ಜಿಲ್ಲಾ ಸುದ್ದಿ:
ರಿಪ್ಪನ್‌ಪೇಟೆಯ ಗವಟೂರಿನಲ್ಲಿ ನೂತನ ಮದ್ಯದಂಗಡಿ ಆರಂಭಕ್ಕೆ ಭಾರಿ ವಿರೋಧ|protest
ರಿಪ್ಪನ್ ಪೇಟೆ : ಪಟ್ಟಣದ ಗವಟೂರಿನಲ್ಲಿ ನೂತನವಾಗಿ ತೆರೆಯಲು ಹೊರಟಿರುವ ಮಧ್ಯದ ಅಂಗಡಿಗೆ ಸಾರ್ವಜನಿಕರಿಂದ ಬಾರಿ ವಿರೋಧ ವ್ಯಕ್ತವಾಗಿದೆ. ಗವಟೂರಿನ ಖಾಸಗಿ ಕಟ್ಟಡ ಒಂದರಲ್ಲಿ ನೂತನವಾಗಿ ಸಿ ಎಲ್ 7 ಮದ್ಯದ ಅಂಗಡಿ ತೆರವಿಗೆ ಸರ್ಕಾರದಿಂದ ಲೈಸೆನ್ಸ್ ದೊರತ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಮದ್ಯದ ಲೋಡ್ ನ್ನು ಇಳಿಸುತ್ತಿದ್ದಾಗ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಮದ್ಯ ತುಂಬಿದ್ದ ವಾಹನವನ್ನು ತಡೆ ಹಿಡಿದಿದ್ದಾರೆ. ಈ ಸಂದರ್ಭದಲ್ಲಿ ತಳ್ಳಾಟ ನೂಕಾಟ ನಡೆದಿದ್ದು ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ…
ಹತ್ತನೇ ಆವೃತ್ತಿಯ ಪ್ರೋ ಕಬ್ಬಡಿ ಲೀಗ್ ತಂಡಕ್ಕೆ ಆಯ್ಕೆಯಾದ ರಿಪ್ಪನ್‌ಪೇಟೆಯ ಯುವ ಪ್ರತಿಭೆ ಗಗನ್ ಗೌಡ|pro kabbadi
ರಿಪ್ಪನ್‌ಪೇಟೆ : ಪಟ್ಟಣದ ಯುವ ಕ್ರೀಡಾಪಟುವೊಬ್ಬ ಹತ್ತನೇ ಆವೃತ್ತಿಯ ಪ್ರೊ ಕಬಡ್ಡಿಗೆ ಆಯ್ಕೆ ಆಗಿದ್ದು ಮಲೆನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಪಟ್ಟಣದ ಸಮೀಪದ ಹಾಲುಗುಡ್ಡೆ ಗ್ರಾಮದ ಕಬಡ್ಡಿ ತಾರೆ ಗಗನ್ ಗೌಡ ಅವರು ಪ್ರೊ ಕಬಡ್ಡಿ 10ನೇ ಆವೃತ್ತಿಗೆ ಆಯ್ಕೆ ಆಗಿದ್ದಾರೆ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಎಸ್ ಡಿಎಂ ಉಜಿರೆ ವಿದ್ಯಾಸಂಸ್ಥೆಯಲ್ಲಿ ವ್ಯಾಸಾಂಗ ಮಾಡುತ್ತಿರುವ ಕಬಡ್ಡಿ ಆಟಗಾರ ಗಗನ್ ಗೌಡ ಮುಂದೆ ಬರಲಿರುವ ಪ್ರೊ ಕಬಡ್ಡಿ ಹತ್ತನೇ ಆವೃತಿಯಲ್ಲಿ ಯುಪಿ ಯೋಧ ತಂಡದ ಪರವಾಗಿ ಆಡಲಿದ್ದಾರೆ. ಮೂಲತಃ…
ಸೋರುತಿಹುದು ರಿಪ್ಪನ್‌ಪೇಟೆ ಪೊಲೀಸರ ಮನೆಯ ಮಾಳಿಗೆ – ವಸತಿಗೃಹಕ್ಕೆ ಟಾರ್ಪಲ್ ರಕ್ಷಣೆ|Police quarters
ಸೋರುತಿಹುದು ರಿಪ್ಪನ್‌ಪೇಟೆ ಪೊಲೀಸರ ಮನೆಯ ಮಾಳಿಗೆ – ಟಾರ್ಪಲ್ ಗೆ ಮೊರೆ ಹೋದ ಪೊಲೀಸರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿ ಪೋಲಿಸ್ ಸಿಬ್ಬಂದಿಗಳಿಗೆ ಕೋಟ್ಯಾಂತರ ರೂ ವೆಚ್ಚ ಮಾಡಿ ಸರ್ಕಾರ ಪೊಲೀಸ್ ವಸತಿಗೃಹಗಳನ್ನು ನಿರ್ಮಿಸಿದೆ. ಆದರೆ ಸಂಬಂಧಪಟ್ಟವರ ನಿರ್ಲಕ್ಷ್ಯದಿಂದ ಕೋಟ್ಯಂತರ ರೂ ಬೆಲೆಬಾಳುವ ಪೊಲೀಸ್ ವಸತಿ ಗೃಹಗಳು ಮಳೆಯ ನೀರಿನಿಂದ ಸೋರುತ್ತಿದೆ. ಸೋರುತ್ತಿರುವ ವಸತಿ ಗೃಹ ಗಳ ಮೇಲೆ ಪ್ಲಾಸ್ಟಿಕ್ ಟಾರ್ಪಲ್ ಹಾಕಿಕೊಂಡು ಮಳೆಯ ನೀರಿನಿಂದ ರಕ್ಷಣೆ ಪಡೆಯುತ್ತಿದ್ದಾರೆ. ನಾಡಿನಲ್ಲಿ…
ಅರಸಾಳಿನ ಮಾಲ್ಗುಡಿ ರೈಲು ನಿಲ್ದಾಣದಲ್ಲಿ ನಿಲ್ಲದ ಇಂಟರ್‌ಸಿಟಿ ರೈಲು – ಮಲೆನಾಡಿನ ಪ್ರಯಾಣಿಕರಿಗಿಲ್ಲ ಟ್ರೈನ್ ಹತ್ತುವ ಭಾಗ್ಯ……..!!Train
ಅರಸಾಳಿನ ಮಾಲ್ಗುಡಿ ರೈಲು ನಿಲ್ದಾಣದಲ್ಲಿ ನಿಲ್ಲದ ಇಂಟರ್‌ಸಿಟಿ ರೈಲು – ಮಲೆನಾಡಿನ ಪ್ರಯಾಣಿಕರಿಗಿಲ್ಲ ಟ್ರೈನ್ ಹತ್ತುವ ಭಾಗ್ಯ……..! ರಿಪ್ಪನ್‌ಪೇಟೆ : ಮೈಸೂರು-ಬೆಂಗಳೂರು-ಶಿವಮೊಗ್ಗ-ಸಾಗರ -ತಾಳಗುಪ್ಪ ಮಾರ್ಗದ ಇಂಟರ್ ಸಿಟಿ ರೈಲು ಆರಸಾಳು ರೈಲ್ವೆ ನಿಲ್ದಾಣದಲ್ಲಿ ನಿಲ್ಲದೆ ಇರುವುದರಿಂದ ಮಲೆನಾಡಿನ ಪ್ರಯಾಣಿಕರಿಗೆ ರೈಲು ಹತ್ತಿ ಇಳಿಯುವ ಯೋಗ ಇನ್ನೂ ಕೂಡಿ ಬಂದಿಲ್ಲ. ಈ ಹಿಂದೆ ತಾಳಗುಪ್ಪದಿಂದ ಹೋಗುತ್ತಿದ್ದ ಪ್ಯಾಸೆಂಜರ್ ರೈಲು ಕೊರೋನಾ ಸಂದರ್ಭದಲ್ಲಿ ನಿಲ್ಲಿಸಲಾಗಿದ್ದು ಅದು ಈಗ ಶಿವಮೊಗ್ಗಕ್ಕೆ ಬಂದು ಅಲ್ಲಿಂದ ಭರ್ತಿಯಾಗಿ ಹೋಗುತ್ತಿದೆ ಇದರಿಂದ ಕಡಿಮೆ ಖರ್ಚಿನಲ್ಲಿ ರಾಜಧಾನಿಗೆ…
ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯ – ಉಬೇದುಲ್ಲಾ ಷರೀಫ್|kenchanal
ರಿಪ್ಪನ್‌ಪೇಟೆ;-ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗಾಗಿ ನಲಿಕಲಿ ಶಿಕ್ಷಣ ಯೋಜನೆಯನ್ನು ಜಾರಿಗೊಳಿಸಲಾಗಿದ್ದು ಕಲಿಕೆಯಲ್ಲಿ ಗುಣಾತ್ಮಕವಾಗಿ ಮಕ್ಕಳ ಬೆಳವಣಿಗೆಯನ್ನಾದರಿಸಿ ಶಿಕ್ಷಣ ನೀಡಿ ಅವರನ್ನು ಪ್ರೋತ್ಸಾಹಿಸುವ ಗುರುತರ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕೆಂಚನಾಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಬೇದುಲ್ಲ ಷರೀಫ್ ಹೇಳಿದರು. ರಿಪ್ಪನ್‌ಪೇಟೆ ಸಮೀಪದ ಕೆಂಚನಾಲ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಅಯೋಜಿಸಲಾದ ಶಿವಮೊಗ್ಗ ಜಿಲ್ಲೆಯ ಆಯ್ದ ಕ್ಲಸ್ಟರ್ ಮಟ್ಟದ ಶಾಲೆಗಳಿಗೆ ಮತ್ತು ಶಿವಮೊಗ್ಗ ನಲಿಕಲಿ ಕ್ರಿಯಾಶೀಲ ತಾರೆಯರು ಸಹಕಾರ ಹಾಗೂ ಬೆಂಗಳೂರು ಮಾರುತಿ ಮೆಡಿಕಲ್ಸ್ ಮಾಲೀಕರಾದ ಮನೋಜ್ ಮೋಟೊ ರವರ ಸಹಕಾರದಿಂದ…
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಗೌರವ ಡಾಕ್ಟರೇಟ್|BSY
ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಗೌರವ ಡಾಕ್ಟರೇಟ್ ನೀಡಲು ಕೆಳದಿ ಶಿವಪ್ಪನಾಯಕ ಕೃಷಿ ವಿಶ್ವವಿದ್ಯಾನಿಲಯ ತೀರ್ಮಾನಿಸಲಾಗಿದೆ. ಜುಲೈ 21 ರಂದು ( ನಾಳೆ ) ನೆಡೆಯುವ 8ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುವುದು ಎಂದು ವಿಶ್ವವಿದ್ಯಾಲಯದ ಕುಲಪತಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಹುತ್ವದ ಉಳಿವಿಗೆ ಪೂರಕವಾದ ಪತ್ರಿಕೋದ್ಯಮ ಇಂದಿನ ಅಗತ್ಯ – ಕಿಮ್ಮನೆ ರತ್ನಾಕರ್|Press Day
ಹೊಸನಗರ,ಜು.೧೯: ಬಹುತ್ವದ ಉಳಿವಿಗೆ ಪೂರಕವಾದ ಪತ್ರಿಕೋದ್ಯಮ ಇಂದಿನ ಅಗತ್ಯವಾಗಿದೆ. ಹಿಂಸೆಯನ್ನು ಪ್ರಚೋದಿಸುವ ವರದಿಗಾರಿಕೆಯಿಂದ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು. ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಹೊಸನಗರ ತಾಲೂಕು ಘಟಕವು ಇಲ್ಲಿನ ಈಡಿಗರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ,ಮಾದಕ ವ್ಯಸನ ಜಾಗೃತ ಅಭಿಯಾನ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರು ರಂಜನೆಗಿಂತ ವಾಸ್ತವಕ್ಕೆ ಆದ್ಯತೆ ನೀಡಬೇಕು. ಪತ್ರಿಕೆ ಒಮ್ಮೆ ಮುದ್ರಣಗೊಂಡು ಹೊರಬಿದ್ದರೆ ಅದು ಸಾರ್ವಜನಿಕ ಸ್ವತ್ತಾಗುತ್ತದೆ…
ಹೊಸನಗರ ಕೊಡಚಾದ್ರಿ ಕಾಲೇಜಿನ ವಿದ್ಯಾರ್ಥಿಗಳ ಆಕ್ರೋಶಕ್ಕೆ ಮಣಿದ ಪದವಿ ಶಿಕ್ಷಣ ಇಲಾಖೆ – ಪ್ರಾಂಶುಪಾಲರ ಪದಚ್ಯುತಿ!!|kodachadri
ಹೊಸನಗರದ ಕೊಡಚಾದ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರಾಂಶುಪಾಲರ ವಿರುದ್ಧ ಮಂಗಳವಾರ ಪ್ರತಿಭಟನೆ ನಡೆಸಿದರು. ಕೊಡಚಾದ್ರಿ ಕಾಲೇಜಿನ ಪ್ರಾಂಶುಪಾಲ ಅಂಜನ್ ಕುಮಾರ್ ಕಾರ್ಯವೈಖರಿಯನ್ನು ಪ್ರಶ್ನಿಸಿ ಈಚೆಗೆ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಪರಿಶೀಲನೆ ನಡೆಸಲು ಜಂಟಿ ನಿರ್ದೇಶಕರು ಕಾಲೇಜಿಗೆ ಆಗಮಿಸಿದ ವೇಳೆ ವಿದ್ಯಾರ್ಥಿಗಳಿಂದ ದಿಡೀರ್ ಪ್ರತಿಭಟನೆ ನಡೆಯಿತು.ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳು ಪ್ರಾಂಶುಪಾಲರ ವಿರುದ್ದ ಧಿಕ್ಕಾರ ಕೂಗಿದ ಪ್ರಸಂಗವು ನಡೆಯಿತು. ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳಿಗೆ ಟಿಸಿ…
ನಾಳೆ(19-07-2023) ಹೊಸನಗರದಲ್ಲಿ ಪತ್ರಿಕಾ ದಿನಾಚರಣೆ ; ಮಾದಕ ವ್ಯಸನ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ
ಹೊಸನಗರ ಪಟ್ಟಣದ ಆರ್ಯ ಈಡಿಗರ ಸಭಾಭವನದಲ್ಲಿ ಜುಲೈ 19 ರಂದು ಬೆಳಿಗ್ಗೆ 11ಗಂಟೆಯಿಂದ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹೊಸನಗರ ಶಾಖೆಯ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ಮಾದಕ ವ್ಯಸನ ದುಷ್ಪರಿಣಾಮಗಳ ಕುರಿತು ಉಪನ್ಯಾಸ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಅಭಿಯಾನವನ್ನು ಏರ್ಪಡಿಸಲಾಗಿದೆ ಎಂದು ಹೊಸನಗರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಂ.ಕೆ ವೆಂಕಟೇಶ್‌ಮೂರ್ತಿಯವರು ತಿಳಿಸಿದ್ದಾರೆ. ಈ ಕಾರ್ಯಕ್ರಮವನ್ನು ಹೊಸನಗರ-ಸಾಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ಉದ್ಘಾಟಿಸಲಿದ್ದು, ಸಮಕಾಲಿನ ಪತ್ರಿಕಾ ಮಾಧ್ಯಮದ ಜವಾಬ್ದಾರಿಗಳು ಎಂಬ ವಿಷಯವಾಗಿ…
ರಾಜಕಾರಣಿ ಹಾಗೂ ಅಧಿಕಾರಿಗಳ ಗೈರಿನಲ್ಲಿ ಸರ್ಕಾರಿ ಯೋಗ ಮಂದಿರವನ್ನು ಅರೆಬೆತ್ತಲೆಯಾಗಿ ಉದ್ಘಾಟಿಸಿದ ಹೋರಾಟಗಾರ ಟಿ ಆರ್ ಕೃಷ್ಣಪ್ಪ|TRK
ರಾಜಕಾರಣಿ ಹಾಗೂ ಅಧಿಕಾರಿಗಳ ಗೈರಿನಲ್ಲಿ ಸರ್ಕಾರಿ ಯೋಗ ಮಂದಿರವನ್ನು ಅರೆಬೆತ್ತಲೆಯಾಗಿ ಉದ್ಘಾಟಿಸಿದ ಹೋರಾಟಗಾರ ಟಿ ಆರ್ ಕೃಷ್ಣಪ್ಪ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ಗೈರಿನಲ್ಲಿ ಸರ್ಕಾರಿ ಯೋಗ ಮಂದಿರವನ್ನು ಜನಪರ ಹೋರಾಟಗಾರನೊಬ್ಬ ಅರೆ ಬೆತ್ತಲೆಯಾಗಿ ಉದ್ಘಾಟನೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಶಿವಮೊಗ್ಗ ರಸ್ತೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿತಿ ಕೇಂದ್ರದವರು ಅನುಷ್ಟಾನಗೊಳಿಸಿದ 6 ಲಕ್ಷ…