Shivamogga| ಜಿಲ್ಲಾ ಬ್ರಾಹ್ಮಣ ಮಹಾಸಭಾದ ಕ್ಷಮೆ ಕೇಳಿದ ಬಿರಿಯಾನಿ ಹೌಸ್..!!
ಶಿವಮೊಗ್ಗ : ಬಿರಿಯಾನಿ ಹೌಸ್ ನ ಕರಪತ್ರದಲ್ಲಿ ಮುದ್ರಿತವಾಗಿದ್ದ ಲೋಪದ ಬಗ್ಗೆ ಬಿ.ಹೆಚ್. ರಸ್ತೆಯ ಗಾಯತ್ರಿ ಮಾಂಗಲ್ಯ ಮಂದಿರದ ಆಡಳಿತ ಮಂಡಳಿಗೆ ಚಿಕ್ಕಪೇಟೆ ದೊನ್ನೆ ಬಿರಿಯಾನಿ ಹೌಸ್‌ನ ಅಡಳಿತ ಮಂಡಳಿ ಕ್ಷಮೆ ಕೇಳಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಕ್ಷಮೆಯಾಚಿಸಿದ ಹೋಟೆಲ್ ಮ್ಯಾನೇಜರ್ ಸೋಮಶೇಖರ್ ಚಿಕ್ಕಪೇಟೆ ದೊನ್ನೆಬಿರಿಯಾನಿ ಹೌಸ್ ವತಿಯಿಂದ ನಾವು ಶಿವಮೊಗ್ಗದಲ್ಲಿ ದೊನ್ನೆ ಬಿರಿಯಾನಿ ಹೋಟೆಲ್ ಆರಂಭಿಸಿದ್ದೇವೆ. ಈ ಬಗ್ಗೆ ನಾವು ಪ್ರಕಟಣೆ ನೀಡುವ ಕರಪತ್ರದಲ್ಲಿ ನಮ್ಮ ಹೋಟೆಲ್ ಗಾಯತ್ರಿ ಮಾಂಗಲ್ಯ ಮಂದಿರದ ನೆಲಮಹಡಿಯಲ್ಲಿ ಆರಂಭಿಸಲಾಗಿತ್ತು ಎಂದು ತಪ್ಪಾಗಿ ಮುದ್ರಿತವಾಗಿದೆ.
ಆದರೆ ಅದು, ಗಾಯತ್ರಿ ಮಾಂಗಲ್ಯ ಮಂದಿರದ ಎದುರಿನಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪಕ್ಕದ ಬಿಲ್ಡಿಂಗ್‌ನ ನೆಲಮಹಡಿಯಲ್ಲಿ ಅರಂಭ ಎಂದು ಪ್ರಿಂಟ್ ಆಗಬೇಕಿದ್ದ ಕರಪತ್ರದಲ್ಲಿ ಗಾಯತ್ರಿ ಮಾಂಗಲ್ಯ ಮಂದಿರದ ಬಿಲ್ಡಿಂಗ್ ಎಂದು ತಪ್ಪಾಗಿ ಪ್ರಿಂಟ್ ಆಗಿದೆ. ಎದುರು ಎನ್ನುವ ಪದ ಬಿಟ್ಟು ಹೋಗಿದೆ ಹೀಗಾಗಿ ಇದು ನಮ್ಮ ಕಡೆಯಿಂದ ತಪ್ಪಾಗಿದೆ. ಇದಕ್ಕಾಗಿ ಶಿವಮೊಗ್ಗ ಜಿಲ್ಲಾ ಬ್ರಾಹ್ಮಣರ ಸಂಘಕ್ಕೆ ನಾವು ಕ್ಷಮೆ ಕೇಳುತ್ತೇವೆ ಎಂದರು.
ಇವೆಲ್ಲದರ ಮೊದಲು ಈ ಪ್ರಿಂಟಿಂಗ್ ಮಿಸ್ಟಕ್ ನ 10 ಸಾವಿರ ಕಾಪಿಯಲ್ಲಿ ಗಾಯಿತ್ರಿ ಮಾಂಗಲ್ಯ ಮಂದಿರ ಎಂದು ತಪ್ಪಾಗಿ ಪ್ರಿಂಟ್ ಆಗಿರುವುದು ಜಿಲ್ಲಾ ಬ್ರಾಹ್ಮಣರ ಸಂಘವನ್ನ ಬಡಿದೆಬ್ಬಿಸಿದೆ. ಈ ಕುರಿತು ಕೋಟೆ ಪೊಲೀಸ್ ಠಾಣೆಗೆ ಅರ್ಜಿ ಬರೆದ ಸಂಘ ದೂರು ದಾಖಲಿಸಲು ಮುಂದಾಗಿತ್ತು.
ಆದರೆ ಹೋಟೆಲ್ ಮಾಲೀಕರೆ ತಪ್ಪಾಗಿದೆ. ಈ ಕ್ಷಮೆ ಕೇಳಿ ಹಿಂಬರಹವನ್ನೂ ಬರೆದುಕೊಟ್ಟಿದ್ದರು. ಕೆಲ ಸೂಚನೆಯ ಮೇರೆಗೆ ಇಂದು ಸುದ್ದಿಗೋಷ್ಠಿ ನಡೆಸಿ ಕ್ಷಮೆಯಾಚಿಸಿದ್ದಾರೆ ಪತ್ರಿಕಾಗೋಷ್ಠಿಯಲ್ಲಿ ನಾಗಭೂಷಣ್ ಉಪಸ್ಥಿತರಿದ್ದರು.