ಜಿಲ್ಲಾ ಸುದ್ದಿ:
ಪ್ರಸನ್ನ ಭಟ್ ರವರ ಅಂತಿಮ ದರ್ಶನಕ್ಕೆ ಹೊಸನಗರದಲ್ಲಿ ಭಾರಿ ಸಂಖ್ಯೆಯಲ್ಲಿ ಜನ – ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ|procession
ಶಿವಮೊಗ್ಗ ಜಿಲ್ಲೆಯ ಸಂಸದ ಬಿ ವೈ ರಾಘವೇಂದ್ರ ಅವರ ಫೋಟೊಗ್ರಾಫರ್ ಪ್ರಸನ್ನ ಭಟ್ ಅವರ ಪಾರ್ಥಿವ ಶರೀರದ ಮೆರವಣಿಗೆ ಮಾಡಿ, ಬೈಕ್ ರಾಲಿ ನಡೆಸಲಾಯಿತು. ಹೊಸನಗರದ ಪಟ್ಟಣಕ್ಕೆ ಪಾರ್ಥಿವ ಶರೀರ ತಲುಪುತ್ತಿದ್ದಂತೆ ಅವರ ಸ್ನೇಹಿತರು, ಬಿಜೆಪಿ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಹೊಸನಗರ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ಬಳಿಕ ನೆಹರು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪ್ರಸನ್ನ ಭಟ್ಟರವರ ಪಾರ್ಥಿವ ಶರೀರವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ,ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ, ಬಿಜೆಪಿ ಮುಖಂಡರಾದ ಗುರುಮೂರ್ತಿ,…
ಸಾಗರದ ಮನೆಯೊಂದರಲ್ಲಿ ಬೆಂಕಿ ಅವಘಡ – ಯುವಕರ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ|fire
ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಎಸ್.ಎನ್. ವೃತ್ತದಲ್ಲಿರುವ ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ ಅನಾಹುತ ಉಂಟಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಈ ಅನಾಹುತ ಸಂಭವಿಸಿದೆ. ಸಾಗರದ ಮಾರ್ಕೆಟ್ ರಸ್ತೆಯ ಶಿವಪ್ಪ ನಾಯಕ ವೃತ್ತದ ಇರುವ ಮನೆಯಲ್ಲಿ ಈ ಬೆಂಕಿ ಅನಾಹುತವಾಗಿದೆ. ಮನೆಯಲ್ಲಿ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ತಕ್ಷಣ ಬಂದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ಮಹಡಿಯಲ್ಲಿ ಇದ್ದ ಮನೆಯಲ್ಲಿ ಈ ಅವಘಡ ಸಂಭವಿಸಿದ್ದು, ಯುವಕರು ಜೀವದ ಹಂಗು…
ಹೊಸನಗರ ತಾಲೂಕ್ ಒಕ್ಕಲಿಗರ ಸಂಘ ರಾಜ್ಯಕ್ಕೆ ಮಾದರಿ : ಆರಗ ಜ್ಞಾನೇಂದ್ರ|araga
ರಿಪ್ಪನ್‌ಪೇಟೆ : ಸಮಾಜದ ಶ್ರೇಯೋಭಿವೃದ್ದಿಗೆ ಶ್ರಮಿಸುವ ಮೂಲಕ ಹೊಸನಗರ ತಾಲೂಕ್ ಒಕ್ಕಲಿಗ ಸಂಘ ರಾಜ್ಯಕ್ಕೆ ಮಾದರಿಯಾಗಿದೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಪಟ್ಟಣದ ವಿಶ್ವಮಾನವ ಸಭಾ ಭವನದಲ್ಲಿ ಹೊಸನಗರ ತಾಲ್ಲೂಕು ಒಕ್ಕಲಿಗರ ಸಂಘ ಆಯೋಜಿಸಿದ್ದ ಸಂಸ್ಥಾಪಕ ಆಡಳಿತ ಮಂಡಳಿ ಮತ್ತು ಮಾಜಿ ನಿರ್ದೇಶಕರಿಗೆ ಬೀಳ್ಕೋಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಒಕ್ಕಲಿಗ ಸಮುದಾಯದ ಶಕ್ತಿಯನ್ನು ಬಲಪಡಿಸಲು ಆ ಕಾಲದಲ್ಲಿಯೇ ಹೊಸನಗರ ತಾಲೂಕಿನ ಒಕ್ಕಲಿಗ ಸಂಘ ಅಸ್ತಿತ್ವಕ್ಕೆ ಬಂದು ಅನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು…
ರಿಪ್ಪನ್‌ಪೇಟೆ : ಕಳಪೆ ರಸ್ತೆ ಕಾಮಗಾರಿ ಕಂಡು ಸಿಡಿಮಿಡಿಗೊಂಡ ಶಾಸಕ ಹರತಾಳು ಹಾಲಪ್ಪ |Ripponpet
ರಿಪ್ಪನ್‌ಪೇಟೆ: ಇಲ್ಲಿನ ವಿನಾಯಕ ನಗರದ ದುರ್ಗಾ ಪರಮೇಶ್ವರಿ ದೇವಸ್ಥಾನದ ರಸ್ತೆ ಮತ್ತು ಬಾಕ್ಸ್ ಚರಂಡಿ ಕಾಮಗಾರಿಗೆ 35 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುತ್ತಿರುವ ಕಾಮಗಾರಿ ಕಳಪೆ ಗುಣಮಟ್ಟದಲ್ಲಿ ಮಾಡಲಾಗುತ್ತಿದೆ ಎಂದು ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಸಿಡಿಮಿಡಿಗೊಂಡು ತರಾಟೆಗೆ ತೆಗೆದುಕೊಂಡರು. ಇಂದು ಕಾಮಗಾರಿ ನಡೆಯುವ ಸ್ಥಳಕ್ಕೆ ದಿಢೀರ್ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಕೆಲಸಗಾರರ ಬಳಿ ಎಷ್ಟು ಸಿಮೆಂಟ್ ಹಾಕುತ್ತಿದ್ದೀರಾ ? ಎಂದು ಕೇಳಿದಾಗ ತಡವರಿಸಿ ಕೆಲಸಗಾರ 10 ಚೀಲ ಎಂದು…
ತೀರ್ಥಹಳ್ಳಿ ಪಟ್ಟಣದ ಕುರುವಳ್ಳಿಯಲ್ಲಿ ಆನೆ ಹಾವಳಿ..! ಸಿಸಿಟಿವಿ ದೃಶ್ಯಾವಳಿ : ಅರಣ್ಯಾಧಿಕಾರಿಗಳಿಂದ ಡ್ರೋನ್ ಕ್ಯಾಮೆರಾ ಬಳಸಿ ಕಾರ್ಯಾಚರಣೆ|thirthahalli
ತೀರ್ಥಹಳ್ಳಿ : ಪಟ್ಟಣದ ವಾರ್ಡ್ 14 ರ ಕುರುವಳ್ಳಿಯಲ್ಲಿ ಇಂದು ಬೆಳಗ್ಗಿನ ಜಾವಾ 3.30 ರ ವೇಳೆಯಲ್ಲಿ ಕಾಡಾನೆಯೊಂದು ಸ್ಥಳೀಯ ನಿವಾಸಿ ಒಬ್ಬರಿಗೆ ಕಾಣಿಸಿಕೊಂಡಿದ್ದು ಆನೆಯ ಹೆಜ್ಜೆ ಗುರುತು ಕೂಡ ಪತ್ತೆಯಾಗಿದೆ. ತಡರಾತ್ರಿ ವ್ಯಕ್ತಿಯೊಬ್ಬರಿಗೆ ಕಾಣಿಸಿಕೊಂಡ ಕಾಡಾನೆಯ ಸಿಸಿಟಿವಿ ದೃಶ್ಯ ಮಾಧ್ಯಮಕ್ಕೆ ಲಭ್ಯವಾಗಿದೆ. ಎರಡು ದಿನಗಳ ಹಿಂದೆ ಶೇಡ್ಗಾರ್, ಕಟ್ಟೆಹಕ್ಲು ಸಮೀಪ ಕಾಣಿಸಿಕೊಂಡಿತ್ತು ಎಂದು ಹೇಳಲಾಗುತ್ತಿದ್ದೂ ಅದೇ ಆನೆ ಈ ಕಡೆ ಬಂದಿರಬಹುದು ಎಂದು ಊಹಿಸಲಾಗುತ್ತಿದೆ. ರಾಷ್ಟಿಯ ಹೆದ್ದಾರಿ 169 ರ ತೀರ್ಥಹಳ್ಳಿ-ಕೊಪ್ಪ- ಶೃಂಗೇರಿ ಮಾರ್ಗದಲ್ಲಿರುವ ಕುರುವಳ್ಳಿ…
ಶಿವಮೊಗ್ಗದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ – ಹಲವೆಡೆ ಭೇಟಿ : ಮೂರು ದಿನಗಳ ಜಿಲ್ಲಾ ಪ್ರವಾಸ|shimoga
ಮೂರು ದಿನಗಳ ಕಾಲ ಶಿವಮೊಗ್ಗ ಜಿಲ್ಲಾ ಪ್ರವಾಸದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಮೊದಲ ದಿನವಾದ ಇಂದು ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ್ಯ ಪ್ರಮುಖರೊಂದಿಗೆ ಸಭೆ ನಡೆಸಿದ ಬಳಿಕ ಅನಾರೋಗ್ಯದಿಂದ ಮೃತಪಟ್ಟ ಆರ್‌ಎಸ್‌ಎಸ್ ಪ್ರಮುಖ ದಿನೇಶ್ ಪೈ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಗರದ ಹೊನ್ನಾಳಿ ರಸ್ತೆಯಲ್ಲಿರುವ ಶುಭಶ್ರೀ ಕಲ್ಯಾಣ ಮಂಟಪದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ 50 ಜನರ ಪ್ರಮುಖರ ಸಭೆ ನಡೆದಿದೆ. ಸಭೆ ಮುಗಿಸಿದ ನಂತರ ಮೋಹನ್…
ಬಿಗ್ ಬಾಸ್ ಕನ್ನಡ ಫೈನಲ್ ನಲ್ಲಿ ಶಿವಮೊಗ್ಗ ಜಿಲ್ಲೆಯ ಇಬ್ಬರು ಕಂಟೆಸ್ಟೆಂಟ್ – ವಿನ್ನರ್ ಯಾರಾಗ್ತಾರೆ…????|BIG BOSS
ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 9 ರ ಫೈನಲ್ ಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಮತ್ತು ನಾಳೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ಅದರಲ್ಲೂ ಈ ಬಾರಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಇಬ್ಬರು ಟಾಪ್ 5 ನಲ್ಲಿ ಇದ್ದಾರೆ. ದಿವ್ಯ ಉರುಡುಗ ಹಾಗೂ ರಾಕೇಶ್ ಅಡಿಗ ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾಗಿದ್ದು ದಿವ್ಯ ಉರುಡುಗ ಕಳೆದ ಸೀಸನ್ ನಲ್ಲಿಯೂ ಫೈನಲಿಸ್ಟ್ ಆಗಿದ್ದರು. ಇನ್ನು ರಾಕೇಶ್ ಅಡಿಗ ಓಟಿಟಿ ಸೀಸನ್ 1 ರಲ್ಲಿ ಇದ್ದು…
ಹೊಸನಗರ : ಬಿದನೂರಿನ ಮಾಷುಂಷಾ ವಲಿಯುಲ್ಲಾ ದರ್ಗಾದ ನೂತನ ಸಮಿತಿ ರಚನೆ|nagara
ಹೊಸನಗರ : ತಾಲೂಕಿನ ಬಿದನೂರು ನಗರದಲ್ಲಿರುವ ಇತಿಹಾಸ ಪ್ರಸಿದ್ಧ ಹಝ್ರತ್ ಶೇಖುಲ್ ಮಾಷುಂಷಾ ವಲಿಯುಲ್ಲಾ ದರ್ಗಾದ ಸಮಿತಿಯ ನೂತನ ಅಧ್ಯಕ್ಷರಾಗಿ ಹಾಜಿ ಜಿ ಮಹಮ್ಮದ್ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಇಂದು ನಗರದ ಮಾಷುಂಷಾ ವಲಿಯುಲ್ಲಾ ದರ್ಗಾದ ಆವರಣದಲ್ಲಿ ಜಿಲ್ಲಾ ವಕ್ಪ್ ಅಧಿಕಾರಿ ಮೆಹತಾಬ್ ಸಮ್ಮುಖದಲ್ಲಿ ನಡೆದ ಸಮಿತಿಯ 3 ನೇ ವರ್ಷದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಈ ಸಂಧರ್ಭದಲ್ಲಿ ವಿನಾಯಕ ಉಡುಪ ,ಆರ್ ಎ ಚಾಬುಸಾಬ್,ಸಾಧಿಕ್ ಕಚ್ಚಿಗೆ ಬೈಲ್, ಜಿ ರಹೆಮಾನ್…
ಶರಾವತಿ ಮುಳುಗಡೆ ಸಂತ್ರಸ್ಥರನ್ನು ಒಕ್ಕಲೆಬ್ಬಿಸಲು ಹೊರಟರೆ ರಕ್ತ ಕ್ರಾಂತಿಯಾಗುತ್ತದೆ : ಸದನದಲ್ಲಿ ಗುಡುಗಿದ ಶಾಸಕ ಹರತಾಳು ಹಾಲಪ್ಪ|halappa
ಶರಾವತಿ ಮುಳುಗಡೆ ಸಂತ್ರಸ್ಥರನ್ನು ಒಕ್ಕಲೆಬ್ಬಿಸಲು ಹೊರಟರೆ ರಕ್ತ ಕ್ರಾಂತಿಯಾಗುತ್ತದೆ ಎಂದು ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಸದನದಲ್ಲಿ ಗುಡುಗಿದ್ದಾರೆ. ಅಧಿವೇಶನದಲ್ಲಿ ಮಾತನಾಡುತ್ತಾ ಶರಾವತಿ ಮುಳುಗಡೆ ಸಂತ್ರಸ್ಥರನ್ನು ತೆರವುಗೊಳಿಸಲು ಹೊರಟರೆ ರಕ್ತಕ್ರಾಂತಿಯೊಂದಿಗೆ ಸಾಮೂಹಿಕ ಆತ್ಮಹತ್ಯೆ ನಡೆಯುತ್ತದೆ ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ಗುಡುಗಿದರು. ಲಿಂಗನಮಕ್ಕಿ ಅಣೆಕಟ್ಟೆ ನಿರ್ಮಿಸಲು ಸರ್ಕಾರ ಸುಮಾರು 8 ಸಾವಿರ ಕುಟುಂಬಗಳನ್ನು ರಾತ್ರೋರಾತ್ರಿ ಎಬ್ಬಿಸಿ, ಬೇರೆ ಬೇರೆ ಕಡೆಗಳಲ್ಲಿ ತಂದು ಬಿಟ್ಟಿತು. ಈಗಲೂ ಇವರ ಹೆಸರಿಗೆ…
ರಿಪ್ಪನ್‌ಪೇಟೆಯ ಜುಮ್ಮಾ ಮಸೀದಿ ಸಮೀಪದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಗೆ ಪರವಾನಗಿ ನೀಡದಂತೆ ಮನವಿ|Ripponpet
ರಿಪ್ಪನ್‌ಪೇಟೆ : ಇಲ್ಲಿ ಹೊಸನಗರ ರಸ್ತೆಯ ಮಸೀದಿ ಸಮೀಪದ ಮದ್ಯದಂಗಡಿ ತೆರೆಯಲು ಹುನ್ನಾರ ನಡೆಯುತಿದ್ದು ಅದಕ್ಕೆ ಅನುಮತಿ ನೀಡಬಾರದು ಎಂದು ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ ಸಮಿತಿ ಹಾಗೂ ಪ್ರಗತಿಪರ ಚಿಂತಕರಿಂದ ಅಬಕಾರಿ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಪಟ್ಟಣದ ಹೊಸನಗರ ರಸ್ತೆಯ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಸಮೀಪದ ಖಾಸಗಿ ವಾಣಿಜ್ಯ ಕಟ್ಟಡವೊಂದರಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಹುನ್ನಾರ ನಡೆಯುತಿದ್ದು ಇದರಿಂದ ಪ್ರಾರ್ಥನಾ ಮಂದಿರಕ್ಕೆ ಬರುವ ಭಕ್ತಾಧಿಗಳಿಗೆ ಹಾಗೂ ಸನಿಹದಲ್ಲೇ ಇರುವ ಅರೆಬಿಕ್ ಮದರಸದಲ್ಲಿ…