ಅನಧಿಕೃತ ಕಲ್ಲು ಕ್ವಾರೆಗಳ ಮೇಲೆ ದಾಳಿ – ಯಂತ್ರೋಪಕರಣಗಳನ್ನು ಒಡೆದು ಹಾಕಿದ ಅಧಿಕಾರಿ – ಕಾರ್ಮಿಕರ ಆಕ್ರೋಶ
ಆನಂದಪುರ : ಅಕ್ರಮ ಕ್ವಾರೆಗಳ ಮೇಲೆ ದಿಡೀರ್ ದಾಳಿ ನಡೆಸಿದ ಅಧಿಕಾರಿಗಳು ಕಲ್ಲು ಕ್ವಾರೆಗೆ ಉಪಯೋಗಿಸುತಿದ್ದ ಯಂತ್ರೋಪಕರಣಗಳನ್ನು ನಾಶಪಡಿಸಿ ಸಂಬಂದಿಸಿದ ವಾಹನಗಳನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.
ಕಲ್ಲು ತುಂಬಿದ 2 ಲಾರಿ. ಕಲ್ಲುಗಳನ್ನು ಕಟಿಂಗ್ ಮಾಡುವ ಒಂದು ಟ್ಯಾಕ್ಟರ್ ಮಿಷನ್, ಕಲ್ಲು ಕೊಯ್ಯಲು ಉಪಯೋಗಿಸುತ್ತಿದ್ದ ಕಟಿಂಗ್ ಯಂತ್ರೋಪಕರಣಗಳನ್ನು ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿ ಅವಿನಾಶ್ ನಾಶಪಡಿಸಿರುವ ಘಟನೆ ನಡೆದಿದೆ.
ದಿಡೀರ್ ದಾಳಿ ನಡೆಸಿದ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮಲ್ಲಂದೂರಿನಲ್ಲಿ ಒಂದು ಲಾರಿ ದಾಸನಕೊಪ್ಪದಲ್ಲಿ ಒಂದು ಲಾರಿ ವಶಪಡಿಸಿಕೊಂಡು ಚನ್ನಶೆಟ್ಟಿಕೊಪ್ಪದ ಅನಧಿಕೃತ ಕಲ್ಲುಕ್ವಾರೆ ಹಾಗೂ ಜಂಬಾನಿ ಗ್ರಾಮದ ಅನಧಿಕೃತ ಕಲ್ಲು ಕ್ವಾರೆಗಳ ಮೇಲೆ ದಾಳಿ ನಡೆಸಿ ಕಲ್ಲು ಕ್ವಾರಿಯಲ್ಲಿ ಕಲ್ಲು ಕೀಳಲು ಉಪಯೋಗಿಸುತ್ತಿದ್ದ ಯಂತ್ರೋಪಕರಣಗಳನ್ನು ನಾಶಪಡಿಸಿದ್ದಾರೆ ಎನ್ನಲಾಗುತ್ತಿದೆ.
ಅಧಿಕಾರಿಗಳು ಯಂತ್ರೋಪಕರಣಗಳನ್ನು ನಾಶಪಡಿಸುತಿದ್ದಾರೆ ಎಂಬ ವಿಷಯ ತಿಳಿಯುತಿದ್ದಂತೆ ಸುತ್ತಮುತ್ತಲಿನ ಕಲ್ಲು ಕ್ವಾರೆಯ ಮಾಲೀಕರು ಹಾಗೂ ಕಾರ್ಮಿಕರು ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿ ಅವಿನಾಶ್ ರವರನ್ನು ಅಡ್ಡಕಟ್ಟಿ ಈ ರೀತಿ ವಾಹನಗಳನ್ನ ನಾಶ ಮಾಡಬೇಡಿ ಮಾಡಿದ ತಪ್ಪಿಗೆ ದಂಡ ಹಾಕಿ ದಯವಿಟ್ಟು ಈ ರೀತಿ ಯಂತ್ರೋಪಕರಣಗಳನ್ನು ನಾಶ ಮಾಡಬೇಡಿ ಎಂದು ಮನವಿ ಮಾಡಿರುತ್ತಾರೆ.
ಮೇಲಾಧಿಕಾರಿಗಳ ಆದೇಶದಂತೆ ಹಾಗೂ ದೂರಿನನ್ವಯ ದಾಳಿ ಮಾಡಿರುವುದಾಗಿ ಗಣಿ ಅಧಿಕಾರಿ ಅವಿನಾಶ್ ಸ್ಪಷ್ಟವಾಗಿ ತಿಳಿಸಿದ್ದಾರೆ ಈ ಸಂಧರ್ಭದಲ್ಲಿ ಸ್ಥಳದಲ್ಲಿ ಗೊಂದಲಮಯ ವಾತಾವರಣ ಉಂಟಾಗಿತ್ತು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.
ವಶಪಡಿಸಿಕೊಂಡ ವಾಹನಗಳು ಹಾಗೂ ಯಂತ್ರೋಪಕರಣಗಳನ್ನು ಆನಂದಪುರ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.