ಜಿಲ್ಲಾ ಸುದ್ದಿ:
ರಿಪ್ಪನ್‌ಪೇಟೆ ಸಮೀಪದ ಗಾಳಿಬೈಲು ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ – ಚಿರತೆ ಹಿಡಿಯಲು ಅರಣ್ಯ ಅಧಿಕಾರಿಗಳಿಂದ ಬೋನ್ ಫಿಕ್ಸ್|leopard
ರಿಪ್ಪನ್ ಪೇಟೆ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೆಂಚನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಳಿಬೈಲು ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಚಿರತೆ ಪ್ರತಿಕ್ಷವಾಗಿದ್ದು ಗ್ರಾಮಸ್ಥರು ಭಯಭೀತರಾಗಿದ್ದರು. ಚಿರತೆ ಪ್ರತ್ಯಕ್ಷ ಸುದ್ದಿ ತಿಳಿದ ಅರಸಾಳು ವಲಯ ಅರಣ್ಯ ಅಧಿಕಾರಿಗಳು ಇಂದು ಸ್ಥಳ ಪರಿಶೀಲನೆ ನಡೆಸಿ ಚಿರತೆ ಹಿಡಿಯಲು ಗಾಳಿಬೈಲಿನಲ್ಲಿ ಬೋನ್ ಫಿಕ್ಸ್ ಮಾಡಿದ್ದಾರೆ. ರಿಪ್ಪನ್ ಪೇಟೆ ಸುತ್ತಮುತ್ತ ಗ್ರಾಮಗಳಲ್ಲಿ ಚಿರತೆಗಳು ಪ್ರತ್ಯಕ್ಷವಾಗುತ್ತಿವೆ : ಕಳೆದ ನಾಲ್ಕು ದಿನಗಳ ಹಿಂದೆ ರಿಪ್ಪನ್ ಪೇಟೆ- ತೀರ್ಥಹಳ್ಳಿ ರಾಜಹೆದ್ದಾರಿ ಸಮೀಪದ ಮಳವಳ್ಳಿ…
ಹೃದಯಘಾತದಿಂದ 28ರ ಹರೆಯದ ಗೃಹಿಣಿ ಅಪಮೃತ್ಯು|heart attack
ಪುನೀತ್ ರಾಜ್‍ಕುಮಾರ್ ಹೃದಯಾಘಾತದಿಂದ ಮರಣ ಹೊಂದಿದ ನಂತರದಲ್ಲಿ ರಾಜ್ಯದಲ್ಲಿ ಅತಿ ಕಿರಿ ವಯಸ್ಸಿನಲ್ಲೇ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನೆಲ್ಲುಂಡೆಯ ಗ್ರಾಮದ ಗೃಹಿಣಿ ಸುಪ್ರೀತಾ(28) ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ನೆಲ್ಲುಂಡೆಯ ರವೀಂದ್ರ ಮತ್ತು ಸುಧಾ ದಂಪತಿಗಳ ಪುತ್ರಿ 28ರ ಹರೆಯದ ಸುಪ್ರೀತಾ ಅಲ್ಪ ಕಾಲದ ಅನಾರೋಗ್ಯದಲ್ಲಿದ್ದು ಗುರುವಾರ ಬೆಳಗಿನ ಜಾವ ಹೃದಯಾಘಾತದಿಂದ ಕೊನೆ ಉಸಿರೆಳೆದಿದ್ದಾರೆ. ಸುಪ್ರೀತಾರವರು ಕಳೆದ ನಾಲ್ಕು ವರ್ಷದ ಹಿಂದೆ ಕೊಡೂರಿನ ಆದರ್ಶ ಎಂಬವರೊಂದಿಗೆ ವಿವಾಹವಾಗಿದ್ದರು. ಪಟ್ಟಣದ ಶಾರದಾ…
ಹೆದ್ದಾರಿಪುರ ಗ್ರಾಪಂ ಅಧ್ಯಕ್ಷರಾಗಿ ಸುಮಿತ್ರಮ್ಮ ಅವಿರೋಧ ಆಯ್ಕೆ|heddaripura
ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹೆದ್ದಾರಿಪುರ ಗ್ರಾ.ಪಂ. ಅಧ್ಯಕ್ಷರಾಗಿ ಸುಮಿತ್ರಮ್ಮ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವಿಶ್ವಾಸ ನಿರ್ಣಯದಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಸುಮಿತ್ರಮ್ಮ ರವರನ್ನು ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಯಾಗೆ ಹೊಸನಗರ ತಾಲೂಕ್ ಅಕ್ಷರ ದಾಸೋಹ ಅಧಿಕಾರಿ ನಾಗರಾಜ್ ಪಾಲ್ಗೊಂಡಿದ್ದರು. ಹೆದ್ದಾರಿಪುರ ಗ್ರಾಪಂ ನೂತನ ಅಧ್ಯಕ್ಷೆ ಸುಮಿತ್ರಮ್ಮ ರವರಿಗೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ,ಕೆರೆಹಳ್ಳಿ- ಹುಂಚಾ ಹೋಬಳಿ ಶಕ್ತಿ ಕೇಂದ್ರದ ಅಧ್ಯಕ್ಷ ಎಂ ಬಿ ಮಂಜುನಾಥ್ ,ಮುಖಂಡರಾದ ಗಿರೀಶ್ ,ಸತೀಶ್…
ರಿಪ್ಪನ್‌ಪೇಟೆಯಲ್ಲಿ ಹಾನಗಲ್ ಕುಮಾರೇಶ್ವರ ರಥಯಾತ್ರೆಗೆ ಅದ್ದೂರಿ ಸ್ವಾಗತ|Viraagi
ರಿಪ್ಪನ್‌ಪೇಟೆ : ಹಾನಗಲ್ ಶ್ರೀ ಗುರುಕುಮಾರೇಶ್ವರ ಶಿವಯೋಗಿಗಳ ಕುರಿತು ಜನವರಿ ೧೨ ರಂದು ಬಿಡುಗಡೆಯಾಗಲಿರುವ ವಿರಾಟಪುರ ವಿರಾಗಿ ಚಲನಚಿತ್ರಕ್ಕೆ ಸಂಬಂಧಿಸಿದಂತೆ ಶ್ರೀ ಕುಮಾರೇಶ್ವರ ರಥ ಯಾತ್ರೆ ನಾಡಿನ ವ್ಯಾಪ್ತಿ ಸಂಚರಿಸುತ್ತಿದ್ದು ಇಂದು ಅನಂದಪುರ ಮಾರ್ಗವಾಗಿ ರಥವು ರಿಪ್ಪನ್‌ಪೇಟೆಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಸಾಗರ ರಸ್ತೆಯ ಒಕ್ಕಲಿಗರ ಸಮುದಾಯ ಭವನದ ಬಳಿ ಅದ್ದೂರಿಯಾಗಿ ಸ್ವಾಗತಿಸಿ ಬೈಕ್ ರ‍್ಯಾಲಿ ಮೂಲಕ ವಿನಾಯಕ ವೃತ್ತದ ಮೂಲಕ ಭೂಪಾಳಂ ಚಂದ್ರಶೇಖರಯ್ಯ ಸಬಾಭವನಕ್ಕೆ ಕರೆ ತರಲಾಯಿತು. ಭೂಪಾಳಂ ಚಂದ್ರಶೇಖರಯ್ಯ ಸಬಾಭವನದಲ್ಲಿ ಹತ್ತು ನಿಮಿಷದ ಹಾನಗಲ್ ಕುಮಾರೇಶ್ವರ…
ಅಂತರ್ ವಿಶ್ವವಿದ್ಯಾಲಯದ ವಾಲಿಬಾಲ್ ಪಂದ್ಯಾವಳಿಗೆ ಅರಸಾಳಿನ ನಮಿತಾ ಹೆಗಡೆ ಆಯ್ಕೆ|volleyball
ರಿಪ್ಪನ್ ಪೇಟೆ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ದಕ್ಷಿಣ ವಿಭಾಗದ ಅಂತರ್ ರಾಜ್ಯ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ತಂಡದಲ್ಲಿ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಅರಸಾಳು ಗ್ರಾಮದ ನಮಿತಾ ಹೆಗಡೆ ಆಯ್ಕೆಯಾಗಿದ್ದಾರೆ. ಡಿಸೆಂಬರ್ 27 ರಿಂದ 31 ರವರೆಗೆ ಕೇರಳದ ಕೊಟ್ಟಾಯಂ ನ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದಲ್ಲಿ ನಡೆಯುವ ಅಂತರ್ ವಿಶ್ವವಿದ್ಯಾಲಯ ವಾಲಿಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಅರಸಾಳು ಗ್ರಾಮದ ನಿವಾಸಿಗಳಾದ ಸತೀಶ್ ಹೆಗ್ಡೆ ಮತ್ತು ಐಶ್ವರ್ಯ ದಂಪತಿಗಳ ಪುತ್ರಿಯಾದ ನಮಿತಾ ಹೆಗ್ಡೆ ಪ್ರಸ್ತುತ ಮಂಗಳೂರಿನ ಕೆನರಾ…
IPL Auction ನೆನಪಿಸುವಂತೆ ನಡೆದ ಹೆದ್ದಾರಿಪುರ ಪ್ರೀಮಿಯರ್ ಲೀಗ್ ಆಟಗಾರರ ಹರಾಜು ಪ್ರಕ್ರಿಯೆ….!!!!!!!
ಹೆದ್ದಾರಿಪುರ: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕ್ರಿಕೆಟ್ ಪ್ರೀಮಿಯರ್ ಆಯೋಜನೆ ಗರಿಗೆದರತೊಡಗಿವೆ. ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರದಲ್ಲಿ ಎರಡನೇ ಆವೃತ್ತಿಯ ಹೆದ್ದಾರಿಪುರ ಪ್ರೀಮಿಯರ್ ಲೀಗ್(HPL) ಕ್ರಿಕೆಟ್ ಟೂರ್ನಿ ಆಯೋಜನೆಗೆ ಈಗ ಭರ್ಜರಿ ಚಾಲನೆ ಸಿಕ್ಕಿದ್ದು, ಭಾನುವಾರ ವೃತ್ತಿಪರ ಶೈಲಿಯಲ್ಲಿ ಐಪಿಎಲ್ ಹರಾಜು ನೆನಪಿಸುವಂತೆ ಹೆದ್ದಾರಿಪುರ ಪ್ರೀಮಿಯರ್ ಲೀಗ್ ಆಟಗಾರರ ಹರಾಜು ನಡೆದಿದೆ. ಎರಡನೇ ಆವೃತ್ತಿಯ ಹೆದ್ದಾರಿಪುರ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 12 ತಂಡಗಳು ಪಾಲ್ಗೊಳ್ಳುತ್ತಿದ್ದು,…
ಕಲಿಕಾ ಹಬ್ಬವು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿ|GJC
ರಿಪ್ಪನ್ ಪೇಟೆ : ಮಕ್ಕಳ ಕಲಿಕೆ ಮೇಲೆ ಕೊರೊನಾ ಮಹಾಮಾರಿಯಿಂದ ದುಷ್ಪಪರಿಣಾಮ ಉಂಟಾಗಿತ್ತು. ಕಲಿಕೆಯನ್ನು ಫಲಪ್ರದಗೊಳಿಸಲು ಶಿಕ್ಷಣ ಇಲಾಖೆಯ ಅನೇಕ ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ ಶೈಕ್ಷಣಿಕ ಕಾರ್ಯ ಚಟುವಟಿಕೆಗಳನ್ನು ನೂತನ ಶೈಲಿಯಲ್ಲಿ ರೂಪಿಸುತ್ತಾ ಬಂದಿದೆ. ಸದ್ಯ ಕಲಿಕಾ ಹಬ್ಬ ಯೋಜನೆ ರೂಪಿಸುವ ಮೂಲಕ ಮಕ್ಕಳ ಕಲಿಕೆ ಸಹಾಯಕವಾಗುವ ನಿಟ್ಟಿನಲ್ಲಿ ಕಾರ್ಯ ಯೋಜನೆ ಹಮ್ಮಿಕೊಂಡಿದೆ ಎಂದು ಶಿವಮೊಗ್ಗ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಪರಮೇಶ್ವರಪ್ಪ ಹೇಳಿದರು. ಪಟ್ಟಣದ ಸರ್ಕಾರಿ ಪಿಯು ಕಾಲೇಜಿನ ಪ್ರೌಢ ಶಾಲೆಯಲ್ಲಿ…
ನಾಳೆ(21-12-2022) ರಿಪ್ಪನ್‌ಪೇಟೆಗೆ ಹಾನಗಲ್ ಕುಮಾರೇಶ್ವರ ಮಹಾಸ್ವಾಮಿಯವರ ರಥ ಆಗಮನ|viratapura viraagi
ರಿಪ್ಪನ್‌ಪೇಟೆ : ಡಿಸೆಂಬರ್ 21ರ ಬುಧವಾರ ಬೆಳಿಗ್ಗೆ 10 ಗಂಟೆಗೆ ಹಾನಗಲ್ಲು ಕುಮಾರೇಶ್ವರ ಮಹಾಸ್ವಾಮಿಗಳ ಜೀವನ ಕಥೆ ಆಧಾರಿತ ಚಲನ ಚಿತ್ರದ ಪ್ರಚಾರಾರ್ಥ ಕುಮಾರೇಶ್ವರ ರಥಯಾತ್ರೆ ಪಟ್ಟಣಕ್ಕೆ ಆಗಮಿಸಲಿದೆ ಎಂದು ಮೂಲೆಗದ್ದೆ ಮಠದ ಶ್ರೀಗಳಾದ ಅಭಿನವ ಚನ್ನಬಸವ ಮಹಾಸ್ವಾಮಿಗಳು ಹೇಳಿದರು. ಪಟ್ಟಣದಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಅವರು ವಿನಾಯಕ ವೃತ್ತದಲ್ಲಿ ಹಾನಗಲ್ಲು ಕುಮಾರೇಶ್ವರ ಮಹಾಸ್ವಾಮಿಗಳ ಜೀವನ ಕಥೆ ಆಧಾರಿತ ಚಲನಚಿತ್ರದ ಪ್ರಚಾರಾರ್ಥ ಸಾರ್ವಜನಿಕರಿಗೆ ಟೀಸರ್ ಪ್ರದರ್ಶನ ಇರುತ್ತದೆ.ಈ ರಥಯಾತ್ರೆಯ ಜೊತೆಗೆ ಹಲವಾರು ಗಣ್ಯ ವ್ಯಕ್ತಿಗಳು, ಸಮಾಜದ ಧುರೀಣರು ಭಾಗವಹಿಸಲಿದ್ದಾರೆ….
ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ ಬೊಮ್ಮಾಯಿ – ಆರ್ ಎಂ ಮಂಜುನಾಥ್ ಗೌಡ|DKS
ತೀರ್ಥಹಳ್ಳಿ : ಕರ್ನಾಟಕ ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ ಬೊಮ್ಮಾಯಿ ಯಾಗಿದ್ದು,ಕೇಂದ್ರ ಮತ್ತು ರಾಜ್ಯ ಸರ್ಕಾರ ಜನ ವಿರೋಧಿ ಚಟುವಟಿಕೆಗಳ ಜೊತೆಗೆ ತನ್ನ ತಪ್ಪುಗಳನ್ನು ಮತ್ತು ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕೆಪಿಸಿಸಿ ನಾಯಕರಾದ ಡಿ ಕೆ ಶಿವಕುಮಾರ್ ಅವರ ಶಿಕ್ಷಣ ಸಂಸ್ಥೆಯ ಮೇಲೆ ದಾಳಿ ನೆಡೆಸಿದ್ದಾರೆ ಎಂದು ಸಹಕಾರ ವಿಭಾಗದ ಸಂಚಾಲಕರಾದ ಆರ್ ಎಂ ಮಂಜುನಾಥ್ ಗೌಡ ಹೇಳಿದರು. ಕರ್ನಾಟಕ ರಾಜ್ಯ ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ರವರ ಶಿಕ್ಷಣ ಸಂಸ್ಥೆಯ ಮೇಲೆ ರಾಜಕೀಯ ದುರುದ್ದೇಶದಿಂದ…
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು : ಎಂ ವೀರಭದ್ರಪ್ಪ
ರಿಪ್ಪನ್‌ಪೇಟೆ : ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಪ್ರತಿಭೆಗಳಿದ್ದರೂ ಸಹ ಅವಕಾಶದ ಕೊರತೆಯಿಂದ ವಂಚಿತರಾಗುವುದನ್ನು ತಪ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆದುಕೊಂಡು ಉನ್ನತ ಮಟ್ಟದ ಅಧಿಕಾರಿಯಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸಬೇಕು ಎಂದು ಹೊಸನಗರ ತಾಲೂಕ್ ನಿಕಟಪೂರ್ವ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ವೀರಭದ್ರಪ್ಪ ಹೇಳಿದರು. ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ತಳಲೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ 59 ನೇ ವರ್ಷದ…