ಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಹೇಮಾವತಿ ಸತೀಶ್, ಉಪಾಧ್ಯಕ್ಷರಾಗಿ ಬೆಳ್ಳೂರು ತಿಮ್ಮಪ್ಪ ಆಯ್ಕೆ|belluru

ರಿಪ್ಪನ್‌ಪೇಟೆ : ಸಮೀಪದ ಬೆಳ್ಳೂರು ಗ್ರಾಮ ಪಂಚಾಯಿತಿಗೆ 2ನೇ ಅವಧಿಗೆ ಬುಧವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಹೇಮಾವತಿ ಸತೀಶ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಬೆಳ್ಳೂರು ತಿಮ್ಮಪ್ಪ ಅವಿರೋಧವಾಗಿ ಆಯ್ಕೆಯಾದರು.

ಬೆಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಬಿಸಿಎಂ ‘ಎ’ ಮಹಿಳೆ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು.

ಚುನಾವಣಾಧಿಕಾರಿಯಾಗಿ ನೀರಾವರಿ ಇಲಾಖೆಯ ಅಭಿಯಂತರರಾದ ಶಿವಕುಮಾರ್ ಭಾಗವಹಿಸಿದ್ದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಸಹಕರಿಸಿದರು.

ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿರು

ಈ ಸಂಧರ್ಭದಲ್ಲಿ ಯೋಗೇಶ್ ಬೆಳ್ಳೂರು,  ಹೊಸನಗರ ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಂದ್ರ ಬುಕ್ಕಿವರೆ, ಲಿಂಗಪ್ಪ ಕಳಸೆ, ರಾಮಪ್ಪ ಬರುವೆ, ರವಿ ಬೆಳ್ಳೂರು,ದೇವು ಮತ್ತಿಕೊಪ್ಪ , ಮಂಜುನಾಥ ಬೆಳ್ಳೂರು, ಸತೀಶ್ ಗುಳಿಗುಳಿಶಂಕರ, ಶಿವಪ್ಪ ಅವಡೆ, ಸುನೀಲ್ ವಾಟೇಸರ್ ಮುಂತಾದವರು ಇದ್ದರು

About The Author

Leave a comment