ಕ್ರೈಂ ಸುದ್ದಿ:
ಗಾಂಜಾ ಮಾರಾಟ ಮಾಡುತಿದ್ದ ಇಬ್ಬರ ಬಂಧನ | Crime News
ಗಾಂಜಾ ಮಾರಾಟ ಮಾಡುತಿದ್ದ ಇಬ್ಬರ ಬಂಧನ | Crime News ಗಾಂಜಾ ಗಿರಾಕಿಗಳ ಹೆಡೆಮುರಿ ಕಟ್ಟುವಲ್ಲಿ ಶಿವಮೊಗ್ಗ ಪೊಲೀಸರು ಯಶಸ್ವಿಯಾಗಿದ್ದು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ ನಗರದ ಹರ್ಷ ಫರ್ನ್ ಹತ್ತಿರದ ಪುರುದಾಳು ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ಬೈಕ್ ನಿಲ್ಲಿಸಿಕೊಂಡು ಗಾಂಜಾ ಮಾರುತ್ತಿದ್ದಾರೆ ಎಂಬ ಮಾಹಿತಿಯೊಂದು ಪೊಲೀಸರಿಗೆ ಲಭ್ಯವಾಗಿದೆ. ಸರ್ಕಲ್ ಇನ್ಸ್ ಪೆಕ್ಟರ್ ಮಂಜುನಾಥ್ ಬಿ ಮತ್ತು ಶಿವಪ್ರಸಾದ್, ಪಿಎಸ್ಐ ತುಂಗಾನಗರ ಪೊಲೀಸ್ ಠಾಣೆಯ ನೇತೃತ್ವದ ಸಿಬ್ಬಂದಿ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 1) ಮಾಲತೇಶ ಜೆ,…
Anandapura | ಬ್ಯಾಂಕ್ ಮ್ಯಾನೇಜರ್ ನ ಮನೆಯ ಬೀಗ ಮುರಿದು ಲಕ್ಷಾಂತರ ರೂ ಕಳ್ಳತನ
Anandapura | ಬ್ಯಾಂಕ್ ಮ್ಯಾನೇಜರ್ ನ ಮನೆಯ ಬೀಗ ಮುರಿದು ಲಕ್ಷಾಂತರ ರೂ ಕಳ್ಳತನ ಮನೆಯ ಬೀಗ ಮುರಿದು ಲಕ್ಷಾಂತರ ರೂ ಮೌಲ್ಯದ ನಗದು ,ಬಂಗಾರ ಕಳ್ಳತನವಾದ ಘಟನೆ ಸಾಗರ ತಾಲೂಕಿನ ಆನಂದಪುರ ಸಮೀಪದ ಅಂದಾಸುರ ಗ್ರಾಮದಲ್ಲಿ ನಡೆದಿದೆ. ಆನಂದಪುರದ ಕೆನರಾ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಅಬ್ದುಲ್ ಅಹಮದ್ ರವರು ವರ್ಗಾವಣೆಯಾದ ಹಿನ್ನೆಲೆ ಮಣಿಪಾಲ್ ಗೆ ಶನಿವಾರ ಸಂಜೆ ತೆರಳಿದ್ದಾರೆ. ಬುಧವಾರ ಸಂಜೆ ಮನೆಗಳ್ಳತನವಾಗಿರುವ ಬಗ್ಗೆ ಸ್ಥಳೀಯರು ಮಾಲೀಕರಿಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಮನೆಯ ಮಾಲೀಕರು ಆನಂದಪುರಕ್ಕೆ…
Ripponpete | ಅಕ್ರಮ ಮದ್ಯ ಮಾರಾಟದ ಅಡ್ಡೆ ಮೇಲೆ ಪೊಲೀಸರ ದಾಳಿ – ಓರ್ವ ಮಹಿಳೆ ವಶಕ್ಕೆ..!!
ರಿಪ್ಪನ್‌ಪೇಟೆ : ಅಕ್ರಮ ಮದ್ಯ ಮಾರಾಟದ ಅಡ್ಡೆ ಮೇಲೆ ಪೊಲೀಸರ ದಾಳಿ – ಓರ್ವ ವಶಕ್ಕೆ..!! ರಿಪ್ಪನ್‌ಪೇಟೆ : ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ ಹುಂಚ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತಿದ್ದ ಅಂಗಡಿಯ ಮೇಲೆ ಪಿಎಸ್‌ಐ ಪ್ರವೀಣ್ ಎಸ್ ಪಿ ನೇತ್ರತ್ವದ ಸಿಬ್ಬಂದಿಗಳು ದಾಳಿ ನಡೆಸಿದ ಮಹಿಳೆಯೊಬ್ಬರನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ. ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ವರ್ಗಾವಣೆಗೊಂಡಿದ್ದ ಪಿಎಸ್‌ಐ ಪ್ರವೀಣ್ ಪುನಃ ಠಾಣೆಯ ಚಾರ್ಜ್ ವಹಿಸಿಕೊಳ್ಳುತಿದ್ದಂತೆಯೇ ತಮ್ಮ ಕಾರ್ಯಾಚರಣೆ ಮುಂದುವರೆಸಿದ್ದು ಅಕ್ರಮ ಮದ್ಯ ಮಾರಾಟ…
Ripponpete | ಹಿಟ್ ಅಂಡ್ ರನ್ – ಬೈಕ್ ಸವಾರ ಗಂಭೀರ
Ripponpete | ಹಿಟ್ ಅಂಡ್ ರನ್ – ಬೈಕ್ ಸವಾರ ಗಂಭೀರ ರಿಪ್ಪನ್‌ಪೇಟೆ : ಬೈಕ್ ಗೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಕೋಡೂರು ಸಮೀಪದ ಕುಸುಗುಂಡಿಯಲ್ಲಿ ನಡೆದಿದೆ. ಕಡಸೂರು ಗ್ರಾಪಂ ವ್ಯಾಪ್ತಿಯ ಮಳೂರು ಗ್ರಾಮದ ಸೋಮಶೇಖರ್ ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ಕೋಡೂರು ಸಮೀಪದ ಕುಸುಗುಂಡಿ ಬಳಿಯಲ್ಲಿ ಅಪರಿಚಿತ ಕಾರು ಟಿವಿಎಸ್ ಸ್ಟಾರ್ ಸಿಟಿ KA -15 ED 1725 ಬೈಕ್ ಗೆ ಡಿಕ್ಕಿಯಾಗಿ ಪರಾರಿಯಾಗಿದ್ದಾರೆ. ಸ್ಥಳದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬೈಕ್…
ಅಕ್ರಮವಾಗಿ ಸಾಗಿಸುತಿದ್ದ 23 ಗೋವುಗಳನ್ನು ರಕ್ಷಿಸಿದ ಪೊಲೀಸರು
ಅಕ್ರಮವಾಗಿ ಸಾಗಿಸುತಿದ್ದ 23 ಗೋವುಗಳನ್ನು ರಕ್ಷಿಸಿದ ಪೊಲೀಸರು ತೀರ್ಥಹಳ್ಳಿ: ಅಕ್ರಮ ಗೋವುಗಳ ಸಾಕಾಣಿಕೆ ಮಾಡುತಿದ್ದ ಅಡ್ದೇ ಮೇಲೆ ಮಾಳೂರು ಪೊಲೀಸರು ದಾಳಿ ನಡೆಸಿ 23 ಗೋವುಗಳ ರಕ್ಷಣೆ ಮಾಡಿದ್ದಾರೆ. ಮಂಡಗದ್ದೆಯಲ್ಲಿ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 23 ಗೋವುಗಳನ್ನ ರಕ್ಷಣೆ ಮಾಡಲಾಗಿದ್ದು ಗೋವುಗಳನ್ನು ಏಕಕಾಲದಲ್ಲಿ ಮಂಡಗದ್ದೆಯ ಝಬಿ ಎಂಬುವನ ಕೊಟ್ಟಿಗೆಯಲ್ಲಿದ್ದಾಗಲೇ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪಿಎಸ್‌ಐ ಶಿವಾನಂದ್ ನೇತ್ರತ್ವದ ತಂಡ 23 ಗೋವುಗಳನ್ನು ರಕ್ಷಣೆ ಮಾಡಿದೆ. ತೀರ್ಥಹಳ್ಳಿ ತಾಲ್ಲೂಕಿನ ವಿವಿಧ ಹಳ್ಳಿಗಳಿಂದ ಗಂಡುಕರು, ಗೊಡ್ಡು ದನಗಳನ್ನು…
Shivamogga | ಬ್ಯಾಡ್ಮಿಂಟನ್ ಆಡಿ ವಿಶ್ರಾಂತಿಗೆ ಕುಳಿತಲ್ಲೇ ಹೋಯಿತು ಪ್ರಾಣಪಕ್ಷಿ –
ಬ್ಯಾಡ್ಮಿಂಟನ್ ಆಡಿ ವಿಶ್ರಾಂತಿಗೆ ಕುಳಿತಲ್ಲೇ ಹೋಯಿತು ಪ್ರಾಣಪಕ್ಷಿ – ಶಟಲ್ ಬ್ಯಾಡ್ಮಿಂಟನ್ ಆಡಿ ಬಂದು ವಿಶ್ರಾಂತಿಗಾಗಿ ಕುಳಿತಿದ್ದ ಸರ್ಕಾರಿ ಅಧಿಕಾರಿಯೊಬ್ಬರು ಹೃದಯಾಘಾತದಿಂದ ಕುಸಿದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿದೆ. ಮೃತ ಅಧಿಕಾರಿಯನ್ನು ಮಲ್ಲಿಕಾರ್ಜುನ್ (50) ಎಂದು ಗುರುತಿಸಲಾಗಿದೆ. ಅವರು ಡಯಟ್ ಆಫೀಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆಟವಾಡಿ ಬಂದ ಬಳಿಕ ಏಕಾಏಕಿ ಹೃದಯಾಘಾತದಿಂದ ಕುಸಿದು ಸಾವನ್ನಪ್ಪಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಅಧಿಕಾರಿಯ ಸಾವಿಗೆ ಶಿವಮೊಗ್ಗ ಸೈಕಲ್ ಕ್ಲಬ್ನ ಅಧ್ಯಕ್ಷ ಶ್ರೀಕಾಂತ್ ಭಾರದ್ವಾಜ್, ಯೂತ್ ಹಾಸ್ಟೆಲ್…
Crime News | ಗದ್ದೆಯಲ್ಲಿ ಗುತ್ತಿಗೆದಾರನ ಮೃತದೇಹ ಪತ್ತೆ..!!
Crime News | ಗದ್ದೆಯಲ್ಲಿ ಗುತ್ತಿಗೆದಾರನ ಮೃತದೇಹ ಪತ್ತೆ..!! ವ್ಯಕ್ತಿಯೊಬ್ಬರ ಮೃತ ದೇಹವೊಂದು ಗದ್ದೆಯಲ್ಲಿ ದೊರೆಕಿರುವ ಘಟನೆ ಶಿವಮೊಗ್ಗದ ತುಂಗ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಶಿವಮೊಗ್ಗ ಮಹಾನಗರ ಪಾಲಿಕೆಯ ಗುತ್ತಿಗೆದಾರ ಹರಿಗೆಯ ನಿವಾಸಿ ವಾಸು ಎಂದು ಗುರುತಿಸಲಾಗಿದೆ. ತುಂಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಟೊಯೋಟಾ ಶೋ ರೂಂ ಹಿಂಭಾಗದ ಗರುಡ ಲೇಔಟ್ ಬಳಿಯ ಗದ್ದೆಯಲ್ಲಿ ಗುತ್ತಿಗೆದಾರನ ಮೃತ ದೇಹ ಪತ್ತೆಯಾಗಿದ್ದು ಇದು ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ.…
ಮನೆಯ ಹಿಂಭಾಗದ ಅಡಿಕೆ ತೋಟದಲ್ಲಿ ಗಾಂಜಾ ಬೆಳೆ – 2.50 ಲಕ್ಷ ಮೌಲ್ಯದ ಗಾಂಜಾ ಸಮೇತ ಆರೋಪಿ ವಶಕ್ಕೆ
ಮನೆಯ ಹಿಂಭಾಗದ ಅಡಿಕೆ ತೋಟದಲ್ಲಿ ಗಾಂಜಾ ಬೆಳೆ – 2.50 ಲಕ್ಷ ಮೌಲ್ಯದ ಗಾಂಜಾ ಸಮೇತ ಆರೋಪಿ ವಶಕ್ಕೆ ಗಾಂಜಾ ಗಿರಾಕಿಗಳಿಗೆ ಸಿಂಹಸ್ವಪ್ನವಾಗಿರುವ ಡಿವೈಎಸ್ಪಿ ಗಜಾನನ ವಾಮನ ಸುತರ ತೀರ್ಥಹಳ್ಳಿ : ಮನೆಯ ಹಿಂಭಾಗ ಅಡಿಕೆ ತೋಟದಲ್ಲಿ ಗಾಂಜಾ ಗಿಡಗಳನ್ನು ಅಕ್ರಮವಾಗಿ ಬೆಳೆದಿದ್ದ ಆರೋಪಿಯ ಹೆಡೆಮುರಿ ಕಟ್ಟುವಲ್ಲಿ ತೀರ್ಥಹಳ್ಳಿ ಉಪವಿಭಾಗದ ಡಿವೈಎಸ್ಪಿ ಗಜಾನನ ವಾಮನ ಸುತಾರ ನೇತ್ರತ್ವದ ಸಿಬ್ಬಂದಿಗಳ ತಂಡ ಯಶಸ್ವಿಯಾಗಿದೆ. ತೀರ್ಥಹಳ್ಳಿ ತಾಲೂಕಿನ ಹುತ್ತಳ್ಳಿ ಗ್ರಾಮದ ಗುರುಮೂರ್ತಿ ಬಂಧಿತ ಆರೋಪಿಯಾಗಿದ್ದು 2.50000 ಲಕ್ಷ ಮೌಲ್ಯದ ಹಸಿ…
ದರ್ಶನ್ ನಂತಹ ನಿಜ ಜೀವನದ ಖಳನಾಯಕನನ್ನು ಸೃಷ್ಟಿಸಿದ ನಾವೇ ತಪ್ಪಿತಸ್ಥರು – ನಟ ಚೇತನ್ |Dboss-arrest
ದರ್ಶನ್ ನಂತಹ ನಿಜ ಜೀವನದ ಖಳನಾಯಕನನ್ನು ಸೃಷ್ಟಿಸಿದ ನಾವೇ ತಪ್ಪಿತಸ್ಥರು – ನಟ ಚೇತನ್ ಬೆಂಗಳೂರು : ನಿಜ ಜೀವನದಲ್ಲಿ ನಟ ದರ್ಶನ್ ನಂತಹ ಖಳನಾಯಕನನ್ನು ಸೃಷ್ಠಿಸಿದ ನಾವೇ ತಪ್ಪಿತಸ್ಥರು ಎಂಬುದಾಗಿ ನಟ ಚೇತನ್ ಅಹಿಂದಾ ಅವರು ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿರುವಂತ ಅವರು, ನಟ ದರ್ಶನ ಮತ್ತು ಆತನ ಸಹಚರರ ವಿರುದ್ಧ ಕೊಲೆ ಆರೋಪಗಳು ಗಂಭೀರವಾಗಿವೆ. ನಮ್ಮ ರಾಜ್ಯ ಪೊಲೀಸರು ಅದಕ್ಕೆ ಅನುಗುಣವಾಗಿ ತನಿಖೆ ನಡೆಸುತ್ತಾರೆ ಎಂದು ನಾವು ನಂಬುತ್ತೇವೆ ಎಂದಿದ್ದಾರೆ….
ಮದ್ಯ ಸೇವಿಸಿ ವಾಹನ ಚಲಾಯಿಸಿದ ಇಬ್ಬರಿಗೆ ಬಿತ್ತು ಭಾರಿ ದಂಡ | Drunk & Drive
ಮದ್ಯ ಸೇವಿಸಿ ವಾಹನ ಚಲಾಯಿಸಿದ ಇಬ್ಬರಿಗೆ ಬಿತ್ತು ಭಾರಿ ದಂಡ ಸೊರಬ : ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದ ಇಬ್ಬರು ವಾಹನ ಚಾಲಕರಿಗೆ ಮಂಗಳವಾರ ಪ್ರತ್ಯೇಕ ಪ್ರಕರಣದಲ್ಲಿ ಜೆಎಂಎಫ್ ನ್ಯಾಯಾಲಯ ತಲಾ ಹತ್ತು ಸಾವಿರ ದಂಡ ವಿಧಿಸಿದೆ. ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಸುಮಾರಿನಲ್ಲಿ ಸೊರಬ ಪಿಎಸ್ಐ ನಾಗರಾಜ ನೇತೃತ್ವದ ತಂಡ ವಾಹನಗಳ ತಪಾಸಣೆ ವೇಳೆ ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜೆಎಂಎಫ್ ನ್ಯಾಯಾಲಯ ವಿಜೇತ…