Headlines

ಭಾರಿ ಮಳೆ ಗಾಳಿಗೆ ಮದರಸದ ಗೋಡೆ ಮೇಲ್ಚಾವಣಿ ಕುಸಿತ|Rain

ಭಾರಿ ಮಳೆ ಗಾಳಿಗೆ ಮದರಸದ ಗೋಡೆ ಮೇಲ್ಚಾವಣಿ ಕುಸಿತ ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ಚುಂಚನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಳಿ ಬೈಲು ಗ್ರಾಮದಲ್ಲಿ ಇರುವ ಐತಿಹಾಸಿಕ ಹಿನ್ನೆಲೆ ಉಳ್ಳಂತಹ ಮದರಸದ ಶಾಲೆಯ ಮೇಲ್ಚಾವಣಿ ಹಾಗೂ ಕಟ್ಟಡವು ಭಾನುವಾರ ಸುರಿದ ಭಾರಿ ಮಳೆಗೆ ಕುಸಿದು ಬಿದ್ದ ಘಟನೆ ನಡೆದಿದೆ. ಪ್ರತಿನಿತ್ಯ ಈ ಮದರಸದಲ್ಲಿ ಹಲವು ಮಕ್ಕಳು ಅರೆಬಿಕ್ ವಿದ್ಯಾಭ್ಯಾಸ ನಡೆಸುತಿದ್ದು ಭಾನುವಾರ ರಜಾ ದಿನವಾಗಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಇತರೆ ದಿನಗಳಲ್ಲಿ ಘಟನೆ ಸಂಭವಿಸಿದ್ದಲ್ಲಿ ಅಹಿತಕರ…

Read More

ರಿಪ್ಪನ್‌ಪೇಟೆ : ಪ್ರೋ ಕಬ್ಬಡಿ ಲೀಗ್ ಗೆ ಆಯ್ಕೆಯಾದ ಯುವ ಪ್ರತಿಭೆಗೆ ಮಾಜಿ ಸಚಿವರಿಂದ ಅಭಿನಂದನೆ|pro kabbadi

ರಿಪ್ಪನ್‌ಪೇಟೆ : ಹತ್ತನೇ ಆವೃತ್ತಿಯ ಪ್ರೋ ಕಬ್ಬಡಿ ಲೀಗ್ ನಲ್ಲಿ ಯುಪಿ ಯೋಧ ತಂಡಕ್ಕೆ ಆಯ್ಕೆಯಾದ ಯುವ ಪ್ರತಿಭೆ ಗಗನ್ ಗೌಡ ರವರಿಗೆ ಮಾಜಿ ಸಚಿವ ಹರತಾಳು ಹಾಲಪ್ಪ ಅಭಿನಂದಿಸಿದ್ದಾರೆ. ಇಂದು ಪಟ್ಟಣದ ಸಮೀಪದ ಹಾಲುಗುಡ್ಡೆ ಗ್ರಾಮದಲ್ಲಿರುವ ಗಗನ್ ಗೌಡ ರವರ ಮನೆಗೆ ತೆರಳಿದ ಮಾಜಿ ಸಚಿವರು ಯುವ ಪ್ರತಿಭೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿ ಶುಭ ಹಾರೈಸಿದರು. ಈ ಸಂಧರ್ಭದಲ್ಲಿ ಮುಖಂಡರಾದ ದೇವೆಂದ್ರಪ್ಪ ಗೌಡ ,ಆನಂದ್ ಮೆಣಸೆ, ನೇಮಾಕ್ಷಿ ಗೌಡ್ರು, ಜಯದೇವ, ರಾಜೇಂದ್ರ ಘಂಟೆ, ಗಣಪತಿ,…

Read More

ಭಾರಿ ಮಳೆಗೆ ತೆಪ್ಪದಗಂಡಿಯಲ್ಲಿ ರಸ್ತೆಗೆ ಅಡ್ಡಲಾಗಿ ಉರುಳಿದ ಮರ – ಸಂಚಾರ ಅಸ್ತವ್ಯಸ್ತ|CKM

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತಿದ್ದು ಬಾಳೆಹೊನ್ನೂರು-ಕಳಸ ಮಾರ್ಗ‌ ಮಧ್ಯೆ ತೆಪ್ಪದಗಂಡಿ ಎಂಬಲ್ಲಿ ರಸ್ತೆಗೆ ಅಡ್ಡಲಾಗಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ತೆಪ್ಪದಗಂಡಿಯಲ್ಲಿ ಭಾರೀ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಈ ವೇಳೆ ಸ್ಥಳೀಯರು ಹಾಗೂ ಯಾತ್ರಿಕರ ನೆರವಿನಿಂದ‌ ಮರ ತೆರವು ಕಾರ್ಯಾಚರಣೆ ನಡೆಸಿ ಕ್ರೇನ್ ಮುಖಾಂತರ ರಸ್ತೆಗೆ ಬಿದ್ದ‌ ಎರಡು ಮರಗಳನ್ನು ತೆರವುಗೊಳಿಸಲಾಯಿತು. ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ಕಂಬಗಳು ನೆಲಕ್ಕುರುಳಿರುವ ಹಿನ್ನಲೆಯಲ್ಲಿ ವಿದ್ಯುತ್ ವ್ಯತ್ಯಯವುಂಟಾಗಿದೆ….

Read More

ರಿಪ್ಪನ್‌ಪೇಟೆಯ ಗವಟೂರಿನಲ್ಲಿ‌ ನೂತನ ಮದ್ಯದಂಗಡಿ ಆರಂಭಕ್ಕೆ ಭಾರಿ ವಿರೋಧ|protest

ರಿಪ್ಪನ್ ಪೇಟೆ : ಪಟ್ಟಣದ ಗವಟೂರಿನಲ್ಲಿ ನೂತನವಾಗಿ ತೆರೆಯಲು ಹೊರಟಿರುವ ಮಧ್ಯದ ಅಂಗಡಿಗೆ ಸಾರ್ವಜನಿಕರಿಂದ ಬಾರಿ ವಿರೋಧ ವ್ಯಕ್ತವಾಗಿದೆ. ಗವಟೂರಿನ ಖಾಸಗಿ ಕಟ್ಟಡ ಒಂದರಲ್ಲಿ ನೂತನವಾಗಿ ಸಿ ಎಲ್ 7 ಮದ್ಯದ ಅಂಗಡಿ ತೆರವಿಗೆ ಸರ್ಕಾರದಿಂದ ಲೈಸೆನ್ಸ್ ದೊರತ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಮದ್ಯದ ಲೋಡ್ ನ್ನು ಇಳಿಸುತ್ತಿದ್ದಾಗ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಮದ್ಯ ತುಂಬಿದ್ದ ವಾಹನವನ್ನು ತಡೆ ಹಿಡಿದಿದ್ದಾರೆ. ಈ ಸಂದರ್ಭದಲ್ಲಿ ತಳ್ಳಾಟ ನೂಕಾಟ ನಡೆದಿದ್ದು ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ…

Read More

ಹತ್ತನೇ ಆವೃತ್ತಿಯ ಪ್ರೋ ಕಬ್ಬಡಿ ಲೀಗ್ ತಂಡಕ್ಕೆ ಆಯ್ಕೆಯಾದ ರಿಪ್ಪನ್‌ಪೇಟೆಯ ಯುವ ಪ್ರತಿಭೆ ಗಗನ್ ಗೌಡ|pro kabbadi

ರಿಪ್ಪನ್‌ಪೇಟೆ : ಪಟ್ಟಣದ ಯುವ ಕ್ರೀಡಾಪಟುವೊಬ್ಬ ಹತ್ತನೇ ಆವೃತ್ತಿಯ ಪ್ರೊ ಕಬಡ್ಡಿಗೆ ಆಯ್ಕೆ ಆಗಿದ್ದು ಮಲೆನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಪಟ್ಟಣದ ಸಮೀಪದ ಹಾಲುಗುಡ್ಡೆ ಗ್ರಾಮದ  ಕಬಡ್ಡಿ ತಾರೆ ಗಗನ್ ಗೌಡ ಅವರು ಪ್ರೊ ಕಬಡ್ಡಿ 10ನೇ ಆವೃತ್ತಿಗೆ ಆಯ್ಕೆ ಆಗಿದ್ದಾರೆ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಎಸ್ ಡಿಎಂ ಉಜಿರೆ ವಿದ್ಯಾಸಂಸ್ಥೆಯಲ್ಲಿ ವ್ಯಾಸಾಂಗ ಮಾಡುತ್ತಿರುವ ಕಬಡ್ಡಿ ಆಟಗಾರ ಗಗನ್ ಗೌಡ ಮುಂದೆ ಬರಲಿರುವ ಪ್ರೊ ಕಬಡ್ಡಿ ಹತ್ತನೇ ಆವೃತಿಯಲ್ಲಿ ಯುಪಿ ಯೋಧ ತಂಡದ ಪರವಾಗಿ ಆಡಲಿದ್ದಾರೆ.  ಮೂಲತಃ…

Read More

ಸೋರುತಿಹುದು ರಿಪ್ಪನ್‌ಪೇಟೆ ಪೊಲೀಸರ ಮನೆಯ ಮಾಳಿಗೆ – ವಸತಿಗೃಹಕ್ಕೆ ಟಾರ್ಪಲ್ ರಕ್ಷಣೆ|Police quarters

ಸೋರುತಿಹುದು ರಿಪ್ಪನ್‌ಪೇಟೆ ಪೊಲೀಸರ ಮನೆಯ ಮಾಳಿಗೆ – ಟಾರ್ಪಲ್ ಗೆ ಮೊರೆ ಹೋದ ಪೊಲೀಸರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿ ಪೋಲಿಸ್ ಸಿಬ್ಬಂದಿಗಳಿಗೆ ಕೋಟ್ಯಾಂತರ ರೂ ವೆಚ್ಚ ಮಾಡಿ ಸರ್ಕಾರ ಪೊಲೀಸ್ ವಸತಿಗೃಹಗಳನ್ನು ನಿರ್ಮಿಸಿದೆ. ಆದರೆ ಸಂಬಂಧಪಟ್ಟವರ ನಿರ್ಲಕ್ಷ್ಯದಿಂದ ಕೋಟ್ಯಂತರ ರೂ ಬೆಲೆಬಾಳುವ ಪೊಲೀಸ್ ವಸತಿ ಗೃಹಗಳು ಮಳೆಯ ನೀರಿನಿಂದ ಸೋರುತ್ತಿದೆ. ಸೋರುತ್ತಿರುವ ವಸತಿ ಗೃಹ ಗಳ  ಮೇಲೆ ಪ್ಲಾಸ್ಟಿಕ್ ಟಾರ್ಪಲ್ ಹಾಕಿಕೊಂಡು ಮಳೆಯ ನೀರಿನಿಂದ ರಕ್ಷಣೆ   ಪಡೆಯುತ್ತಿದ್ದಾರೆ. ನಾಡಿನಲ್ಲಿ…

Read More

ಅರಸಾಳಿನ ಮಾಲ್ಗುಡಿ ರೈಲು ನಿಲ್ದಾಣದಲ್ಲಿ ನಿಲ್ಲದ ಇಂಟರ್‌ಸಿಟಿ ರೈಲು – ಮಲೆನಾಡಿನ ಪ್ರಯಾಣಿಕರಿಗಿಲ್ಲ ಟ್ರೈನ್ ಹತ್ತುವ ಭಾಗ್ಯ……..!!Train

ಅರಸಾಳಿನ ಮಾಲ್ಗುಡಿ ರೈಲು ನಿಲ್ದಾಣದಲ್ಲಿ ನಿಲ್ಲದ ಇಂಟರ್‌ಸಿಟಿ ರೈಲು – ಮಲೆನಾಡಿನ ಪ್ರಯಾಣಿಕರಿಗಿಲ್ಲ ಟ್ರೈನ್ ಹತ್ತುವ ಭಾಗ್ಯ……..!  ರಿಪ್ಪನ್‌ಪೇಟೆ : ಮೈಸೂರು-ಬೆಂಗಳೂರು-ಶಿವಮೊಗ್ಗ-ಸಾಗರ -ತಾಳಗುಪ್ಪ ಮಾರ್ಗದ ಇಂಟರ್ ಸಿಟಿ ರೈಲು ಆರಸಾಳು ರೈಲ್ವೆ ನಿಲ್ದಾಣದಲ್ಲಿ ನಿಲ್ಲದೆ ಇರುವುದರಿಂದ ಮಲೆನಾಡಿನ ಪ್ರಯಾಣಿಕರಿಗೆ ರೈಲು ಹತ್ತಿ ಇಳಿಯುವ ಯೋಗ ಇನ್ನೂ ಕೂಡಿ ಬಂದಿಲ್ಲ. ಈ ಹಿಂದೆ ತಾಳಗುಪ್ಪದಿಂದ ಹೋಗುತ್ತಿದ್ದ ಪ್ಯಾಸೆಂಜರ್ ರೈಲು ಕೊರೋನಾ ಸಂದರ್ಭದಲ್ಲಿ ನಿಲ್ಲಿಸಲಾಗಿದ್ದು ಅದು ಈಗ ಶಿವಮೊಗ್ಗಕ್ಕೆ ಬಂದು ಅಲ್ಲಿಂದ ಭರ್ತಿಯಾಗಿ ಹೋಗುತ್ತಿದೆ ಇದರಿಂದ ಕಡಿಮೆ ಖರ್ಚಿನಲ್ಲಿ ರಾಜಧಾನಿಗೆ…

Read More

ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯ – ಉಬೇದುಲ್ಲಾ ಷರೀಫ್|kenchanal

ರಿಪ್ಪನ್‌ಪೇಟೆ;-ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗಾಗಿ ನಲಿಕಲಿ ಶಿಕ್ಷಣ ಯೋಜನೆಯನ್ನು ಜಾರಿಗೊಳಿಸಲಾಗಿದ್ದು ಕಲಿಕೆಯಲ್ಲಿ ಗುಣಾತ್ಮಕವಾಗಿ ಮಕ್ಕಳ ಬೆಳವಣಿಗೆಯನ್ನಾದರಿಸಿ ಶಿಕ್ಷಣ ನೀಡಿ ಅವರನ್ನು ಪ್ರೋತ್ಸಾಹಿಸುವ ಗುರುತರ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕೆಂಚನಾಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಬೇದುಲ್ಲ ಷರೀಫ್ ಹೇಳಿದರು. ರಿಪ್ಪನ್‌ಪೇಟೆ ಸಮೀಪದ ಕೆಂಚನಾಲ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಅಯೋಜಿಸಲಾದ ಶಿವಮೊಗ್ಗ ಜಿಲ್ಲೆಯ ಆಯ್ದ ಕ್ಲಸ್ಟರ್ ಮಟ್ಟದ ಶಾಲೆಗಳಿಗೆ ಮತ್ತು ಶಿವಮೊಗ್ಗ ನಲಿಕಲಿ ಕ್ರಿಯಾಶೀಲ ತಾರೆಯರು ಸಹಕಾರ ಹಾಗೂ ಬೆಂಗಳೂರು ಮಾರುತಿ ಮೆಡಿಕಲ್ಸ್ ಮಾಲೀಕರಾದ ಮನೋಜ್ ಮೋಟೊ ರವರ ಸಹಕಾರದಿಂದ…

Read More

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಗೌರವ ಡಾಕ್ಟರೇಟ್|BSY

ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಗೌರವ ಡಾಕ್ಟರೇಟ್ ನೀಡಲು ಕೆಳದಿ ಶಿವಪ್ಪನಾಯಕ ಕೃಷಿ ವಿಶ್ವವಿದ್ಯಾನಿಲಯ ತೀರ್ಮಾನಿಸಲಾಗಿದೆ. ಜುಲೈ 21 ರಂದು ( ನಾಳೆ ) ನೆಡೆಯುವ 8ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುವುದು ಎಂದು ವಿಶ್ವವಿದ್ಯಾಲಯದ ಕುಲಪತಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.‌

Read More

ಬಹುತ್ವದ ಉಳಿವಿಗೆ ಪೂರಕವಾದ ಪತ್ರಿಕೋದ್ಯಮ ಇಂದಿನ ಅಗತ್ಯ – ಕಿಮ್ಮನೆ ರತ್ನಾಕರ್|Press Day

ಹೊಸನಗರ,ಜು.೧೯: ಬಹುತ್ವದ ಉಳಿವಿಗೆ ಪೂರಕವಾದ ಪತ್ರಿಕೋದ್ಯಮ ಇಂದಿನ ಅಗತ್ಯವಾಗಿದೆ. ಹಿಂಸೆಯನ್ನು ಪ್ರಚೋದಿಸುವ ವರದಿಗಾರಿಕೆಯಿಂದ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು. ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಹೊಸನಗರ ತಾಲೂಕು ಘಟಕವು ಇಲ್ಲಿನ ಈಡಿಗರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ,ಮಾದಕ ವ್ಯಸನ ಜಾಗೃತ ಅಭಿಯಾನ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರು ರಂಜನೆಗಿಂತ ವಾಸ್ತವಕ್ಕೆ ಆದ್ಯತೆ ನೀಡಬೇಕು. ಪತ್ರಿಕೆ ಒಮ್ಮೆ ಮುದ್ರಣಗೊಂಡು ಹೊರಬಿದ್ದರೆ ಅದು ಸಾರ್ವಜನಿಕ ಸ್ವತ್ತಾಗುತ್ತದೆ…

Read More