ಜಿಲ್ಲಾ ಸುದ್ದಿ:
ಶಿವಮೊಗ್ಗದ ಖಾಸಗಿ ಲಾಡ್ಜ್ ನಲ್ಲಿ ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಪತ್ತೆ : ಬಜರಂಗದಳ ಕಾರ್ಯಕರ್ತರ ಪ್ರತಿಭಟನೆ
ಶಿವಮೊಗ್ಗ : ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಖಾಸಗಿ ಲಾಡ್ಜ್ ನಲ್ಲಿ ಪತ್ತೆಯಾಗಿದ್ದಾಳೆ ಎಂದು ಆರೋಪಿಸಿ ಇಂದು ಬಜರಂಗರಂಗ ದಳ ಸಂಘಟನೆಯ ಕಾರ್ಯಕರ್ತರು ಖಾಸಗಿ ಹೋಟೆಲ್ ಎದುರು ಪ್ರತಿಭಟನೆ ನಡೆಸಿತು ನಿನ್ನೆಯ ದಿನ ಹೊನ್ನಾಳಿ ರಸ್ತೆ ಯಲ್ಲಿರುವ ಖಾಸಗಿ ಲಾಡ್ಜ್ ನಲ್ಲಿ ಅನ್ಯಕೋಮಿನ ಯುವಕನು ಹಿಂದೂ ಯುವತಿಯನ್ನ ಕರೆದುಕೊಂಡು ಬಂದು ಉಳಿದಿರುವುದು ಬಜರಂಗದಳದ ಸಂಘಟನೆಯ ಕಾರ್ಯಕರ್ತರ ಕಣ್ಣು ಕೆಂಪಾಗುವಂತೆ ಮಾಡಿದೆ. ದಾವಣಗೆರೆ ಜಿಲ್ಲೆಯ ಯುವಕ ಮತ್ತು ಯುವತಿಯರು ಹಳೆಯ ಪರಿಚಯದ ಮೇಲೆ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದಾರೆ ಎನ್ನಲಾಗಿದ್ದು….
ಸೂಕ್ತ ಸಮಯಕ್ಕೆ ಆಂಬುಲೆನ್ಸ್ ಸೇವೆ ದೊರಕದೇ ಸಾಗರದಲ್ಲಿ ನವಜಾತ ಶಿಶು ಸಾವು !
ಸಾಗರ : ಸೂಕ್ತ ಸಮಯಕ್ಕೆ ಆಂಬುಲೆನ್ಸ್ ಸೇವೆ ದೊರಕದೇ ನವಜಾತ ಶಿಶು ಸಾವನ್ನಪ್ಪಿರುವ ಘಟನೆ ಸಾಗರ ತಾಲೂಕಿನ ತುಮರಿಯಲ್ಲಿ ನಡೆದಿದೆ. ತುಮರಿ ಸಮೀಪದ ಚದರವಳ್ಳಿ ಗ್ರಾಮದ ಚೈತ್ರಾ ಎನ್ನುವವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕುಟುಂಬಸ್ಥರು ಅ್ಯಂಬುಲೆನ್ಸ್ ಇಲ್ಲದೇ ಖಾಸಗಿ ವಾಹನದಲ್ಲಿ ಗರ್ಭಿಣಿಯನ್ನು ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ. ಈ ವೇಳೆ ಮಹಿಳೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ್ದು, ತಡವಾಗಿ ಬಂದಿದ್ದರಿಂದ ತಾಯಿ- ಹಾಗೂ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದೆ. ಹೆಚ್ಚಿನ ಚಿಕಿತ್ಸೆಗೆ ಸಾಗರ ತಾಲೂಕು…
ಒಕ್ಕಲಿಗರ ಸಂಘದ ಚುನಾವಣೆ ಸಿರಿಬೈಲ್ ಧರ್ಮೇಶ್ ಮುನ್ನಡೆ : ಗೆಲುವು ಬಹುತೇಕ ಖಚಿತ
ರಾಜ್ಯ ಒಕ್ಕಲಿಗರ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶದ ಮೂರನೇ ಸುತ್ತಿನ ಮತ ಎಣಿಕೆ ಮುಗಿದಿದ್ದು ಮೂರನೇ ಸುತ್ತಿನಲ್ಲಿ ಧರ್ಮೇಶ್ ಸಿರಿ ಬೈಲ್ ಮುನ್ನಡೆ ಸಾಧಿಸಿದ್ದಾರೆ. ಎರಡನೇ ಸುತ್ತಿನಲ್ಲಿ ಎಸ್ ಕುಮಾರ್ ಮುನ್ನಡೆ ಪಡೆದಿದ್ದ ಎಸ್ ಕುಮಾರ್ ಮೂರನೇ ಸುತ್ತಿನಲ್ಲಿ ಹಿನ್ನಡೆ ಆಗಿದೆ. ಎರಡನೇ ಸುತ್ತಿನಲ್ಲಿ 2436 ಮತ ಪಡೆದಿದ್ದ ಕುಮಾರ್ ಮೂರನೇ ಸುತ್ತಿನಲ್ಲಿ 2912 ಮತ ಪಡೆದುಕೊಂಡಿದ್ದಾರೆ. ಅದರಂತೆ ಧರ್ಮೇಶ್ ಸಿರಿಬೈಲ್ 3265 ಮತಗಳನ್ನ ಪಡೆದು ಮುನ್ನಡೆ ಸಾಧಿಸಿದ್ದಾರೆ. ಧರ್ಮೇಶ್ ಅವರು ನಾಲ್ಕನೇ ಸುತ್ತಿನಲ್ಲಿಯೂ ಹೆಚ್ಚು…
ಶಿವಮೊಗ್ಗ ವಿಧಾನ ಪರಿಷತ್ ಚುನಾವಣೆ ಬಿಜೆಪಿ ಅಭ್ಯರ್ಥಿ ಡಿ ಎಸ್ ಅರುಣ್ ಜಯಭೇರಿ
ಶಿವಮೊಗ್ಗ : ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಇಂದು ಘೋಷಣೆಯಾಗಿದ್ದು, ಬಿಜೆಪಿ ಅಭ್ಯರ್ಥಿ ಡಿ.ಎಸ್. ಅರುಣ್ 400 ಮತಗಳ ಅಂತರದಿಂದ ಭರ್ಜರಿ ಜಯಭೇರಿ ಭಾರಿಸಿದ್ದಾರೆ. ಇಂದು ಮುಂಜಾನೆ ಸಹ್ಯಾದ್ರಿ ಕಾಲೇಜಿನಲ್ಲಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ನೇತೃತ್ವದಲ್ಲಿ ಸ್ಟ್ರಾಂಗ್ ರೂಮ್ ತೆರೆದು ಮತ ಎಣಿಕೆ ಆರಂಭಿಸಲಾಯಿತು. 11:30ರ ಸುಮಾರಿಗೆ ಫಲಿತಾಂಶ ಘೋಷಣೆಯಾಗಿದ್ದು, ಅರುಣ್ ಮೊದಲ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ್ದಾರೆ. ಈ ಮೂಲಕ ರಾಜ್ಯದ ಹಿರಿಯ ರಾಜಕಾರಣಿ ಡಿ.ಹೆಚ್. ಶಂಕರಮೂರ್ತಿ ಅವರ ಪುತ್ರ ತಮ್ಮ ಮೊದಲ ಚುನಾವಣೆಯ ಗೆಲುವಿನಿಂದ…
ಶಿವಮೊಗ್ಗದ ಟಿಪ್ಪುನಗರದಲ್ಲಿ ಕೋಟಿ ರೂ ಮೌಲ್ಯದ ಶ್ರೀಗಂಧ ಪತ್ತೆ : ಆರೋಪಿ ಸೈಯದ್ ಅಪ್ಸರ್ ವಶಕ್ಕೆ
ಶಿವಮೊಗ್ಗದ ಟಿಪ್ಪುನಗರದಲ್ಲಿ ನಿನ್ನೆ ಸುಮಾರು ಒಂದು ಸಾವಿರ ಕೆಜಿ ತೂಕದ, ಅಂದಾಜು ಕೋಟಿ ರೂ ಬೆಲೆಬಾಳುವ ಭಾರೀ ಶ್ರೀಗಂಧವನ್ನು ಅರಣ್ಯ ಹಾಗೂ ಪೊಲೀಸ್ ಇಲಾಖೆ ದಾಳಿಯಲ್ಲಿ ವಶಪಡಿಸಿಕೊಂಡಿದೆ. ಅರಣ್ಯ ಇಲಾಖೆಗೆ ದೊರೆತ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಡಿಸಿಎಫ್ ಶಂಕರ್ ಹಾಗೂ ಇತರೆ ಅಧಿಕಾರಿಗಳು,, ಪೊಲೀಸ್ ಇಲಾಖೆಯ ಪ್ಸ್ಪ ಪ್ರಬಾರ ಡಿವೈಎಸ್ ಪಿ, ತುಂಗಾನಗರ ಇನ್ಸ್ ಸ್ಪೆಕ್ಟರ್ ದೀಪಕ್ ಅವರ ತಂಡ ಕೈ ಜೋಡಿಸಿ ದಾಳಿ ನಡೆಸಿದಾಗ ಈ ಶ್ರೀಗಂಧ ಪತ್ತೆಯಾಗಿದೆ. ಟಿಪ್ಪುನಗರ ಸರಹದ್ದಿನ ಅಂಬೇಡ್ಕರ್…
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ವಿಧಿವಶ :
ರಾಷ್ಟ್ರ ಕವಿ ಕುವೆಂಪು ಅವರ ಸೊಸೆ, ಪೂರ್ಣಚಂದ್ರ ತೇಜಸ್ವಿ (84) ಅವರ ಪತ್ನಿ ರಾಜೇಶ್ವರಿ ತೇಜಸ್ವಿ ಅವರು ಇಂದು ಬೆಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೂಡಿಗೆರೆಯ ಹ್ಯಾಂಡ್ ಪೋಸ್ಟ್ ನಲ್ಲಿ ವಾಸವಾಗಿದ್ದ ರಾಜೇಶ್ವರಿ ತೇಜಸ್ವಿ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದ ಕಾರಣ ಬೆಂಗಳೂರಿಗೆ ಆಗಮಿಸಿದ್ದರು.ಕಳೆದ ನಾಲ್ಕು ದಿನಗಳಿಂದ ನಗರದ ರಾಜಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ. ಪತಿ ಪೂರ್ಣಚಂದ್ರ ತೇಜಸ್ವಿ ನಿಧನದ ಬಳಿಕ ಮೂಡಿಗೆರೆಯ ಹ್ಯಾಂಡ್ ಪೋಸ್ಟ್ ತೋಟದ…
ಸಿನಿಮೀಯ ರೀತಿಯಲ್ಲಿ ಸರಗಳ್ಳನನ್ನು ಬೆನ್ನತ್ತಿ ಹಿಡಿದ ಶಿವಮೊಗ್ಗದ ಟ್ರಾಫಿಕ್ ಪೊಲೀಸ್ ಮುನೇಶಪ್ಪ
ಶಿವಮೊಗ್ಗ: ಪ್ರಾಣದ ಹಂಗು ತೊರೆದು ಸರಗಳ್ಳನನ್ನು ಬಂಧಿಸುವಲ್ಲಿ ಪಶ್ಚಿಮ ಸಂಚಾರ ಪೊಲೀಸ್ ಠಾಣಾ ಸಿಬ್ಬಂದಿ ವಿ.ಹೆಚ್. ಮುನೇಶಪ್ಪ ಯಶಸ್ವಿಯಾಗಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ನಿನ್ನೆ ಮಧ್ಯಾಹ್ನ ಸಮಯದಲ್ಲಿ ಉಷಾ ನರ್ಸಿಂಗ್ ಹೋಂ ಬಳಿ ತಾಯಿ ಮತ್ತು ಮಗಳು ಬಸ್ ಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ಯುವಕರು ಯುವತಿಯ ಕತ್ತಿನಲ್ಲಿದ್ದ ಸರಕ್ಕೆ ಕೈಹಾಕಿದ್ದಾರೆ. ಯುವತಿ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಾಗ ಕೈಯಲ್ಲಿದ್ದ ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದ್ದಾರೆ. ಆಗ, ಯುವತಿ…
ಜಿಂಕೆ ಭೇಟೆಯಾಡಿ ಮಾಂಸ ತಯಾರಿಸುತ್ತಿದ್ದ ಇಬ್ಬರ ಬಂಧನ :
ಸಾಗರ: ಅಕ್ರಮವಾಗಿ ಜಿಂಕೆಯನ್ನು ಬೇಟೆಯಾಡಿ ಮಾಂಸ ತಯಾರಿಸುತ್ತಿದ್ದುದನ್ನು ಅರಣ್ಯಾಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಿರುವ ಘಟನೆ ನಡೆದಿದೆ. ಸಾಗರ ತಾಲೂಕಿನ ಉಳ್ಳೂರು ಗ್ರಾಮ ಪಂಚಾಯತಿ ಬಳಸಗೋಡು ಗ್ರಾಮದಲ್ಲಿ ಜಿಂಕೆ ಮಾಂಸ ಸಮೇತ ಆರೋಪಿಗಳನ್ನು ಬಂದಿಸಲಾಗಿದೆ. ಸಾಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ. ಮೋಹನಕುಮಾರ ಹಾಗೂ ಸಾಗರ ACF ಶ್ರೀಧರ್ ಮತ್ತು RFO ಪ್ರಮೋದ್ ರವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಸುಂದರಮೂರ್ತಿ ತಂಡ ನೇತೃತ್ವದಲ್ಲಿ ದಾಳಿ ನಡೆಸಿದಾಗ ಅಕ್ರಮವಾಗಿ ಜಿಂಕೆಯನ್ನು ಬೇಟೆಯಾಡಿ ಮಾಂಸ…
ಪ್ರೀತಿಸಿದ ಹುಡುಗಿಯ ಮನೆ ಮುಂದೆ ವಿಷ ಕುಡಿದು ಆಸ್ಪತ್ರೆಗೆ ಸೇರಿದ ಪಾಗಲ್ ಪ್ರೇಮಿ.!! ಪ್ರೇಮ್ ಕಹಾನಿ ಮೆ ಪಾಯಿಸನ್ ಸ್ಟೋರಿ !!!
ಹೊಸನಗರ : ಎಂಟು ವರ್ಷದ ಪ್ರೀತಿಯನ್ನು ಪ್ರಿಯತಮೆ ನಿರಾಕರಿಸಿದ್ದಕ್ಕೆ ಯುವತಿಯ ಮನೆಯ ಮುಂದೆಯೇ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ನಡೆದಿದೆ. ಯುವಕನ ವರ್ತನೆಗೆ ರೋಸತ್ತು,ಬೇಸರವಾಗಿ ಯುವತಿಯ ತಾಯಿ ಹೊಸನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಖಾಸಗಿ ಬ್ಯಾಂಕ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಯುವಕನಿಗೆ 8 ವರ್ಷದ ಹಿಂದೆ ಜಯನಗರ ಯುವತಿಯೊಂದಿಗೆ ಪ್ರೀತಿ ಹುಟ್ಟಿದೆ. ಆರಂಭದಲ್ಲಿ ಇಬ್ವರಿಗೂ ಚೆನ್ನಾಗಿದ್ದ ಪ್ರೀತಿ ಕಾಲಕ್ರಮೇಣ ಯುವತಿಗೆ ಬೇಸರವೆನಿಸಿದೆ. ಯುವಕನ ವಿಪರೀತಿ ಕುಡಿತ ಹಾಗೂ ಆತನ ಇತರೆ ಚಟುವಟಿಕೆಗಳಿಗೆ ಯವತಿ ರೋಸತ್ತಿ…
ಕಾರಿನಲ್ಲಿ ಆಂಧ್ರದಿಂದ ಶಿವಮೊಗ್ಗ ಸಾಗಿಸುತ್ತಿದ್ದ 21 ಕೆ.ಜಿ ಗಾಂಜಾ ವಶಕ್ಕೆ: ನಾಲ್ವರ ಬಂಧನ
ಶಿವಮೊಗ್ಗ: ಆಂಧ್ರದಿಂದ ಶಿವಮೊಗ್ಗಕ್ಕೆ ಸಾಗಿಸಲಾಗುತ್ತಿದ್ದ 21 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆದಿರುವ ತುಂಗಾ ನಗರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ನಗರಕ್ಕೆ ಗಾಂಜಾ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರ ಕಾರ್ಯಾಚರಣೆ ನಡೆದಿದೆ. ಶಿವಮೊಗ್ಗ ತಾಲೂಕಿನ ಹಾಲಲಕ್ಕವಳ್ಳಿ ಗ್ರಾಮದ ಬಳಿ ಪೊಲೀಸರು ದಾಳಿ ನಡೆಸಿದ್ದಾರೆ. ಇನ್ನೋವಾ ಕಾರಿನಲ್ಲಿ ಗಾಂಜಾವನ್ನು ಶಿವಮೊಗ್ಗಕ್ಕೆ ತರಲಾಗುತ್ತಿತ್ತು. ಕಾರಿನಲ್ಲಿದ್ದ ದೌಲತ್ ಅಲಿಯಾಸ್ ಗುಂಡು, ಮುಜೀಬ್ ಖಾನ್ ಅಲಿಯಾಸ್ ಬ್ರಸ್ಟ್, ಶೋಯೆಬ್ ಅಲಿಯಾಸ್ ಚೂಡಿ ಹಾಗೂ ಜಪ್ರುಲ್ಲಾ ಎಂಬುವರನ್ನು ಬಂಧಿಸಲಾಗಿದೆ. ಗಾಂಜಾ ಮೌಲ್ಯವು ಅಂದಾಜು 6…