ದಳಪತಿಗಳನ್ನು ಹಾಡಿ ಹೊಗಳಿದ ಸಿ ಎಂ ಇಬ್ರಾಹಿಂ
ಭದ್ರಾವತಿ : ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರ ಸ್ವಾಮಿಯವರನ್ನು ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಇಂದು ಹಾಡಿಹೊಗಳಿದ್ದಾರೆ. ಅವರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡಿನಲ್ಲಿ ನಡೆದ ಮಾಜಿ ಶಾಸಕ ದಿ. ಅಪ್ಪಾಜಿಗೌಡರ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕಿದೆ ಎಂದರು. ಯಡಿಯೂರಪ್ಪ ಫೇಲಾದ್ರೆ, ಕುಮಾರಸ್ವಾಮಿ ಆಹಾ ರುದ್ರ, ಆಹಾ ದೇವ ಅಂತಾ ಖಡ್ಗ ಹಿಡಿದುಕೊಂಡು ಹೊರಡಬೇಕಾಗುತ್ತದೆ.ಅಂತಹ ಕೆಲಸವನ್ನು ನಾವು ಮಾಡುತ್ತೇವೆ.ಮುಂದಿನ…