಮಕ್ಕೆ ಭರದ ಸಿದ್ದತೆ|Ripponpet

ರಿಪ್ಪನ್‌ಪೇಟೆ : ಇಂದು ಸಂಜೆ 07 ಗಂಟೆಗೆ ಪಟ್ಟಣದಲ್ಲಿ ಹಾಸ್ಯಬ್ರಹ್ಮ ಗಂಗಾವತಿ ಪ್ರಾಣೇಶ್ ಮತ್ತು ಬಸವರಾಜ್ ಮಾಮನಿ ರವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ. ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಬರುವೆ ಶಾಲಾ ಮೈದಾನದಲ್ಲಿ ಇಂದು ಜಿ.ಆರ್.ಕೆ. ಮೂರ್ತಿ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಅಭಿನಂದನಾ ಮಹೋತ್ಸವ ಹಾಗೂ ನಗೆಹಬ್ಬ ಕಾರ್ಯಕ್ರಮದಲ್ಲಿ ಅಭಿನವ ಬೀಚಿ, ಹಾಸ್ಯ ಬ್ರಹ್ಮ ಗಂಗಾವತಿ ಪ್ರಾಣೇಶ, ನರಸಿಂಹ ಜೋಶಿ, ಬಸವರಾಜ ಮಾಮನಿಯವರಿಂದ ‘ನಗೆ ಹಬ್ಬ’ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ರಿಪ್ಪನ್‌ಪೇಟೆ, ಅರಸಾಳು, ಕೆಂಚನಾಲ, ಬಾಳೂರು,…

Read More

ರಿಪ್ಪನ್‌ಪೇಟೆ : ಸುತ್ತಮುತ್ತಲಿನ ಸಾರ್ವಜನಿಕ ಗಣಪತಿ ವಿಸರ್ಜನೆ

ರಿಪ್ಪನ್ ಪೇಟೆ : ಪಟ್ಟಣದ ಸುತ್ತಮುತ್ತಲಿನ ಪ್ರದೇಶಗಳಾದ ಕೊಳವಂಕ, ಕಲ್ಲುಹಳ್ಳ, ಬಸವಾಪುರ, ಕಳಸೆ, ಸೂಡೂರು ಕೋಣನಜಡ್ಡು, ಹಾರೋಹಿತ್ತಲು,ದೂನ ,ಬೆನವಳ್ಳಿ ಮತ್ತು ಜೀರಿಗೆಮನೆ,ಗ್ರಾಮದಲ್ಲಿ ಯುವಕ ಸಂಘಗಳು  ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ಗಣಪತಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ  ರಾಜಬೀದಿ ಉತ್ಸವದಲ್ಲಿ ಕೊಂಡೊಯ್ದು ವಿಸರ್ಜನೆ ಮಾಡಿದರು. ಉತ್ಸವಮೂರ್ತಿ ಸಾಗುವ ಮಾರ್ಗದುದ್ದಕ್ಕೂ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಸ್ಥಳೀಯ ಜನಪದ ಕಲಾಪ್ರಕಾರಗಳು ಮೆರವಣಿಗೆಗೆ ಮೆರುಗು ನೀಡಿತು  ಡೊಳ್ಳು ಕುಣಿತದ ತಾಳಕ್ಕೆ ತಕ್ಕಂತೆ ಯುವಕ ಯುವತಿಯರು ಚಿಣ್ಣರು ಹಾಗೂ ಹೆಂಗಳೆಯರು ಹೆಜ್ಜೆ ಹಾಕಿದರು. ಸಂಪೂರ್ಣ ವೀಡಿಯೋ ಇಲ್ಲಿ…

Read More

ರಿಪ್ಪನ್ ಪೇಟೆಯ ನೇತ್ರಾ ಟೈಲರ್ ಗುರುಪಾದಪ್ಪ ನಿಧನ :

ರಿಪ್ಪನ್ ಪೇಟೆ: ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಪಟ್ಟಣದ ನಿವಾಸಿ, ಟೈಲರ್ ಗುರುಪಾದಪ್ಪ (ನೇತ್ರಾ ಟೈಲರ್) (65) ಅವರು ಹೃದಯಾಘಾತದಿಂದ ಶನಿವಾರ ನಿಧನರಾದರು. ರಿಪ್ಪನ್ ಪೇಟೆಯಲ್ಲಿ ನೇತ್ರಾ ಟೈಲರ್ ಎಂದೇ ಪ್ರಸಿದ್ದರಾಗಿದ್ದ ಇವರು ಕೆಲವು ವರ್ಷಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ಪತ್ನಿ,ಇಬ್ಬರು ಪುತ್ರಿಯರು ಇದ್ದಾರೆ. ಭಾನುವಾರ ಬೆಳಿಗ್ಗೆ 10ಕ್ಕೆ ಬೈರಾಪುರ ಗ್ರಾಮದಲ್ಲಿರುವ ಸ್ವಂತ ಹೊಲದಲ್ಲಿ ಅಂತ್ಯಕ್ರಿಯೆ ನೇರವೆರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Read More

ವೇಶ್ಯೆಯರೊಂದಿಗೆ ಸರಸ ಸಲ್ಲಾಪಕ್ಕೆ ಕಳ್ಳತನಕ್ಕಿಳಿದ ಕಿರಾತಕ – ಬಲೆಗೆ ಬಿದ್ದ ಜಾಲಿ ಜಾಲಿ ಕಿಲಾಡಿಯ ಕಥೆ ಕೇಳಿ ಪೊಲೀಸರೇ ಶಾಕ್!

ವೇಶ್ಯೆಯರೊಂದಿಗೆ ಸರಸ ಸಲ್ಲಾಪಕ್ಕೆ ಕಳ್ಳತನಕ್ಕಿಳಿದ ಕಿರಾತಕ – ಬಲೆಗೆ ಬಿದ್ದ ಜಾಲಿ ಜಾಲಿ ಕಿಲಾಡಿಯ ಕಥೆ ಕೇಳಿ ಪೊಲೀಸರೇ ಶಾಕ್! ಹಾವೇರಿ : ಜೀವನ ನಡೆಸೋಕೆ ಕೆಲವರು ಕಳ್ಳತನದ ಕೆಟ್ಟ ದಾರಿ ತುಳಿದಿರೋದನ್ನ ನೋಡಿರುತ್ತೇವೆ. ಆದ್ರೆ ಇಲ್ಲೊಬ್ಬ ಕಳ್ಳ, ವೇಶ್ಯೆಯರೊಂದಿಗೆ ಸರಸ ಸಲ್ಲಾಪ ನಡೆಸಲು ದುಡ್ಡು ಬೇಕು ಅಂತ ಕಳ್ಳತನದ ಹಾದಿ ತುಳಿದಿರುವ ವಿಚಿತ್ರ ಘಟನೆ ನಡೆದಿದೆ. ಸಧ್ಯ ಈ ಕಿಲಾಡಿ ಕಳ್ಳ ಪೊಲೀಸರ ಕೈಗೆ ತಗಲಾಕೊಂಡಿದ್ದಾರೆ. ಹೌದು, ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಗಿನೇಲೆ ನಿವಾಸಿ…

Read More

ಭೀಕರ ರಸ್ತೆ ಅಪಘಾತ : ಸ್ಥಳದಲ್ಲಿಯೇ ಇಬ್ಬರು ವಿದ್ಯಾರ್ಥಿಗಳ ಸಾವು

ಭದ್ರಾವತಿಯ ಹುಣಸೇಕಟ್ಟೆ ಜಂಕ್ಷನ್ ಬಳಿ ರಸ್ತೆ ಅಪಘಾತವಾಗಿದ್ದು  ಕುವೆಂಪು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ನಿನ್ನೆ ರಾತ್ರಿ 10-30 ರ ಸಮಯದಲ್ಲಿ ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಉತ್ತಮ ಚಕ್ರವರ್ತಿ, ಮನೋಜ್ ಎಂಬ ಇಬ್ಬರು ಯುವಕರು ಶಂಕರಘಟ್ಟದಿಂದ ಭದ್ರಾವತಿಗೆ ಹೋಗುವಾಗ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.  ಉತ್ತಮ ಚಕ್ರವರ್ತಿ ಮತ್ತು ಮನೋಜ್ ಇಬ್ಬರು ಎನ್ ಆರ್ ಪುರದ ನಿವಾಸಿಗಳಾಗಿದ್ದು, ಉತ್ತಮ್ ಚಕ್ರವರ್ತಿ ಎಂಸಿಎ…

Read More

ಕ್ಷುಲ್ಲಕ ವಿಚಾರಕ್ಕೆ ತಂದೆ ಮಗನ ನಡುವೆ ಜಗಳ : ಕೊಲೆಯಲ್ಲಿ ಅಂತ್ಯ

ಶಿವಮೊಗ್ಗ: ಕ್ಷುಲ್ಲಕ ವಿಚಾರಕ್ಕೆ ತಂದೆಯೊಂದಿಗೆ ಜಗಳವಾಡಿದ ಮಗ, ಕೋಪದಲ್ಲಿ ಕೋಲಿನಿಂದ  ಹೊಡೆದು ತಂದೆಯನ್ನು ಕೊಲೆ ಮಾಡಿದ್ದಾನೆ. ಈ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆಯಲ್ಲಿದ್ದ ದಿನಸಿ ವಸ್ತುಗಳನ್ನು ಮಾರಾಟ ಮಾಡಿ,ಕುಡಿದು ಬರುತ್ತಿದ್ದ ತಂದೆಯನ್ನು ಮಗ ಪ್ರಶ್ನಿಸಿದಾಗ ತಂದೆ ಮತ್ತು ಮಗನ ಮಧ್ಯ ಗಲಾಟೆಯಾಗಿದೆ. ಕೋಪದಲ್ಲಿ ಕೋಲಿನಿಂದ ತಂದೆಯ ಮೇಲೆ ಹಲ್ಲೆ ನಡೆಸಿದ್ದಾನೆ. ತಲೆಗೆ ಗಂಭೀರ ಗಾಯವಾಗಿದ್ದ ಆರೋಪಿಯ ತಂದೆ ಮೃತಪಟ್ಟಿದ್ದಾರೆ. ಮಂಡೇನಕೊಪ್ಪದ ಕುಮಾರ ನಾಯ್ಕ (55) ಮೃತಪಟ್ಟ ವ್ಯಕ್ತಿ. ಮನೆಯಲ್ಲಿ ತನ್ನ ಮಗ ಮಧು ಜೊತೆ…

Read More

ಕಾರ್ಗಿಲ್ ವಿಜಯ ದಿವಸ ಆಚರಣೆ: ಹುತಾತ್ಮ ಯೋಧರಿಗೆ ಗೌರವ

ಕಾರ್ಗಿಲ್ ವಿಜಯ ದಿವಸ ಆಚರಣೆ: ಹುತಾತ್ಮ ಯೋಧರಿಗೆ ಗೌರವ ರಿಪ್ಪನ್ ಪೇಟೆ : ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಪಟ್ಟಣದ ಹಿಂದೂ ಸಂಘಟನೆಗಳ ವತಿಯಿಂದ ವಿನಾಯಕ ವೃತ್ತದಲ್ಲಿ ಹುತಾತ್ಮ ಯೋಧರಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಮುಖಂಡ ದೇವರಾಜ್ ಕೆರೆಹಳ್ಳಿ ಕಾರ್ಗಿಲ್ ವಿಜಯೋತ್ಸವವು ಇಡೀ ಭಾರತೀಯರಿಗೆ ಹೆಮ್ಮೆಯ ದಿನವೂ ಹೌದು. ಅದರ ಜೊತೆಗೆ ವೀರಯೋಧರನ್ನು ಕಳೆದುಕೊಂಡ ನೋವೂ ಇದೆ. ಈ ಯುದ್ಧದಲ್ಲಿ ಸೌರಭ್ ಕಾಲಿಯಾ, ವಿಕ್ರಮ್…

Read More

ವಿಸ್ತಾರ ನ್ಯೂಸ್ ವಿಸ್ತಾರವಾಗಿ ಬೆಳೆಯಲಿ : ಹರತಾಳು ಹಾಲಪ್ಪ|Vistara

ರಿಪ್ಪನ್‌ಪೇಟೆ : ಸರ್ಕಾರದ ನಾಲ್ಕು ಅಂಗಗಳಲ್ಲಿ ನಾಲ್ಕನೆಯ ಅಂಗವಾದ ಮಾದ್ಯಮ ರಂಗಕ್ಕೆ ತನ್ನದೇ ಆದ ವಿಶೇಷ ಮಹತ್ವವಿದೆ. ಈಗಿನ ಕಾಲಘಟ್ಟದಲ್ಲಿ ಮಾದ್ಯಮಗಳು ನಿಖರ ಸುದ್ದಿ ಮತ್ತು ಜ್ಞಾನವನ್ನು ಪ್ರಸರಿಸುವ ಕಾರ್ಯವನ್ನು ಕೈಗೊಳ್ಳಬೇಕಾಗಿದೆ.ಆ ನಿಟ್ಟಿನಲ್ಲಿ ವಿಸ್ತಾರ ಚಾನಲ್ ಗಮನ ಹರಿಸಿ ಒಳ್ಳೆಯ ಸುದ್ದಿ ಮಾದ್ಯಮವಾಗಿ ಹೊರಬರಲಿ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು.  ಪಟ್ಟಣದ ಆಶ್ರೀತಾ ಸಭಾಭವನದಲ್ಲಿ ವಿಸ್ತಾರ ವಾಹಿನಿ ಕನ್ನಡ ಸಂಭ್ರಮ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಬದಲಾದ ದಿನಮಾನಗಳಲ್ಲಿ ಎಲ್ಲವೂ ಕಲುಷಿತಗೊಂಡಿದೆ ಎನ್ನುವ…

Read More

ರಿಪ್ಪನ್‌ಪೇಟೆ – ಹೊಟ್ಟೆ ನೋವು ತಾಳಲಾರದೇ ಗೃಹಣಿ ಆತ್ಮಹತ್ಯೆ|rpet news

ರಿಪ್ಪನ್‌ಪೇಟೆ – ಹೊಟ್ಟೆ ನೋವು ತಾಳಲಾರದೇ ಗೃಹಣಿ ಆತ್ಮಹತ್ಯೆ   ರಿಪ್ಪನ್ ಪೇಟೆ : ಸಮೀಪದ ಅರಸಾಳು  ರೈಲ್ವೆ ಗೇಟ್ ಬಳಿಯ ಸಾಗುವಾನಿ ಮರವೊಂದಕ್ಕೆ  ಗೃಹಣಿ ಒಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ. ಮೃತ ಮಹಿಳೆ ಮಧ್ಯ ಪ್ರದೇಶದ ದಿಂಡೂರಿ ಜಿಲ್ಲೆಯ ಮಡಿಯರಸ್ಟ್ ಪೋಸ್ಟ್  ಡಾನ್ ಬಿಚೋಯ್ ಗ್ರಾಮದ  ನಿವಾಸಿ ಊರ್ಮಿಳ ಬಾಯ್ (27) ಎನ್ನಲಾಗಿದೆ.  ಕಳೆದ 15 ದಿನಗಳ ಹಿಂದೆ ರೈಲ್ವೆ ಹಳಿ ಪಕ್ಕದ ಚರಂಡಿ ಸ್ವಚ್ಛತಾ ಕಾರ್ಯಕ್ಕೆ ದಿನಗೂಲಿ ಆಧಾರದಲ್ಲಿ…

Read More

ಶೀಘ್ರವೇ ವಾಹನ ಸಂಚಾರಕ್ಕೆ ಮುಕ್ತವಾಗಲಿರುವ ಹುಲಿಕಲ್ ಘಾಟಿ ರಸ್ತೆ

ಶೀಘ್ರವೇ ವಾಹನ ಸಂಚಾರಕ್ಕೆ ಮುಕ್ತವಾಗಲಿರುವ ಹುಲಿಕಲ್ ಘಾಟಿ ರಸ್ತೆ Hulikal Ghat Road, closed for nearly two months following a landslide and road widening works, is likely to reopen for light vehicles and buses within the next few days. ತೀರ್ಥಹಳ್ಳಿ: ಕಳೆದ ಎರಡು ತಿಂಗಳುಗಳಿಂದ ವಾಹನ ಸಂಚಾರಕ್ಕೆ ಬಂದ್ ಆಗಿದ್ದ ಹುಲಿಕಲ್ ಘಾಟಿ (ಬಾಳೆಬರೆ ಘಾಟಿ) ರಸ್ತೆ ಶೀಘ್ರದಲ್ಲೇ ಮತ್ತೆ ಸಾರ್ವಜನಿಕರ ಬಳಕೆಗೆ ಲಭ್ಯವಾಗುವ ಸಾಧ್ಯತೆ…

Read More